ಬೆಕ್ಕುಗಳು ಆಗಾಗಾ ಹುಲ್ಲು ತಿನ್ನುವುದೇಕೆ? ಹುಲ್ಲಿನಿಂದ ಬೆಕ್ಕುಗಳಿಗೆ ಆರೋಗ್ಯ ಲಾಭವಿದೆಯೇ…
ಹೌದು ಈ ಬೆಕ್ಕುಗಳೇಕೆ ಹುಲ್ಲು ತಿನ್ನುತ್ತವೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು?
Team Udayavani, Feb 23, 2023, 12:12 PM IST
ಹುಲಿ ಬೇಟೆಗೆ ಇಳಿದಾಗ ಎಂದೂ ಹುಲ್ಲು ತಿನ್ನುವುದಿಲ್ಲ ಎಂಬ ಆಡು ಮಾತೊಂದಿದೆ. ಆದರೆ ಬಹುತೇಕ ಮಂದಿ ನಮ್ಮ ಮನೆಯ ಅಥವಾ ಸುತ್ತಮುತ್ತ ಅಡ್ಡಾಡುವ ಬೆಕ್ಕು ಆಗಾಗ ಹುಲ್ಲು ತಿನ್ನುವುದನ್ನು ಗಮನಿಸಿರಬಹುದು. ಹೌದು ಈ ಬೆಕ್ಕುಗಳೇಕೆ ಹುಲ್ಲು ತಿನ್ನುತ್ತವೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು?
ಇದನ್ನೂ ಓದಿ:ಆಸ್ಕರ್ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆಯಿತು ʼRRR’
ಬಹುತೇಕ ಸಮಯಗಳಲ್ಲಿ ಬೆಕ್ಕುಗಳು ಆಗಾಗ ಹಲವಾರು ಕಾರಣಗಳಿಗಾಗಿ ಹುಲ್ಲನ್ನು ತಿನ್ನುತ್ತಿರುತ್ತವೆ ಎಂದು ವರದಿ ತಿಳಿಸಿದೆ. ಇದೇನು ತುಂಬಾ ಹೊಸ ವಿಚಾರವೇನಲ್ಲ, ಬೆಕ್ಕುಗಳ ಹೊರತಾಗಿಯೂ ಸಿಂಹ ಹಾಗೂ ಇತರ ವನ್ಯಜೀವಿಗಳು ಕೂಡಾ ಹುಲ್ಲನ್ನು ತಿನ್ನುತ್ತವೆ. ಹುಲ್ಲು ಮನುಷ್ಯನಿಗೆ ಅಹಿತಕರವಾಗಿದ್ದರೂ ಸಹ, ನಿಮ್ಮ ಬೆಕ್ಕು ಹುಲ್ಲು ತಿನ್ನಲು ಆರೋಗ್ಯಕರವಾದ ಕಾರಣಗಳಿವೆ ಎಂಬುದನ್ನು ಮರೆಯಬೇಡಿ!
ಆರೋಗ್ಯಕ್ಕೆ ಲಾಭ:
ಹುಲ್ಲಿನ ರಸದಲ್ಲಿ ಫೋಲಿಕ್ ಆ್ಯಸಿಡ್ ಅಂಶಗಳು ಹೇರಳವಾಗಿದ್ದು, ಇದರಿಂದಾಗಿ ಬೆಕ್ಕುಗಳು ಹುಲ್ಲು ತಿನ್ನುವುದರಿಂದ ಅವುಗಳ ಬೆಳವಣಿಗೆ ಮತ್ತು ಬೆಕ್ಕಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಒಂದು ವೇಳೆ ನಿಮ್ಮ ಬೆಕ್ಕು ಆಗಾಗ ಹುಲ್ಲನ್ನು ತಿನ್ನುತ್ತಿದೆ ಎಂದಾದರೆ ಅದು ತನ್ನ ಜೀರ್ಣಕ್ರಿಯೆ ಅಗತ್ಯತೆ ಮತ್ತು ವಿಟಮಿನ್ ಹೆಚ್ಚಿಸಿಕೊಳ್ಳಲು ಬಯಸುತ್ತಿದೆ ಎಂದೇ ಅರ್ಥಮಾಡಿಕೊಳ್ಳಬೇಕು.
