ವರದಿ, ಭರವಸೆಯಲ್ಲೇ ಉಳಿದ ಕಡಲ್ಕೊರೆತ ತಡೆ ಯೋಜನೆ
ಸೀ ವೇವ್ ಬ್ರೇಕರ್, ಡಕ್ ಫ್ರೂಟ್ ವರದಿ ಸಲ್ಲಿಕೆ
Team Udayavani, Feb 27, 2023, 7:15 AM IST
ಉಡುಪಿ: ಕರಾವಳಿಯನ್ನು ಕಾಡುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೀ ವೇವ್ ಬ್ರೇಕರ್ ಮತ್ತು ಡಕ್ ಫೂಟ್ ತಂತ್ರಜ್ಞಾನ ಬಳಸುವ ಬಗ್ಗೆ ಎರಡು ಕಂಪೆನಿಗಳು ಸರಕಾರಕ್ಕೆ ಕಾರ್ಯ ಸಾಧ್ಯತೆ ವರದಿ ಸಲ್ಲಿಸಿವೆ. ಈ ಬಗ್ಗೆ ಸರಕಾರ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ.
2022ರಲ್ಲಿ ಉಭಯ ಜಿಲ್ಲೆಯ ಉಳ್ಳಾಲ, ಸುರತ್ಕಲ್, ಪಡುಬಿದ್ರಿ, ಕಾಪು, ಬೆಂಗ್ರೆ, ಕೋಡಿ, ಮರವಂತೆ, ಹೊಸಹಿತ್ಲು ಮೊದಲಾದೆಡೆ ಭಾರೀ ಕಡಲ್ಕೊರೆತ ವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕಡಲ್ಕೊರೆತವನ್ನು ಖುದ್ದು ವೀಕ್ಷಿಸಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ ಈವರೆಗೆ ಪ್ರಾಯೋಗಿಕ ಪ್ರಯತ್ನವೂ ಆಗಿಲ್ಲ.
ರಾಜ್ಯ ಬಜೆಟ್ನಲ್ಲಿ ಕಡಲ್ಕೊರೆತ ತಡೆಗೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಹಿಂದಿನ ವರ್ಷಗಳಲ್ಲಿ ವೈಜ್ಞಾನಿಕ ವಿಧಾನ ಅನುಸರಿಸದೆ ಕಡಲ್ಕೊರೆತ ಪ್ರದೇಶಗಳಿಗೆ ಕಲ್ಲುಹಾಕಲಾಗಿದ್ದು, ಮಳೆಗಾಲ ಮುಗಿಯುವುದ ರೊಳಗೆ ಬಹುತೇಕ ಕಲ್ಲುಗಳು ಸಮುದ್ರ ಪಾಲಾಗಿವೆ ಅಥವಾ ಮರಳಿನಡಿ ಸೇರಿವೆ. 2022ರಲ್ಲಿ ಕಲ್ಲು ಹಾಕಿದ ಗುತ್ತಿಗೆದಾರರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಿಲ್ ನೀಡಿಲ್ಲ ಎಂಬ ಆರೋಪವೂ ಇದೆ.
ಎರಡು ವರದಿ ಸಿದ್ಧ
ಕೇರಳದಲ್ಲಿ ಅಳವಡಿಸಿರುವ ಸೀ ವೇವ್ ಬ್ರೇಕರ್ ತಂತ್ರಜ್ಞಾನ ಮಾದರಿಯನ್ನು ಉಳ್ಳಾಲ ಹಾಗೂ ಮರವಂತೆಯಲ್ಲಿ ಡಕ್ಫೂಟ್ ತಂತ್ರಜ್ಞಾನ ಅಳವಡಿಸಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಎರಡು ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಸಂಸ್ಥೆಯ ಅಧಿಕಾರಿಗಳು ಹಾಗೂ ತಜ್ಞರು ಸ್ಥಳ ಪರಿಶೀಲಿಸಿ ಸರಕಾರಕ್ಕೆ ಕಾರ್ಯಸಾಧ್ಯತೆಯ ವರದಿ ಸಲ್ಲಿಸಿದ್ದಾರೆ. ಎರಡು ವರದಿಗಳಲ್ಲೂ ಈ ತಂತ್ರಜ್ಞಾನಗಳ ಮೂಲಕ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಬಹುದು ಎಂಬು ದನ್ನು ಉಲ್ಲೇಖೀಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಚಿವ ಎಸ್. ಅಂಗಾರ “ಉದಯವಾಣಿ’ಗೆ ತಿಳಿಸಿದರು.
ಎಷ್ಟು ಅನುದಾನ ಬೇಕು?
ಸೀ ವೇವ್ ಬ್ರೇಕರ್ ಅನುಷ್ಠಾನಕ್ಕೆ ಪ್ರತೀ ಕಿ.ಮೀ.ಗೆ ಕನಿಷ್ಠ 25 ಕೋ. ರೂ. ಅಗತ್ಯವಿದೆ. ಇದನ್ನು ಪ್ರಾಯೋಗಿಕವಾಗಿ ಉಳ್ಳಾಲದ ಬೆಟ್ಟಂಪಾಡಿಯಲ್ಲಿ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾ ಗುತ್ತಿದೆ. ಡಕ್ಫೂಟ್ ತಂತ್ರಜ್ಞಾನಕ್ಕೆ ಪ್ರತೀ ಕಿ.ಮೀ.ಗೆ ಕನಿಷ್ಠ 10 ಕೋ.ರೂ. ಅಗತ್ಯವಿದೆ. ಈ ಎರಡು ಪ್ರಯತ್ನವನ್ನು ಏಕಕಾಲದಲ್ಲಿ ಪ್ರಾಯೋಗಿಕವಾಗಿ ಉಭಯ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ದೊಡ್ಡ ಮೊತ್ತದ ಅನುದಾನ ಅಗತ್ಯ ವಿದೆ. ಸರಕಾರ ನಿರ್ದಿಷ್ಟ ಅನುದಾನ ಮೀಸಲಿಟ್ಟ ಬಳಿಕವೇ ಕಾಮಗಾರಿ ಆರಂಭವಾಗಲಿದೆ. ಯೋಜನೆಯ ಶಾಶ್ವತ ಅನುಷ್ಠಾನಕ್ಕೆ ಕನಿಷ್ಠ 500 ಕೋ.ರೂ.ಗಳಿಗೂ ಅಧಿಕ ಅನುದಾನದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಜತೆ ಚರ್ಚೆ
ಸೀ ವೇವ್ ಬ್ರೇಕರ್ ಹಾಗೂ ಡಕ್ಫೂಟ್ ತಂತ್ರಜ್ಞಾನ ಅನುಷ್ಠಾನಕ್ಕಾಗಿ ಈಗಾಗಲೇ ಎರಡು ಪ್ರತ್ಯೇಕ ವರದಿ ಇಲಾಖೆಗೆ ಸಲ್ಲಿಕೆಯಾಗಿದೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅನುದಾನ ಒದಗಿಸಲು ಕೋರಿಕೊಳ್ಳಲಾಗುವುದು. ಅನುದಾನದ ಲಭ್ಯತೆ ಆಧಾರದಲ್ಲಿ ಏಕಕಾಲದಲ್ಲಿ ಎರಡು ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮಾಡಲಿದ್ದೇವೆ.
-ಎಸ್. ಅಂಗಾರ, ಮೀನುಗಾರಿಕೆ ಇಲಾಖೆ ಸಚಿವ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.