![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 27, 2023, 7:27 PM IST
ಅಂಕಾರಾ: ದಕ್ಷಿಣ ಟರ್ಕಿಯಲ್ಲಿ ಸೋಮವಾರ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ದುರಂತದ ಭೂಕಂಪನವು ದೇಶದಲ್ಲಿ ಅಪಾರ ಹಾನಿಗೆ ಕಾರಣವಾದ ಮೂರು ವಾರಗಳ ನಂತರ ಅದಾಗಲೇ ಹಾನಿಗೊಳಗಾದ ಕೆಲವು ಕಟ್ಟಡಗಳು ಕುಸಿಯಲು ಕಾರಣವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ಟಡವೊಂದರ ಅವಶೇಷಗಳಡಿಯಲ್ಲಿ ತಂದೆ ಮತ್ತು ಮಗಳು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರದ ಭೂಕಂಪವು ಮಲತ್ಯಾ ಪ್ರಾಂತ್ಯದ ಯೆಸಿಲ್ಯುರ್ಟ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿತ್ತು ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಯೆಸಿಲ್ಯುರ್ಟ್ ಪಟ್ಟಣದಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ, ಇದರಲ್ಲಿ ತಂದೆ ಮತ್ತು ಮಗಳು ಸಿಕ್ಕಿಬಿದ್ದ ನಾಲ್ಕು ಅಂತಸ್ತಿನ ಕಟ್ಟಡವೂ ಸೇರಿದೆ ಎಂದು ಮೇಯರ್, ಮೆಹ್ಮೆಟ್ ಸಿನಾರ್, ಹೇಬರ್‌ಟರ್ಕ್ ತಿಳಿಸಿದ್ದಾರೆ. ಇಬ್ಬರು ಸಾಮಾನುಗಳನ್ನು ಸಂಗ್ರಹಿಸಲು ಹಾನಿಗೊಳಗಾದ ಕಟ್ಟಡಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ನಿಲುಗಡೆ ಮಾಡಿದ ಕೆಲವು ಕಾರುಗಳ ಮೇಲೆ ಕಟ್ಟಡ ಉರುಳಿದ್ದು ರಕ್ಷಣಾ ತಂಡಗಳು ಶೋಧಿಸುತ್ತಿವೆ ಎಂದು ಹೇಬರ್‌ಟರ್ಕ್ ವರದಿ ಮಾಡಿದೆ.
ಫೆಬ್ರವರಿ 6 ರಂದು ದಕ್ಷಿಣ ಟರ್ಕಿಯ ಮತ್ತು ಉತ್ತರ ಸಿರಿಯಾದ ಭಾಗಗಳನ್ನು ಧ್ವಂಸಗೊಳಿಸಿದ 7.8 ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ 11 ಟರ್ಕಿಶ್ ಪ್ರಾಂತ್ಯಗಳಲ್ಲಿ ಮಲತ್ಯಾ ಕೂಡ ಸೇರಿದೆ.
ಭೂಕಂಪವು ಎರಡೂ ದೇಶಗಳಲ್ಲಿ 48,000 ಕ್ಕೂ ಹೆಚ್ಚು ಮಾನವ ಜೀವ ಹಾನಿಗಳಿಗೆ ಕಾರಣವಾಗಿದ್ದು ಟರ್ಕಿಯೆಯಲ್ಲಿ 173,000 ಕಟ್ಟಡಗಳ ಕುಸಿತ ಮತ್ತು ಗಂಭೀರ ಹಾನಿಗೆ ಕಾರಣವಾಗಿತ್ತು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.