ನಾನು ಇಷ್ಟು ಎತ್ತರಕ್ಕೆ ಏರಲು ಆರ್ ಎಸ್ ಎಸ್ ಕಾರಣ,ದೇವೇಗೌಡರು ನಮಗೆ ಆದರ್ಶ: ಬಿಎಸ್ ವೈ
15 ನೇ ವಿಧಾನಸಭೆ ಅಧಿವೇಶನಕ್ಕೆ ತೆರೆ; ಗಮನ ಸೆಳೆದ ಮಾಜಿ ಸಿಎಂ ಭಾಷಣ
Team Udayavani, Feb 24, 2023, 4:11 PM IST
ಬೆಂಗಳೂರು : 15 ನೇ ವಿಧಾನಸಭೆ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ವಿದಾಯ ಭಾಷಣದ ಮೂಲಕ ಗಮನಸೆಳೆದರು. ನಾನು ಇಷ್ಟು ಎತ್ತರಕ್ಕೆ ಏರಲು ಆರ್ ಎಸ್ ಎಸ್ ಕಾರಣವೆಂದ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಮಗೆಲ್ಲ ಆದರ್ಶ ಎಂದರು.
”ಅನೇಕ ಒಳ್ಳೆಯ ಅವಕಾಶಗಳು ಸಿಕ್ಕವು, ಸಾಮಾನ್ಯ ಪುರಸಭೆ ಸದಸ್ಯನಾಗಿ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿತು. ಆ ಕಾಲದಲ್ಲಿ ರಸ್ತೆಗಳು ಸರಿ ಇಲ್ಲದ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಪ್ರವಾಸ ಮಾಡುವ ಸೌಭಾಗ್ಯ ದೊರಕಿತು. ಇಲ್ಲಿ ಇರುವ ಸದಸ್ಯರು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ.ನಾನು ಅನೇಕ ಕಡೆ ಭಾಷಣ ಆರಂಭಿಸಿದ ಬಳಿಕ ವಾಜಪೇಯಿ ಅವರು, ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರು ಬರುತ್ತಿದ್ದರು” ಎಂದರು.
”ಯಾರೂ ಇರಲಿಲ್ಲ, ಶಾಸನ ಸಭೆಯಲ್ಲಿ ನಾವು ಇಬ್ಬರೇ ಇದ್ದೆವು. ಅಂದು ಯಾರೂ ಇರಲಿಲ್ಲ ನಮ್ಮ ಜೊತೆ, ವಸಂತ ಬಂಗೇರ ವರು ನಮ್ಮನ್ನು ಕೈಬಿಟ್ಟು ಹೋದರು. ಎಂದೂ ನಾನು ವಾಪಸ್ ತಿರುಗಿ ನೋಡಲಿಲ್ಲ, ನಾಡಿನ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದರು.
”ನನಗೆ ಅತ್ಯಂತ ತೃಪ್ತಿ ತಂದದ್ದು, ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಸಿಗದಿದ್ದಾಗ ವಿಧಾನಸೌಧದಲ್ಲಿ ಧರಣಿ ಕುಳಿತೆ, ಕೊನೆಗೆ ಅಂದಿನ ಸಿಎಂ ಆಗಿದ್ದ ಎಸ್.ಎಂ .ಕೃಷ್ಣ ಅವರು ಅದಕ್ಕೊಂದು ಪರಿಹಾರ ನೀಡಿದರು” ಎಂದು ನೆನಪಿಸಿಕೊಂಡರು.
”ನಾನು ಇಷ್ಟು ಎತ್ತರಕ್ಕೆ ಏರಬೇಕಾದರೆ, ನಿಲ್ಲಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಾರಣ. ಅಲ್ಲಿ ಸಿಕ್ಕ ತರಬೇತಿ , ಅವಕಾಶ, ಮಾರ್ಗದರ್ಶನ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ”ಎಂದರು.
”ಇವತ್ತು ನಮಗೆಲ್ಲ ಆದರ್ಶ ಮಾನ್ಯ ಹೆಚ್.ಡಿ. ದೇವೇಗೌಡರು, ಸಣ್ಣ ವಿಚಾರವಲ್ಲ. ಇವತ್ತಿಗೂ ದೇಶದ, ರಾಜ್ಯದ ವಿಚಾರಗಳ ಕುರಿತು ಮಾರ್ಗದರ್ಶ ಮಾಡುತ್ತಾರೆ. ಇದಕ್ಕಿಂತ ಆದರ್ಶ ಬೇರೆ ಬೇಕಿಲ್ಲ . ಅವರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ” ಎಂದರು.
”ನಾನು ಶಿಕಾರಿಪುರದ ಜನತೆಗೆ ಚಿರಋಣಿ, ಬದುಕಿನ ಕೊನೆಯುಸಿರು ಇರುವ ವರೆಗೆ ಅವರ ಸೇವೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು. ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಒಂದು ದಿನವೂ ನನ್ನ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ ” ಎಂದು ವಿಪಕ್ಷಗಳಿಗೆ ಬಿಸಿ ಮುಟ್ಟಿಸಿದರು.
”ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಕೆಲಸಗಳು, ಒಬ್ಬ ಅಧ್ಯಕ್ಷರಾಗಿ ನೀವು (ವಿಶ್ವೇಶ್ವರ ಹೆಗಡೆ ಕಾಗೇರಿ) ಮಾಡಿದ ಕೆಲಸ ಅನುಸರಣೀಯ. ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಅವರ ಕೆಲಸ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ”ವಿಧಾನಸೌಧ ಆಗುವುದರ ಹಿಂದಿರ ಹೋರಾಟ, ಉದ್ದೇಶ ಮತ್ತು ಶ್ರದ್ದೆಯಿಂದ ಕೂಡಿವೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಮಹತ್ವದ ಘಟ್ಟ ಎಂದರು. ಮಧ್ಯರಾತ್ರಿ ಪಡೆದ ಸ್ವಾತಂತ್ರ್ಯ ವಿಶೇಷವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ದೊಡ್ಡದಿದೆ. ಸಂವಿಧಾನದ ಅಡಿಯಲ್ಲಿ ರಾಜ್ಯಗಳ ಸ್ಥಾಪನೆ ಚಳವಳಿಗಳು ಹೋರಾಟಗಳು ಮಹತ್ವದ್ದಾಗಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.