ಬೆಂಗಳೂರು ಓಪನ್: ಅನಿರುದ್ಧ್ -ಪ್ರಶಾಂತ್ ಡಬಲ್ಸ್ ಸೆಮಿಗೆ, ನಗಲ್ಗೆ ಆಘಾತಕಾರಿ ಸೋಲು
Team Udayavani, Feb 24, 2023, 6:32 AM IST
ಬೆಂಗಳೂರು: ಭಾರತದ ಸುಮಿತ್ ನಗಲ್ ಅವರು ಬೆಂಗಳೂರು ಓಪನ್ ಟೆನಿಸ್ ಕೂಟದ ಪ್ರಿ-ಕ್ವಾರ್ಟರ್ಫೈನಲ್ನ ಕಠಿನ ಹೋರಾಟದಲ್ಲಿ ಆಸ್ಟ್ರೇಲಿಯದ ಮ್ಯಾಕ್ಸ್ ಪುರ್ಸೆಲ್ ಅವರ ಕೈಯಲ್ಲಿ ಸೋತು ಆಘಾತಕ್ಕೆ ಒಳಗಾದರು. ಆದರೆ ಡಬಲ್ಸ್ನಲ್ಲಿ ಭಾರತದ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್. ಪ್ರಶಾಂತ್ ಅವರು ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿ ರುವುದು ಸಮಾಧಾನ ತಂದಿದೆ.
ನಗಲ್ ಅವರು ಸೆಟ್ಗಳ ಹೋರಾ ಟದಲ್ಲಿ ಪುರ್ಸೆಲ್ ಅವರಿಗೆ 4-6, 6-3, 6-3 ಅಂತರದಿಂದ ಶರಣಾಗಿ ಹೊರಬಿದ್ದರು. ಅವರು ಈ ಹಿಂದಿನ ಪಂದ್ಯದಲ್ಲೂ ಮೂರು ಸೆಟ್ಗಳವರೆಗೆ ಹೋರಾಡಿ ವಿಯೆಟ್ನಾಂನ ನಮ್ ಹಾಂಗ್ ಲಿ ಅವರನ್ನು ಸೋಲಿಸಲು ಯಶಸ್ವಿಯಾಗಿದ್ದರು. ನಗಲ್ ಮೊದಲ ಸೆಟ್ ಗೆಲ್ಲುವ ಮೂಲಕ ಎದುರಾಳಿಗೆ ಪ್ರಬಲ ಹೊಡೆತ ನೀಡಿದ್ದರು. ಆದರೆ ಪುರ್ಸೆಲ್ ಆಬಳಿಕ ಅಮೋಘವಾಗಿ ಆಡಿ ನಗಲ್ ಅವರ ಕನಸನ್ನು ನುಚ್ಚುನೂರು ಮಾಡಿದರು. ಪುರ್ಸೆಲ್ ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಗಿದ್ದಾರೆ.
ಐದನೇ ಶ್ರೇಯಾಂಕದ ಲುಕಾ ನರ್ಡಿ ಮತ್ತು ದಿಮಿತರ್ ಕುಜ್ಮನೋವ್ ಅವರು ಜಯದೊಂದಿಗೆ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ. ನರ್ಡಿ ಜಾಸನ್ ಜಂಗ್ ಅವರನುನ 7-5, 5-7, 6-2 ಸೆಟ್ಗಳಿಂದ ಗೆದ್ದು ಬಂದರೆ ಕುಜ್ಮನೋವ್ ಅವರು ಅಲಿಬೆಕ್ ಕಚ¾ಜೋವ್ ಅವರನ್ನು 6-3, 6-4 ಸೆಟ್ಗಳಿಂದ ಉರುಳಿಸಿದರು.
ಡಬಲ್ಸ್ನಲ್ಲಿ ಗೆಲುವು
ಭಾರತದ ಅನಿರುದ್ಧ್ ಮತ್ತು ಪ್ರಶಾಂತ್ ಅವರು ಜಿಂಬಾಬ್ವೆಯ ಬೆಂಜಮಿನ್ ಲಾಕ್ ಮತ್ತು ಆಸ್ಟ್ರೇ ಲಿಯದ ಅಕಿರ ಸ್ಯಾಂಟಿಲನ್ ಅವರನ್ನು 3-6, 6-4, 12-10 ಸೆಟ್ಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.