ಗಾಯಕ ಸೋನು ನಿಗಮ್ ತಂಡದ ಮೇಲೆ ಹಲ್ಲೆಗೆ ಯತ್ನ: ಶಿವಸೇನೆ ಕಾರ್ಯಕ್ರಮದಲ್ಲಿ ಆಗಿದ್ದೇನು?
Team Udayavani, Feb 21, 2023, 10:50 AM IST
ಮುಂಬೈ: ಪ್ರಸಿದ್ದ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಮುಂಬೈನ ಚೆಂಬೂರ್ ನಲ್ಲಿ ನಡೆದ ಕಾರ್ಯಕ್ರಮದ ವೇಲೆ ಅನುಚಿತ ವರ್ತನೆ ತೋರಲಾಗಿದೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು ಸೋನು ಅವರ ತಂಡದವರು ಎಂದು ಹೇಳಲಾದ ವ್ಯಕ್ತಿಯನ್ನು ವೇದಿಕೆಯಿಂದ ಕೆಳಕ್ಕೆ ತಳ್ಳಿರುವುದನ್ನು ತೋರಿಸುತ್ತದೆ.
ಶಿವಸೇನಾ (ಯುಬಿಟಿ) ನಾಯಕ ಪ್ರಕಾಶ್ ಫಾಟರ್‌ಪೇಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋನು ನಿಗಮ್ ಚೆಂಬೂರ್ ಗೆ ಬಂದಿದ್ದರು. ಅವರು ವೇದಿಕೆಯಿಂದ ಕೆಳಗೆ ಹೋಗುತ್ತಿದ್ದಾಗ ಕೆಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
“ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಆ ಸಮಯದಲ್ಲಿ ಅಂಗರಕ್ಷಕರು ಆ ಜನರನ್ನು ತಳ್ಳಲು ಪ್ರಯತ್ನಿಸಿದರು, ಈ ವೇಳೆ ಅಕಸ್ಮಾತಾಗಿ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಳ್ಳಲಾಯಿತು, ಅಪಾಯವೇನೂ ಆಗಿಲ್ಲ” ಎಂದು ಶಿವಸೇನೆ ನಾಯಕ ಪ್ರಕಾಶ್ ಫಾಟರ್‌ಪೇಕರ್ ಹೇಳಿದ್ದಾರೆ.
ಈತನ್ಮಧ್ಯೆ ಫಾಟರ್‌ಪೇಕರ್ ಅವರ ಮಗ ತಮ್ಮ ಮ್ಯಾನೇಜರ್ ನೊಂದಿಗೆ ಅನುಚಿತವಾಗಿ ವರ್ತಿಸಿ, ವೇದಿಕೆಯಿಂದ ಹೊರಹೋಗುವಂತೆ ಹೇಳಿದರು ಎಂದು ಸೋನು ನಿಗಮ್ ಅವರ ತಂಡವು ಆರೋಪಿಸಿದೆ.
“ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಮೊದಲು ಸೋನು ನಿಗಮ್ ಅವರ ಅಂಗರಕ್ಷಕ ಹರಿಯನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದ್ದಾರೆ. ಈ ವೇಳೆ ರಬ್ಬಾನಿ ಖಾನ್ ಕೂಡ ಇದ್ದರು. ಗಲಾಟೆಯಲ್ಲಿ ಅವರು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ಹಲವು ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚೆಂಬೂರಿನ ಝೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.