![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 23, 2023, 9:43 PM IST
ನವದೆಹಲಿ: ಭಾರತದ ಪ್ರಮುಖ ಗೃಹೋಪಯೋಗಿ ಉತ್ಪನ್ನಗಳ ಬ್ರಾಂಡ್ ಆದ ಉಷಾ ಇಂಟರ್ನ್ಯಾಷನಲ್ 54 ವಿವಿಧ ಮಾದರಿಗಳನ್ನು ಒಳಗೊಂಡ ಓನಿಯೋ ಸರಣಿಯ ಫ್ಯಾನ್ ಗಳನ್ನು ಪರಿಚಯಿಸಿದೆ.
ಓನಿಯೋ ಸರಣಿಯಲ್ಲಿ ಲ್ಯಾಂಬ್ಡಾ, ಫಿ, ಅಪ್ಸಿಲಾನ್, ಪೈ, ಕಪ್ಪಾ ಮತ್ತು ರೋ ಎಂಬ ಆರು ಶ್ರೇಣಿಗಳಿವೆ. ಲ್ಯಾಂಬ್ಡಾ, ಫಿ ಮತ್ತು ಅಪ್ಸಿಲಾನ್ ಶ್ರೇಣಿಗಳು ಬಹುಕೋನದಲ್ಲಿ ಕಾರ್ಯಾಚರಿಸುವ ರಿಮೋಟ್ ನೊಂದಿಗೆ ಬರುತ್ತವೆ.
ಓನಿಯೋ ಸರಣಿಯು ಬಿಇಇ 5 ಸ್ಟಾರ್ ರೇಟಿಂಗ್ ಹೊಂದಿದೆ. ಶೇ. 100ರಷ್ಟು ತಾಮ್ರದ ಬಿಎಲ್ ಡಿ ಸಿ ಮೋಟರ್ ಹೊಂದಿದೆ. ಬಿಎಲ್ಡಿಸಿ ಮೋಟರ್ ಕಡಿಮೆ ವಿದ್ಯುತ್ ಬಳಸಿಕೊಂಡು ದೀರ್ಘ ಬಾಳಿಕೆ ನೀಡುತ್ತವೆ. ಅಲ್ಲದೇ ಶಬ್ದರಹಿತ ಕಾರ್ಯಾಚರಣೆ, ಹೆಚ್ಚಿನ ಗಾಳಿ ನೀಡುತ್ತವೆ ಎಂದು ಕಂಪೆನಿ ತಿಳಿಸಿದೆ.
ಈ ಸಂದರ್ಭದಲ್ಲಿ ಉಷಾ ಕಂಪೆನಿಯ ಸಿಇಒ ದಿನೇಶ್ ಛಾಬ್ರಾ ಮಾತನಾಡಿ, ಫ್ಯಾನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಉಷಾ ದಿಂದ ಗ್ರಾಹಕರ ಅಭಿರುಚಿಗೆ ಅನುಗುವಣವಾಗಿ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. ಓನಿಯೋ ಸರಣಿಯು ಸ್ಟೈಲಿಶ್ ಆಗಿದ್ದು, ವೈವಿಧ್ಯಮಯ ಬಣ್ಣಗಳ ಆಯ್ಕೆಯಲ್ಲಿ ದೊರಕುತ್ತವೆ. ಉಚಿತ ಅಳವಡಿಕೆ ಮತ್ತು ಎರಡು ವರ್ಷಗಳ ಉಚಿತ ಹೋಂ ಸರ್ವೀಸ್, ಮೋಟರ್ ಗೆ 2 ವರ್ಷಗಳ ವಾರಂಟಿಯೊಂದಿಗೆ ದೊರಕುತ್ತದೆ ಎಂದರು.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.