ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣಬಲಿಪರಲ್ಲಿತ್ತು: ರಘುರಾಮ ಹೊಳ್ಳ
ಯಕ್ಷಗಾನ ಕಲೆಯ ಕುರಿತ ಅಗಾಧವಾದ ಜ್ಞಾನ ಅವರಲ್ಲಿತ್ತು.
Team Udayavani, Feb 20, 2023, 6:29 PM IST
ಕೊಡಿಯಾಲಬೈಲ್: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಬಲಿಪ ನಾರಾಯಣ ಭಾಗವತರಿಗೆ “ಸಾರ್ವಜನಿಕ ಶ್ರದ್ಧಾಂಜಲಿ’ ಕಾರ್ಯಕ್ರಮ ಶನಿವಾರ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ನುಡಿನಮನ ಸಲ್ಲಿಸಿ, ಬಲಿಪರ ಮತ್ತು ತನ್ನ ಯಕ್ಷಗಾನ ಒಡನಾಟವನ್ನು ಸ್ಮರಿಸಿದರು. ಮಗುವಿನ ಮುಗ್ಧತೆ ಬಲಿಪರಲ್ಲಿತ್ತು. ಭಾಗವತಿಕೆಯ ಹಾಗೂ ಯಕ್ಷಗಾನ ಕಲೆಯ ಕುರಿತ ಅಗಾಧವಾದ ಜ್ಞಾನ ಅವರಲ್ಲಿತ್ತು. ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರದಾಗಿತ್ತು ಎಂದರು.
ಯಕ್ಷಗಾನದ ಹಿರಿಯ ತಲೆಮಾರಿನ ಕೊಂಡಿಯಂತಿದ್ದ ಬಲಿಪ ನಾರಾಯಣ ಭಾಗವತರು ತನ್ನ ಅಸಾಧಾರಣವಾದ ಜ್ಞಾನ ಸಂಪನ್ನತೆಯಿಂದ, ಎಲ್ಲರೊಂದಿಗೆ ಬೆರೆತು ಸಜ್ಜನಿಕೆಯಿಂದ ಕೂಡಿದ ಮಾತುಗಳಿಂದ ಜನಪ್ರೀತಿ ಗಳಿಸಿದ್ದರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಮುಖರಾದ ಪ್ರೊ| ಎಂ.ಬಿ.ಪುರಾಣಿಕ್, ಭುವನಾಭಿರಾಮ ಉಡುಪ, ದಿವಾಣ ಗೋವಿಂದ ಭಟ್, ಡಾ| ಶ್ರುತಕೀರ್ತಿ, ತಮ್ಮ ಲಕ್ಷ ¾ಣ, ಚಂದ್ರಶೇಖರ ಮಯ್ಯ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ಭಾಸ್ಕರ ರೈ ಕುಕ್ಕುವಳ್ಳಿ, ದಯಾನಂದ ಕಟೀಲು, ಜಿ.ಕೆ.ಭಟ್ ಸೆರಾಜೆ, ಸುಧಾಕರ ರಾವ್ ಪೇಜಾವರ, ಪುರುಷೋತ್ತಮ ಭಟ್, ರಾಮಕೃಷ್ಣ ರಾವ್, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಚಂದ್ರಶೇಖರ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.