ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಡಾ| ಹಿಮ್ಮಡಿ; ದಳವಾಯಿ
ನಾಸ್ತಿಕರೊಳಗೆ ಸ್ವಾತಿಕ ಬದುಕನ್ನು ಬದುಕಿದವರು ಡಾ.ವೈ.ಬಿ.ಹಿಮ್ಮಡಿಯವರು
Team Udayavani, Feb 23, 2023, 6:26 PM IST
ರಾಯಬಾಗ: ಒಬ್ಬ ಅಧ್ಯಾಪಕನನ್ನು ಆತನ ವಿದ್ಯಾರ್ಥಿಗಳು ಮಾತ್ರ ಸರಿಯಾಗಿ ಬಲ್ಲವರಾಗಿರುತ್ತಾರೆ. ಹಿಮ್ಮಡಿಯವರ ವಿದ್ಯಾರ್ಥಿ ಬಳಗ ನೋಡಿದರೆ, ಅವರ ಬೋಧನೆ ಎಂತಹದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ಡಾ| ಯಲ್ಲಪ್ಪ ಹಿಮ್ಮಡಿ ಅವರ ಸೇವಾ ನಿವೃತ್ತಿ ಪ್ರಯುಕ್ತ ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಂದ ವಿಚಾರ ಸಮರ್ಪಣೆ, ಗುರುವಿಗೆ ವಂದನೆ, ಶಿಷ್ಯರಿಗೆ ಅಭಿನಂದನೆ ಹಾಗೂ ಡಾ|ಹಿಮ್ಮಡಿ ದಂಪತಿಗೆ ಅಭಿನಂದನೆ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿ, ವೈಚಾರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರನ್ನು ಕ್ರಿಯಾಶೀಲಗೊಳಿಸಿದವರು ಡಾ.ಹಿಮ್ಮಡಿಯವರು.
ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ, ಮಾರ್ಗದರ್ಶಕರಾಗಿದ್ದಾರೆ. ಕನ್ನಡ ಪ್ರಾಧ್ಯಾಪಕ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿದ್ದಾರೆಂದರು. ಇತಿಹಾಸ ತಜ್ಞ ಡಾ.ಶಿವರುದ್ರ ಕಲ್ಲೋಳಿಕರ ಮಾತನಾಡಿ, ಸಮಾಜಕ್ಕೆ ದಿಕ್ಸೂಚಿಯಾಗಬಲ್ಲ ವಿದ್ಯಾರ್ಥಿಗಳನ್ನು ರೂಪಿಸಿರುವ ಕೀರ್ತಿ ಹಿಮ್ಮಡಿಯವರಿಗೆ ಸಲ್ಲುತ್ತದೆ. ಅವರ ತೀಕ್ಷ್ಣ, ನಿಷ್ಠುರ ವಿಮರ್ಶೆಯಿಂದ ಅನೇಕರಿಗೆ ಇರುಸು ಮುರುಸು ಕೂಡ ಆಗಿರುವುದು ಕಾಣುತ್ತೇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಬೆಳವಿ ಚ.ಚ. ವಿರಕ್ತಮಠದ ಶರಣಬಸವ ದೇವರು ಮಾತನಾಡಿ, ಡಾ.ಹಿಮ್ಮಡಿಯವರ ಬರವಣಿಗೆ ಓದಿಕೊಂಡು, ಎಲ್ಲೆಡೆ ಪ್ರಸಾರ ಮಾಡುವುದರ ಮೂಲಕ ತಾವು ಕೂಡ ವೈಚಾರಿಕ ಮತ್ತು ಪ್ರಗತಿಪರ ಎಂದು ಗುರ್ತಿಸಿಕೊಂಡಿದ್ದೇವೆ. ಹಿಮ್ಮಡಿಯವರ ಕೃತಿಗಳ ಮೌಲ್ಯಗಳನ್ನು ಗುರ್ತಿಸುವ ಕೆಲಸ ನಡೆಯದಿರುವುದು ಅತ್ಯಂತ ಖೇದಕರ ಎನ್ನಿಸುತ್ತದೆ. ಚನ್ನಬಸವಣ್ಣನವರ ವಚನಗಳಲ್ಲಿರುವ ಬಂಡಾಯ ಪ್ರಜ್ಞೆಯನ್ನು ಗುರ್ತಿಸಿದವರು ಡಾ| ಹಿಮ್ಮಡಿಯವರು. ನಾಸ್ತಿಕರೊಳಗೆ ಸ್ವಾತಿಕ ಬದುಕನ್ನು ಬದುಕಿದವರು ಡಾ.ವೈ.ಬಿ.ಹಿಮ್ಮಡಿಯವರು.ಅವರಿಗೆ ವಿದ್ಯಾರ್ಥಿ ಬಳಗ ನೀಡಿರುವ ಈ ಅಭಿನಂದನೆ ಸಮರ್ಪಣೆಗಿಂತ ದೊಡ್ಡ ಪ್ರಶಸ್ತಿ ಬೇರೆ ಯಾವುದು ಇಲ್ಲವೆಂದು ಹೇಳಿದರೆ ತಪ್ಪಲ್ಲ ಎಂದರು.
