![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 26, 2023, 7:22 AM IST
ಬೆಂಗಳೂರು: ಚೀನ ಮತ್ತು ರಷ್ಯಾದ ಆಕ್ಷೇಪದ ಹಿನ್ನೆಲೆಯಲ್ಲಿ ಉಕ್ರೇನ್ ಮೇಲಿನ ಯುದ್ಧದ ಕುರಿತಂತೆ ಜಂಟಿ ಹೇಳಿಕೆ ಹೊರಡಿಸಲು ಜಿ20 ದೇಶಗಳು ನಿರಾಕರಿಸಿವೆ.
ಇಲ್ಲಿ ನಡೆದ ಜಿ20 ವಿತ್ತ ಸಚಿವರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆದರೆ, ಉಕ್ರೇನ್‌ನ ಮೇಲೆ ರಷ್ಯಾ ಸಾರಿರುವ ಸಮರದ ವ್ಯಾಖ್ಯಾನಕ್ಕೆ ಸಂಬಂಧಿಸಿ ರಷ್ಯಾ ಮತ್ತು ಚೀನಾ ಭಿನ್ನ ನಿಲುವು ತಾಳಿರುವ ಹಿನ್ನೆಲೆಯಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು “ಆಕ್ರಮಣ’ವೆಂದು ವ್ಯಾಖ್ಯಾನಿಸಿ ಖಂಡಿಸಬೇಕು ಎಂಬುದು ಅಮೆರಿಕ ಮತ್ತು ಫ್ರಾನ್ಸ್‌ನ ನಿಲುವಾಗಿದೆ. ಆದರೆ ಜಿ -20 ವೇದಿಕೆಯು ಇಂತಹ ವಿಷಯವನ್ನು ನಿರ್ವಹಿಸುವ ವೇದಿಕೆಯಲ್ಲ ಎಂಬುದು ಅತಿಥೇಯ ಭಾರತದ ನಿಲುವಾಗಿದೆ. ಭೂ-ರಾಜಕೀಯ ವಿದ್ಯಮಾನವನ್ನು ವ್ಯಾಖ್ಯಾನಿಸಲು ತಟಸ್ಥ ಪದವಾದ “ಬಿಕ್ಕಟ್ಟು’ ಅಥವಾ ಒಂದು “ಸವಾಲು’ ಪದ ಸೂಕ್ತ ಎಂಬುದು ಭಾರತದ ಅಭಿಪ್ರಾಯವಾಗಿದೆ. ಆದರೆ, ರಷ್ಯಾ “ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದು ಪರಿಗಣಿಸಬೇಕು ಎಂದಿತ್ತು. ಹೀಗಾಗಿ ಜಂಟಿ ಹೇಳಿಕೆ ಹೊರಟಿಲ್ಲ.
ಈ ಮಧ್ಯೆ, ಭಾನುವಾರ ಜಿ-20 ದೇಶದ ಪ್ರತಿನಿಧಿಗಳು ಶ್ರವಣಬೆಳಗೊಳ, ನಂದಿ ಬೆಟ್ಟ, ಬೇಲೂರು ಮತ್ತು ಹಳೆಬೀಡು ಪ್ರವಾಸ ಕೈಗೊಳ್ಳಲಿದ್ದಾರೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.