ಕರುಳಿನ ಚಲನೆಗೆ ಸಹಕಾರಿ: ಬೆಕ್ಕುಗಳು ಚರ್ಮ, ಸಣ್ಣ ಗರಿಗಳು, ಮೂಳೆ ಹಾಗೂ ಇತರ ವಸ್ತುಗಳನ್ನು ತಿನ್ನುತ್ತಿರುತ್ತವೆ, ಈ ವಸ್ತುಗಳು ಕೆಲವೊಮ್ಮೆ ಬೆಕ್ಕಿನ ಜೀರ್ಣಾಂಗದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕರುಳಿನ ಚಲನೆಗೆ ಅಡ್ಡಿಯುಂಟಾಗುತ್ತದೆ. ಆಗ ಬೆಕ್ಕಿಗೆ ಹೊಟ್ಟೆ ನೋವು ಬಂದಾಗ ಬೆಕ್ಕುಗಳು ತೆಳುವಾದ ಹುಲ್ಲನ್ನು ತಿನ್ನುವ ಮೂಲಕ ಹೊಟ್ಟೆ ನೋವನ್ನು ಶಮನಮಾಡಿಕೊಳ್ಳುತ್ತವೆ, ಅಗಲವಾದ ಹುಲ್ಲುಗಳು ಬೆಕ್ಕಿನ ಕರುಳಿನ ಚಲನೆಗೆ ಇನ್ನಷ್ಟು ಸಹಾಯಕವಾಗಲಿದೆ ಎಂದು ವರದಿ ವಿವರಿಸಿದೆ.
ಖುಷಿಯೂ ಹೌದು: ಬೆಕ್ಕುಗಳು ಸಾಂದರ್ಭಿಕವಾಗಿ ಹುಲ್ಲು ತಿನ್ನುವುದು ಅವುಗಳಿಗೆ ಖುಷಿಯ ವಿಚಾರವೂ ಹೌದಂತೆ. ಕೆಲವೊಮ್ಮೆ ಪಥ್ಯಕ್ಕಾಗಿ ಹುಲ್ಲನ್ನು ತಿನ್ನುತ್ತವೆ. ಒಂದು ವೇಳೆ ಅವುಗಳು ದೈನಂದಿನ ಆಹಾರವನ್ನು ತಿನ್ನುತ್ತಿವೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಇದರ ಜೊತೆಗೆ ನೀವು ಬೆಕ್ಕುಗಳಿಗೆ ನಾರಿನಾಂಶ ಇರುವ ಆಹಾರವನ್ನು ಹೆಚ್ಚು ನೀಡುವುದು ಕೂಡಾ ನಿಮಗಿರುವ ಮತ್ತೊಂದು ಆಯ್ಕೆಯಾಗಿದೆ.
ಹೊಟ್ಟೆ ನೋವು ನಿವಾರಣೆ: ಬೆಕ್ಕುಗಳು ಹುಲ್ಲನ್ನು ಸಮರ್ಪಕವಾಗಿ ಜೀರ್ಣಿಸಿಕೊಳ್ಳುವ ಕಿಣ್ವಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಬೆಕ್ಕುಗಳು ಉದ್ದೇಶಪೂರ್ವಕವಾಗಿ ಹುಲ್ಲನ್ನು ತಿನ್ನುತ್ತವೆ, ನಂತರ ಅದನ್ನು ವಾಂತಿ ಮಾಡಿ ಹೊರಹಾಕುತ್ತವೆ. ಬೆಕ್ಕುಗಳು ತಮ್ಮ ಜೀರ್ಣಾಂಗದಲ್ಲಿ ತೊಂದರೆ ಕೊಡುವ ಮೂಳೆ, ಚರ್ಮ ಹಾಗೂ ಇತರ ವಸ್ತುಗಳನ್ನು ವಾಂತಿ ಮಾಡಿ ಹೊರಹಾಕುವುದನ್ನು ಗಮನಿಸಿರುತ್ತೀರಿ. ಬೆಕ್ಕುಗಳು ಎಷ್ಟು ಪ್ರಮಾಣದ ಹುಲ್ಲನ್ನು ತಿನ್ನಬೇಕೆಂಬುದನ್ನು ಅವುಗಳೇ ನಿಯಂತ್ರಿಸಿಕೊಳ್ಳುತ್ತವೆ. ಇದರ ಜೊತೆಗೆ ಕೀಟನಾಶಕ ಅಥವಾ ರಾಸಾಯನಿಕ ಲೇಪಿತ ಹುಲ್ಲುಗಳಿಂದ ನಿಮ್ಮ ಬೆಕ್ಕುಗಳನ್ನು ದೂರ ಇರಿಸಲು ಮುಂಜಾಗ್ರತಾ ಕ್ರಮ ವಹಿಸಿದರೆ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ
Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.