ಡಾ| ಹಿಮ್ಮಡಿ ಅಭಿನಂದನಾ ಸಮಿತಿ ಅಧ್ಯಕ್ಷ ಸದಾಶಿವ ದೇಸಿಂಗೆ ಅಧ್ಯಕ್ಷತೆ ವಹಿಸಿದ್ದರು. ಡಾ| ಕೆ.ಎನ್.ದೊಡ್ಡಮನಿ, ಡಾ| ವಿಜಯಮಾಲಾ ನಾಗನೂರಿ, ರಾಜು ಸನದಿ, ಈರಣ್ಣ ಬೆಟಗೇರಿ, ಅನಿತಾ ಲಂಗೋಟಿ ಅವರು ವಿದ್ಯಾರ್ಥಿಗಳು ಕಂಡಂತೆ ಡಾ.ಹಿಮ್ಮಡಿ ಮತ್ತು ಅವರ ಸಾಹಿತ್ಯ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಡಾ.ಯಲ್ಲಪ್ಪ ಹಿಮ್ಮಡಿ ದಂಪತಿಯನ್ನು ಸತ್ಕರಿಸಲಾಯಿತು. ವಿಜಯಪೂರದ ಕ.ರಾ. ಮಹಿಳಾ ವಿ.ವಿ. ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ, ಬಿ.ಆರ್.ನಾಯ್ಕರ, ಪ್ರೊ.ಎಲ್.ವಿ.ಪಾಟೀಲ, ಡಾ.ಮಂಜುಳಾ ಸವದತ್ತಿ, ಫಿರ್ದೋಶ ಮುಶ್ರಫ್, ಡಾ.ಅರುಣ ಕಾಂಬಳೆ, ರಸೂಲ ಮೊಮಿನ, ಸುರೇಶ ಅಮ್ಮಿನಬಾವಿ, ಸುಖದೇವ ಕಾಂಬಳೆ, ರಾಯಪ್ಪ ಗೊಂಡೆ, ಸನ್ಮತಿ ಶೆಟ್ಟಿ, ಪ್ರತಿಭಾ ಮಾರಾಪೂರೆ, ಮನೋಹರ ಕಾಂಬಳೆ, ಶಶಿಕಾಂತ ತಾರದಾಳೆ, ಅಶೋಕ ಅಂಗಡಿ, ಸಾಗರ ಝೆಂಡೆನ್ನವರ, ಗಣೇಶ ಕಾಂಬಳೆ ಸೇರಿದಂತೆ ಡಾ.ಹಿಮ್ಮಡಿಯವರ ಶಿಷ್ಯ ವೃಂದ ಹಾಗೂ ಅಭಿಮಾನಿಗಳು ಇದ್ದರು. ಶ್ರೀಧರ ಕಿಚಡೆ ಸ್ವಾಗತಿಸಿದರು, ಸರಸ್ವತಿ ಆಲಖನೂರೆ ನಿರೂಪಿಸಿದರು, ಶಂಕರ ಕೊಡತೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.