ಬೈಲಹೊಂಗಲ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಶಾಲಾ ಕೊಠಡಿ ಸುಟ್ಟು ಭಸ್ಮ
Team Udayavani, Feb 26, 2023, 9:59 PM IST
ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆಯ ಶತಮಾನ ಪೂರೈಸಿದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ರವಿವಾರ ಮಧ್ಯಾಹ್ನ ಕಿಡಿಗೇಡಿಗಳಿಂದ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ದಗದಗ ಹೊತ್ತಿ ಉರಿದ ಘಟನೆ ಜರುಗಿದೆ.
ಸುಡು ಬಿಸಿಲಿನಲ್ಲಿ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ಬಾಗಿಲು ಇಲ್ಲದ ಕೊಠಡಿಯಲ್ಲಿದ್ದ ಹಳೆ ಡೆಸ್ಕ್, ಹಳೆಯ ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಸುಡು ಬಿಸಿಲಿನಲ್ಲಿ ಬೆಂಕಿಯ ಕೆನ್ನಾಲಿಗೆ ಜ್ವಾಲಾ ಮುಖಿಯಂತೆ ಕಂಡಿತು. ಕಿಡಗೇಡಿಗಳು ಹೊತ್ತಿಸಿದ ಬೆಂಕಿ
ಶಾಲೆಯ ಕೊಠಡಿಗಳನ್ನು ಆವರಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ತಹಶೀಲ್ದಾರ ಜೆ.ಸಿ.ಅಷ್ಟಗಿಮಠ, ಕಂದಾಯ ನಿರೀಕ್ಷಕ ಸುರೇಶ ಮಾಳಗಿ, ಶಾಲೆ ಪ್ರಾಚಾರ್ಯರು, ಶಿಕ್ಷಕರು ಇದ್ದರು.
ಇದನ್ನೂ ಓದಿ: ಮನೀಶ್ ಸಿಸೋಡಿಯಾ ಬಂಧನ; ಮುಂದಿನದು ಕೇಜ್ರಿವಾಲ್ ಎಂದ ಬಿಜೆಪಿ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.