ರಾಶಿ ಫಲ: ನಿರೀಕ್ಷಿತ ಧನಸಂಚಯನ, ಅನಗತ್ಯ ವಿಚಾರಗಳಿಗೆ ಆದ್ಯತೆ ನೀಡದಿರಿ
Team Udayavani, Feb 25, 2023, 7:18 AM IST
ಮೇಷ: ಅವಿವಾಹಿತರಿಗೆ ವಿವಾಹ ಯೋಗ. ದಂಪತಿಗಳಲ್ಲಿ ಪ್ರೇಮ ಅನುರಾಗ ವೃದ್ಧಿ. ಮನೋರಂಜನೆಗಾಗಿ ಪ್ರಯಾಣ, ಧನವ್ಯಯ. ಗೃಹದಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ಪರರ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಾತಿನಲ್ಲಿ ಸ್ಪಷ್ಟತೆ ತೋರಿಬರುವುದು. ಅನಿರೀಕ್ಷಿತ ಧನಾಗಮನ. ದೂರ ಪ್ರಯಾಣ ವರ್ಚಸ್ಸು ವೃದ್ಧಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ.
ಮಿಥುನ: ವಿದ್ಯೆ ಜ್ಞಾನ ಪ್ರದರ್ಶನದಿಂದ ಗೌರವ ವೃದ್ಧಿ, ಜನಮನ್ನಣೆ. ನಿರೀಕ್ಷಿತ ಧನಸಂಚಯನ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಮಿತ್ರರಿಂದ ಸಹಾಯ, ನೆಮ್ಮದಿ ಲಭಿಸೀತು. ಅನಗತ್ಯ ವಿಚಾರಗಳಿಗೆ ಆದ್ಯತೆ ನೀಡದಿರಿ.
ಕರ್ಕ: ದೂರ ಪ್ರಯಾಣ ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಿಗೆ ಆಸ್ಪದ ನೀಡದಿರಿ. ಪರವೂರಿನ ವ್ಯವಹಾರದಲ್ಲಿ ಧನ ಸಂಪತ್ತು ವೃದ್ಧಿ. ಬಂಧು ಗಳಿಂದ ತಾಯಿ ಸಮಾನರಿಂದ ಉತ್ತಮ ಮಾರ್ಗದರ್ಶನ. ಮನೆಯಲ್ಲಿ ಸಂಭ್ರಮದ ವಾತಾವರಣ.
ಸಿಂಹ: ಪಾಲುದಾರಿಕಾ ವಿಚಾರಗಳಲ್ಲಿ ಲಾಭ. ಪರಸ್ಪರ ಸಹಕಾರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು. ಉತ್ತಮ ಧನವೃದ್ಧಿ. ಜವಾಬ್ದಾರಿಯ ಮಾತುಗಳಿಂದ ಜನಮನ್ನಣೆ ಲಭಿಸೀತು. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದ ಕಾರ್ಯ ಸಿದ್ಧಿ.
ಕನ್ಯಾ: ಭೂಮ್ಯಾದಿ, ಆಸ್ತಿ, ಗೃಹ, ವಾಹನಾದಿ ವಿಚಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತು ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ ನೆಮ್ಮದಿ. ನಿರಾಯಾಸ ಧನಾರ್ಜನೆ.
ತುಲಾ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿಯಲ್ಲಿ ಸಫಲತೆ. ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿಪಾತ್ರರಾಗುವ ಸಂದರ್ಭ. ಸಾಂಸಾರಿಕ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಬ ಇತ್ಯಾದಿ ಫಲ.
ವೃಶ್ಚಿಕ: ದೈರ್ಯ ಪರಾಕ್ರಮ ಶೌರ್ಯ ಆತ್ಮಸ್ಥೆರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ ಆದರಾದಿ ಸುಖ ವೃದ್ಧಿ. ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ. ಪತಿಪತ್ನಿಯರಿಂದ ಪರಸ್ಪರ ಸಹಾಯ ಸಹಕಾರ ಲಭ್ಯ.
ಧನು: ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸುಖ ತೃಪ್ತಿದಾಯಕ. ಅಧ್ಯಯನ ಪ್ರವೃತ್ತರಿಗೆ ಉತ್ತಮ ವಾತಾವರಣ ನಿರ್ಮಾಣ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಮಕರ: ನಾಯಕತ್ವ ಗುಣ ವೃದ್ಧಿ. ಸಹೋದರ ಸಮಾನರಿಂದ ಸಂದಭೋìಚಿತ ಸಹಾಯ ಸಹಕಾರ. ಪ್ರಯಾಣದಿಂದ ಲಾಭ. ದಾಂಪತ್ಯದಲ್ಲಿ ಅನುರಾಗ ವೃದ್ಧಿ, ಅವಿವಾಹಿತರಿಗೆ ಉತ್ತಮ ಸಂಬಂಭ ಒದಗಿ ಬರುವ ಸಮಯ.
ಕುಂಭ: ಅಧ್ಯಯನಶೀಲತೆ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ ಆದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಪರ ವಿಚಾರ ತಿಳಿದು ನಿರ್ಣಯಿಸಿ. ಗೃಹೋಪಕರಣ ವಸ್ತು ಸಂಗ್ರಹ. ಗುರು ಹಿರಿಯರ ಆರೋಗ್ಯ ವೃದ್ಧಿ.
ಮೀನ: ಮಾನಸಿಕ ಸಂತುಷ್ಟತೆಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಸಹೋದರಾಗಿ ವರ್ಗದವರಿಂದ ಸಹಾಯ. ದಾಂಪತ್ಯ ಸುಖ ವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
MUST WATCH
ಹೊಸ ಸೇರ್ಪಡೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.