ಕೊಟ್ಟಾರೆ ಕೊಡು, ಮೋದಿಯಂಥ ದೊರೆ: ಸಂಕಷ್ಟದಲ್ಲಿರುವ ಪಾಕಿಸ್ಥಾನ ನಾಗರಿಕರ ಬೇಡಿಕೆ
Team Udayavani, Feb 24, 2023, 8:05 AM IST
ಇಸ್ಲಾಮಾಬಾದ್: “ಮೋದಿಯಂಥ ನಾಯಕನಿದ್ದಿದ್ದರೆ ಇಂದು ನಮ್ಮ ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿರಲಿಲ್ಲ. ಕನಿಷ್ಠ ಹೊಟ್ಟೆ ತುಂಬ ಊಟ ಬಡಿಸಲು ಸಾಧ್ಯವಾಗುತ್ತಿತ್ತು! ಪಾಕ್ ಸರಕಾರ ತಂದಿಟ್ಟಿರುವ ಪರಿಸ್ಥಿತಿಯಿಂದ ನಾವು ಪಾಕ್‌ನಲ್ಲಿ ಹುಟ್ಟಿದ್ದೇ ತಪ್ಪು ಎಂದೆನಿಸುತ್ತಿದೆ. ಮೋದಿ ತರಹದ ನಾಯಕನನ್ನು ನೀಡು ಎಂದು ಅಲ್ಲಾನಲ್ಲಿ ಬೇಡಿಕೊಳ್ಳುತ್ತೇವೆ’.
ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜರ್ಝರಿತವಾಗಿರುವ ಪಾಕಿಸ್ಥಾನದ ಜನರ ಭಾವುಕ ಮಾತುಗಳು! ತೆರಿಗೆ ಹೆಚ್ಚಳ, ಬೆಲೆ ಏರಿಕೆ, ಆಹಾರ ಬಿಕ್ಕಟ್ಟಿನಂಥ ಬರೆಗಳು ಒಂದರ ಮೇಲೆ ಒಂದರಂತೆ ಜನರ ಮೇಲೆ ಬೀಳುತ್ತಿವೆ. ಜನರ ಸಂಕಷ್ಟಗಳನ್ನು ಆಲಿಸಲೆಂದು ಪಾಕ್ ಯೂಟ್ಯೂಬರ್ ಸನಾ ಅಮ್ಜದ್ ಜನರ ಪ್ರತಿಕ್ರಿಯೆ ಸಂಗ್ರಹದ ವೀಡಿಯೋ ಒಂದನ್ನು ಮಾಡಿದ್ದು, ಈ ವೇಳೆ ಪಾಕ್ ಪ್ರಜೆಯೊಬ್ಬರು ಈ ರೀತಿ ಹೇಳಿಕೆ ನೀಡಿದ್ದಾರೆ. ಪಾಕಿಸ್ಥಾನ ಭಾರತದಿಂದ ವಿಭಜನೆಗೊಳ್ಳಲೇಬಾರದಿತ್ತು. ನಾವು ಕನಿಷ್ಠ ಅಗತ್ಯ ಸಾಮಗ್ರಿಗಳನ್ನಾದರೂ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳ ಬಹುದಿತ್ತು. ಮೋದಿ ಭಾರತವನ್ನು ಮುನ್ನಡೆಸುವಂತೆ, ಪಾಕ್ ಅನ್ನು ಆಡಳಿತ ಮಾಡಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನವಾಜ್ ಷರೀಫ್, ಭುಟ್ಟೋ, ಇಮ್ರಾನ್, ಶೆಹಬಾಜ್ ಈ ಯಾವ ನಾಯಕರೂ ನಮಗೆ ಬೇಕಿಲ್ಲ. ಮೋದಿ ಅಂಥ ಓರ್ವ ದಿಟ್ಟ ನಾಯಕ ಬೇಕು ಎಂದು ಹೇಳಿದ್ದಾರೆ. ಐಎಸ್‌ಎ ಅನುದಾನ ಕಡಿತ: ಹಣದ ಕೊರತೆ ಹಿನ್ನೆಲೆ ಪಾಕಿಸ್ಥಾನ ಸರಕಾರ ಗುಪ್ತಚರ ಇಲಾಖೆ, ತನಿಖಾ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಲು ನಿರ್ಧರಿಸಿದೆ.
ಭಯೋತ್ಪಾದನೆಯನ್ನು ಉದ್ಯಮವಾಗಿಸಿಕೊಂಡಿರುವ ಯಾವುದೇ ದೇಶ ಎಂದಿಗೂ ಸಮಸ್ಯೆಗಳಿಂದ ಹೊರಬಂದು, ಸಮೃದ್ಧವಾಗಲು ಸಾಧ್ಯವಿಲ್ಲ. ಪಾಕ್ ವಿಚಾರದಲ್ಲಿ ನಾವು ಕೈಗೊಳ್ಳುವ ಯಾವುದೇ ದೊಡ್ಡ ನಿರ್ಣಯ ನಮ್ಮ ದೇಶದ ಜನರ ಭಾವನೆಗಳ ನಾಡಿಮಿಡಿತವನ್ನು ಆಧರಿಸಿರುತ್ತದೆ.
ಎಸ್.ಜೈಶಂಕರ್, ವಿದೇಶಾಂಗ ಸಚಿವ
ಬ್ಯುಸಿನೆಸ್ ಕ್ಲಾಸ್ ಪ್ರಯಾಣ ರದ್ದು
ಪಾಕಿಸ್ಥಾನದ ಸಚಿವರು ವಿದೇಶಗಳಿಗೆ ಇನ್ನು ಮುಂದೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ ಅಥವಾ ಪಂಚತಾರಾ ಹೊಟೇಲ್‌ಗಳಲ್ಲಿ ಉಳಿಯುವಂತಿಲ್ಲ. ಸದ್ಯದ ಸಮಯ ನಮ್ಮಿಂದ ತಾಳ್ಮೆ, ತ್ಯಾಗ, ಸರಳತೆ ಬಯಸುತ್ತಿದೆ. ನಾವೆಲ್ಲರೂ ಅದೇ ರೀತಿ ಇರಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.