ಒಲೆಕ್ಟ್ರಾದಿಂದ ಅತ್ಯಾಧುನಿಕ ಹೈಡ್ರೋಜನ್ ಬಸ್ ನಿರ್ಮಾಣ; ಮಾಲಿನ್ಯ ಮುಕ್ತ ಸಾರಿಗೆಯತ್ತ ಹೆಜ್ಜೆ
Team Udayavani, Feb 23, 2023, 4:04 PM IST
ಬೆಂಗಳೂರು: ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ನ ಅಂಗ ಸಂಸ್ಥೆಯಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (ಒಜಿಎಲ್) ಮುಂದಿನ ಪೀಳಿಗೆಯ ಮಾಲಿನ್ಯಮುಕ್ತ ಸಾರಿಗೆ ವ್ಯವಸ್ಥೆಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಮುಂದಡಿ ಇರಿಸಿದೆ. ರಿಲಯನ್ಸ್ ನೊಂದಿಗೆ ತಾಂತ್ರಿಕ ಸಹಭಾಗಿತ್ವದಲ್ಲಿ ಒಲೆಕ್ಟ್ರಾ ಹೈಡ್ರೋಜನ್ ಬಸ್ ಗಳನ್ನು ರಸ್ತೆಗಿಳಿಸಲಿವೆ.
ಹೈಡ್ರೋಜನ್ ಬಸ್ ಸಾಂಪ್ರದಾಯಿಕ ಸಾರ್ವಜನಿಕ ಸಾರಿಗೆಗೆ ಸಂಪೂರ್ಣವಾಗಿ ಇಂಗಾಲ- ಮುಕ್ತ ಪರ್ಯಾಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ವಾಯುಮಾಲಿನ್ಯ ಮತ್ತು ಹೊರಸೂಸುವಿಕೆಯ ನಕಾರಾತ್ಮಕ ಪರಿಣಾಮಗಳ ಹಿನ್ನೆಲೆಯಲ್ಲಿ, ಓಲೆಕ್ಟ್ರಾ ಹೈಡ್ರೋಜನ್ ಚಾಲಿತ ಬಸ್ಸುಗಳ ಅಭಿವೃದ್ಧಿಯನ್ನು ತ್ವರಿತಗೊಳಿಸವತ್ತ ಮಹತ್ವದ ಹೆಜ್ಜೆ ಇರಿಸಿದೆ. ಇದರಿಂದ ದೇಶದ ಇಂಗಾಲ ಮುಕ್ತ ಹೈಡ್ರೋಜನ್ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಅನುವು ಮಾಡಿಕೊಡಲಿದೆ. ಒಲೆಕ್ಟ್ರಾ ತನ್ನ ಹೈಡ್ರೋಜನ್ ಬಸ್ಸುಗಳ ಮೂಲಕ ರಾಷ್ಟ್ರದ ಪರಿಸರ ಸುಸ್ಥಿರ ಇಂಧನ ಭದ್ರತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
12 ಮೀಟರ್ ಲೋ ಫ್ಲೋರ್ ಬಸ್ ಪ್ರಯಾಣಿಕರಿಗೆ 32 ರಿಂದ 49 ಆಸನಗಳು + ಆಯ್ಕೆಗೆ ತಕ್ಕಂತೆ ಬದಲಿಸಬಹುದಾದ ಒಂದು ಡ್ರೈವರ್ ಆಸನ ಸಾಮರ್ಥ್ಯವನ್ನು ಹೊಂದಿದೆ.
ಒಂದೇ ಹೈಡ್ರೋಜನ್ ಭರ್ತಿಯು ಬಸ್ ಗೆ 400 ಕಿ.ಮೀ ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಶ್ರೇಣಿಯ ವ್ಯಾಪ್ತಿಯಲ್ಲಿ ಹೈಡ್ರೋಜನ್ ತುಂಬಲು ಕೇವಲ 15 ನಿಮಿಷ ತೆಗೆದುಕೊಳ್ಳಲಿದೆ.
ಹೊರ ಸೂಸುವಿಕೆಯ ವಿಷಯಕ್ಕೆ ಬಂದಾಗ, ಈ ಬಸ್ಸುಗಳು ಬಾಲದ (ಟೇಲ್) ಪೈಪ್ ಮೂಲಕ ನೀರನ್ನು ಮಾತ್ರ ಹೊರಹಾಕಲಿದೆ. ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವ್ಯವಸ್ಥೆಗಳನ್ನು ಹಂತ ಹಂತವಾಗಿ ಮುಕ್ತಗೊಳಿಸಲು ಮತ್ತು ಅವುಗಳನ್ನು ಈ ಹಸಿರು ಬಸ್ಸುಗಳೊಂದಿಗೆ ಬದಲಾಯಿಸಲು ಇದು ಸಕಾಲವಾಗಿದೆ.
ಸಿಸ್ಟಮ್ ವಿಷಯಕ್ಕೆ ಬಂದಾಗ, ಟೈಪ್ -4 ಹೈಡ್ರೋಜನ್ ಸಿಲಿಂಡರ್ ಗಳನ್ನು ಬಸ್ ನ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ, ಸಿಲಿಂಡರ್ ಗಳು -20 ರಿಂದ +85 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಒಲೆಕ್ಟ್ರಾ ಮುಂದಿನ ಒಂದು ವರ್ಷದೊಳಗೆ ಈ ಬಸ್ಸುಗಳನ್ನು ವಾಣಿಜ್ಯ ವಹಿವಾಟಿಗೆ ಲಭ್ಯವಾಗಿಸುವ ಗುರಿಯನ್ನು ಹೊಂದಿದೆ.
ಒಲೆಕ್ಟ್ರಾ ಗ್ರೀನ್ ಟೆಕ್: 2000 ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿ) – ಎಂಇಐಎಲ್ ಗ್ರೂಪ್ ನ ಭಾಗವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ತಯಾರಿಸುವಲ್ಲಿ ಪ್ರವರ್ತಕವಾಗಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕೋನ್ ರಬ್ಬರ್ / ಕಾಂಪೋಸಿಟ್ ಇನ್ಸುಲೇಟರ್ ತಯಾರಿಕೆಯ ದೇಶಿಯ ಕಂಪನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.