ಒಮ್ಮೆ ಆತ್ಮ ಮುಟ್ಟಿ ನೋಡಿಕೊಳ್ಳಲಿ..; ಸಿ.ಟಿ.ರವಿ ವಿರುದ್ಧ ಹೆಚ್.ಡಿ.ತಮ್ಮಯ್ಯ ವಾಗ್ದಾಳಿ
Team Udayavani, Feb 21, 2023, 3:41 PM IST
ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಮುಖಂಡ ಹೆಚ್.ಡಿ.ತಮ್ಮಯ್ಯ ವಾಗ್ದಾಳಿ ನಡೆಸಿದ್ದು, ಸಿ.ಟಿ.ರವಿ ಒಮ್ಮೆ ಅವರ ಆತ್ಮವನ್ನು ಮುಟ್ಟಿ ನೋಡಿಕೊಳ್ಳಲಿ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿಯವರು ನನ್ನ ಜೊತೆ ಬಹಳ ವಿಷಯ ಹಂಚಿಕೊಂಡಿದ್ದಾರೆ, ನಾನು ಅವನ್ನೆಲ್ಲಾ ಈಗ ಹೇಳಲ್ಲ. ಅವರು ಪಕ್ಷದಲ್ಲೇ ಇದ್ದು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ. 2004, 2008, 2108ರಲ್ಲಿ ಯಾರ ಹೆಸರೇಳಿಕೊಂಡು ನೀವು ಗೆದ್ದದ್ದು ನೀವು. ಯಡಿಯೂರಪ್ಪ ಹೇಸರು ಹೇಳಿಕೊಂಡು ಗೆದ್ದು, ಈಗ ನೀವು ಲೇವಡಿ ಮಾಡುತ್ತಿರುವುದು ಯಾರನ್ನು ಎಂದು ಪ್ರಶ್ನಿಸಿದರು.
ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಈ ರಾಜ್ಯ ಕಂಡ ಮಹಾನ್ ನಾಯಕರು. ಅವರ ಬಗ್ಗೆ ಮಾತನಾಡಬೇಡಿ ಎಂದು ಅಂದೂ ಹೇಳಿದ್ದೆ, ಇಂದೂ ಹೇಳುತ್ತೇನೆ. ಆ ಮೂರು ಜನದ ಬಗ್ಗೆ ಕೇವಲವಾಗಿ ಏಕೆ ಮಾತನಾಡುತ್ತೀರಿ, ಅವರಿಂದ ನೀವು ಸಹಾಯ ಪಡೆದಿಲ್ಲವೆ? ಅವರಿಂದ ಸಹಾಯ ಪಡೆದಿಲ್ಲ, ಯಡಿಯೂರಪ್ಪನ ಹೆಸರೇಳಿ ಗೆದ್ದಿಲ್ಲ ಎಂದು ಹೇಳಲಿ ನೋಡೋಣ. ಮೊನ್ನೆ ನಿಮ್ಮ ಫಾರ್ಮ್ ಹೌಸ್ ನ ಸಭೆಯಲ್ಲಿ ಕಾರ್ಯಕರ್ತರನ್ನು ಯಾವುದಕ್ಕೆ ಹೋಲಿಸಿದ್ದೀರಾ. ಕತ್ತೆ ಅಡ್ಡೆ ಹೊತ್ಕಂಡು ಹೋಗುತ್ತಿದ್ದರೆ ಕತ್ತೆಗೆ ಗೌರವ ಕೊಡ್ತಾರೆ, ಅಡ್ಡೆಗಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೀರಿ, ನಮ್ಮ ಕಾರ್ಯಕರ್ತರಿಗೂ ಅದೇ ರೀತಿ ಹೇಳಿದ್ದೀರಿ ಎಂದು ಆರೋಪಿಸಿದರು.
ಓರ್ವ ಅಧಿಕಾರಿ, ಗುತ್ತಿಗೆದಾರ ಈ ಊರಿಗೆ ಬರಲು ಸಿದ್ದರಿಲ್ಲ. ನಮ್ಮ ಹಳೇ ನಾಯಕರು ಸಾರ್ವಜನಿಕವಾಗಿ ಬರಲಿ ಉತ್ತರ ನೀಡುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಹೆಚ್.ಡಿ.ತಮ್ಮಯ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.