ಅಪರೂಪದ ಕಲ್ಲು ಹೂವು “ಉಸ್ನೆಯ ಹಿರುಟ’ : ದೇಶದಲ್ಲೇ ಮೊದಲ ಬಾರಿಗೆ ಪತ್ತೆ
ಬಂಟ್ವಾಳದ ಪ್ರಾಧ್ಯಾಪಕರ ಸಂಶೋಧನೆ
Team Udayavani, Feb 23, 2023, 7:42 AM IST
ಬಂಟ್ವಾಳ: ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿನಾಯಕ್ ಕೆ.ಎಸ್. ನೇತೃತ್ವದ ಸಂಶೋಧನ ತಂಡವು ಭಾರತದಲ್ಲೇ ಮೊದಲ ಬಾರಿಗೆ “ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪತ್ತೆಹಚ್ಚಿದೆ.
ಈ ಪ್ರಭೇದವು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದು, 1,500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಉತ್ಪತ್ತಿಯಾಗುತ್ತದೆ. ವಾತಾವರಣ ಮಾಲಿನ್ಯದ ಕಾರಣಕ್ಕೆ ಶೀಘ್ರ ನಶಿಸುತ್ತದೆ. ಮಾಲಿನ್ಯರಹಿತ ಪ್ರದೇಶದಲ್ಲಿ ಕಾಣಸಿಗುತ್ತದೆ.
ಫಿಲಿಫೈನ್ಸ್, ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯ, ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಾಣಸಿಗುವ ಈ ಪ್ರಬೇಧದ ಕುರಿತು ಜರ್ನಲ್ ಆಫ್ ತ್ರಿಟನ್ ಟ್ಯಾಕ್ಸ್ ಎಂಬ ವಿಜ್ಞಾನ ಪತ್ರಿಕೆಯ ಫೆಬ್ರವರಿ ಆವೃತ್ತಿಯಲ್ಲಿ ಡಾ| ವಿನಾಯಕ್ ಅವರ ಲೇಖನ ಪ್ರಕಟಗೊಂಡಿದೆ. ಇದುವರೆಗೆ ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 57 ಹಾಗೂ ಕರ್ನಾಟಕದಲ್ಲಿ 8 ಕಲ್ಲು ಹೂಗಳ ಪ್ರಭೇದಗಳನ್ನು ಗುರುತಿಸಲಾಗಿದೆ.
ಸಂಶೋಧನ ತಂಡದಲ್ಲಿ ಅರ್ಚನಾ ಆರ್. ಮೇಸ್ತ, ಎನ್. ರಾಜೇಶ್ವರಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.