ರಾಜ್ಯ ಕಾಂಗ್ರೆಸ್ ಸದಸ್ಯತ್ವಕ್ಕೆ 1 ಸಾವಿರ ರೂ?
ಏರಿಕೆಯಾಗಲಿದೆ ಕೈ ಸದಸ್ಯತ್ವ ಶುಲ್ಕ
Team Udayavani, Feb 23, 2023, 6:25 AM IST
ಹೊಸದಿಲ್ಲಿ: ನಯಾ ರಾಯಪುರದಲ್ಲಿ ಫೆ.24ರಿಂದ ಕಾಂಗ್ರೆಸ್ ಮಹಾಧಿವೇಶನ ನಡೆಯಲಿರುವಂತೆಯೇ ಪಕ್ಷ ತನ್ನ ಸದಸ್ಯ ಶುಲ್ಕದಲ್ಲಿ ಏರಿಕೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಇದರ ಜತೆಗೆ 2024ರ ಚುನಾವಣೆಗೆ ಅನ್ವಯವಾಗಿ ಪಕ್ಷದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಿದೆ.
ಪಕ್ಷಕ್ಕೆ ಹೆಚ್ಚಿನ ವಿತ್ತೀಯ ಬಲ ತರುವ ನಿಟ್ಟಿಲ್ಲಿ ಸದಸ್ಯ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯತ್ವಕ್ಕಿದ್ದ 100 ರೂ. ಶುಲ್ಕವನ್ನು 1ಸಾವಿರ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವ ಮಾಡಲಾಗಿದೆ. ಎಐಸಿಸಿ ಸದಸ್ಯತ್ವ ಶುಲ್ಕವನ್ನು 3 ಸಾವಿರ ರೂ.ಗಳಿಗೆ ಏರಿಕೆ ಮಾಡಿದ್ದು, ಅಭಿವೃದ್ಧಿ ಶುಲ್ಕವನ್ನು ವಾರ್ಷಿಕ 1ಸಾವಿರ ರೂ.ಗಳಂತೆ 5 ವರ್ಷ ಪಾವತಿಸುವ ನಿಯಮವನ್ನು ರೂಪಿಸಿದೆ.
ಪ್ರಿಯಾಂಕಾಗೆ ಚುನಾವಣೆ: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಮೂಲಕ ಕುಟುಂಬ ರಾಜಕಾರಣದ ಮಣೆ ಕಿತ್ತೂಗೆದು ಪುನರುಜ್ಜೀವನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್, ಈಗ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರ ಆಯ್ಕೆಯಲ್ಲೂ ಬದಲು ಮಾಡಲು ಚಿಂತನೆ ನಡೆಸಲಾಗಿದೆ.
ಕಾಂಗ್ರೆಸ್ನ ಮಾಜಿ ಅಧ್ಯಕ್ಷರು, ಮಾಜಿ ಪ್ರಧಾನಿಗಳು, ಲೋಕಸಭೆ-ರಾಜ್ಯಸಭೆಯಲ್ಲಿ ಪಕ್ಷದ ನಾಯಕರು, ಸಂಸದೀಯ ಪಕ್ಷದ ಅಧ್ಯಕ್ಷರು ಸಮಿತಿಗೆ ನೇರವಾಗಿ ಆಯ್ಕೆಯಾಗುತ್ತಾರೆ. ಆದರೆ ನಾಯಕಿ ಪ್ರಿಯಾಂಕಾ ವಾದ್ರಾ, ಸೋನಿಯಾ ಗಾಂಧಿ ಮಾತ್ರ ಚುನಾವಣೆ ಎದುರಿಸಿಯೇ ಸಮಿತಿಗೆ ಆಯ್ಕೆಯಾಗಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.