ರಷ್ಯಾಗೆ ಐರೋಪ್ಯ ಒಕ್ಕೂಟದಿಂದ ಕಠಿಣ ನಿರ್ಬಂಧ!
ವರ್ಷ ಕಳೆದರೂ ಉಕ್ರೇನ್ ಮೇಲೆ ದಾಳಿ ನಿಲ್ಲಿಸದ ರಷ್ಯಾ ವಿರುದ್ಧ ಅಸಮಾಧಾನ
Team Udayavani, Feb 26, 2023, 6:45 AM IST
ಬ್ರಸೆಲ್ಸ್ : ಒಂದು ವರ್ಷ ಕಳೆದರೂ, ಉಕ್ರೇನ್ ಮೇಲಿನ ರಷ್ಯಾ ದಾಳಿ ಹೆಚ್ಚುತ್ತಲೇ ಇದ್ದು, ರಷ್ಯಾವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹಿಂದೆಂದಿಗಿಂತಲೂ ಕಠಿಣ ನಿರ್ಬಂಧಗಳನ್ನು ವಿಧಿಸಲು ಐರೋಪ್ಯ ಒಕ್ಕೂಟ ಶನಿವಾರ ನಿರ್ಧರಿಸಿದೆ.
ಆರ್ಥಿಕವಾಗಿ ಮಾತ್ರವಲ್ಲದೇ, ರಕ್ಷಣಾತ್ಮಕವಾಗಿಯೂ ರಷ್ಯಾವನ್ನು ಸದೆಬಡಿಯಲು ಒಕ್ಕೂಟ ತಯಾರಿ ನಡೆಸಿದೆ.
ಈ ಕುರಿತು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮಾಹಿತಿ ನೀಡಿದ್ದು, ಉಕ್ರೇನ್ ಮೇಲಿನ ದಾಳಿ ಬೆಂಬಲಿಸುವ, ರಷ್ಯಾ ಪರ ಪ್ರಚಾರ ಮಾಡುವ, ರಷ್ಯಾಗೆ ಆರ್ಥಿಕ ಅಥವಾ ರಾಜಕೀಯ ಹಾಗೂ ರಕ್ಷಣಾ ನೆರವು ನೀಡುವ, ಸಶಸ್ತ್ರಗಳನ್ನು ಸರಬರಾಜು ಮಾಡುವ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಕಠಿಣ ನಿರ್ಬಂಧ ವಿಧಿಸಲು ಒಕ್ಕೂಟ ಸಮ್ಮತಿಸಿದೆ ಎಂದಿದ್ದಾರೆ. ಅಲ್ಲದೇ, ರಷ್ಯಾದ ಬ್ಯಾಂಕ್‌ಗಳ ಜತೆಗಿನ ವಹಿವಾಟು ಸ್ಥಗಿತಗೊಳಿಸುವುದಲ್ಲದೇ, ಐರೋಪ್ಯ ರಾಷ್ಟ್ರಗಳಲ್ಲಿರುವ ರಷ್ಯಾ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿನಂಥ ನಿರ್ಬಂಧ ವಿಧಿಸಲು ಯೋಜಿಸಿವೆ ಎನ್ನಲಾಗಿದೆ.
ಜಿ-7 ರಾಷ್ಟ್ರಗಳಿಂದಲೂ ಕ್ರಮ: ರಷ್ಯಾ ವಿರುದ್ಧ ಜಿ-7ರಾಷ್ಟ್ರಗಳ ವಚ್ಯುವಲ್ ಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಯಾವುದೇ ಶಸ್ತ್ರಾಸ್ತ್ರ ರಫ್ತು ಮಾಡದಂತೆ ಸದಸ್ಯ ರಾಷ್ಟ್ರಗಳು ನಿರ್ಧರಿಸಿವೆ. ಇದೇ ವೇಳೆ ಆರ್ಥಿಕವಾಗಿ ಹಾಗೂ ರಕ್ಷಣಾತ್ಮಕವಾಗಿ ಉಕ್ರೇನ್‌ಗೆ ನಮ್ಮ ಬೆಂಬಲ ವಿಸ್ತರಿಸಲು ಬದ್ಧವಾಗಿದ್ದೇವೆ ಎಂದು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.