ಸೋಲಿನ ಬಾಯಿಂದ ಜಯ ಕಸಿದ ಕಿವೀಸ್; ಟೆಸ್ಟ್ ಪಂದ್ಯದಲ್ಲಿ ಒಂದು ರನ್ ಅಂತರದ ರೋಚಕ ಜಯ
Team Udayavani, Feb 28, 2023, 10:22 AM IST
ವೆಲ್ಲಿಂಗ್ಟನ್: ಸಂಪೂರ್ಣ ಮೇಲಗೈ ಹೊಂದಿದ್ದ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅದ್ಭುತ ಕಮ್ ಬ್ಯಾಕ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಒಂದು ರನ್ ಅಂತರದಿಂದ ಗೆಲುವು ಸಾಧಿಸಿದೆ. ಟೆಸ್ಟ್ ಇತಿಹಾಸದಲ್ಲಿ ಒಂದು ರನ್ ಅಂತರದ ಗೆಲುವು ದಾಖಲಾದ ಎರಡನೇ ನಿದರ್ಶನ ಇದಾಗಿದೆ.
ಗೆಲುವಿಗೆ 258 ರನ್ ಪಡೆದಿರುವ ಸ್ಟೋಕ್ಸ್ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 48 ರನ್ ಮಾಡಿತ್ತು. ಆದರೆ 256 ರನ್ ಗಳಿಗೆ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸಿದ ಟಿಮ್ ಸೌಥಿ ಪಡೆ ಪ್ರಸಿದ್ದ ಗೆಲುವು ಸಾಧಿಸಿತು.
ಜೋ ರೂಟ್ 95 ರನ್ ಮಾಡಿ ತಂಡವನ್ನು ಆಧರಿಸಿದರೆ, ವಿಕೆಟ್ ಕೀಪರ್ ಬೆನ್ ಫೋಕ್ಸ್ 35 ರನ್ ಮತ್ತು ನಾಯಕ ಬೆನ್ ಸ್ಟೋಕ್ಸ್ 33 ರನ್ ಮಾಡಿದರು.
ಕೊನೆಯ ವಿಕೆಟ್ ಗೆ ಇಂಗ್ಲೆಂಡ್ ಗೆ ಏಳು ರನ್ ಮಾಡಬೇಕಾದ ಅನಿವಾರ್ಯತೆಯಿತ್ತು. ಜೇಮ್ಸ್ ಆ್ಯಂಡರ್ಸನ್ ಬೌಂಡರಿ ಬಾರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ವ್ಯಾಗ್ನರ್ ಎಸೆತವನ್ನು ಕೆಣಕಿದ ಆ್ಯಂಡರ್ಸನ್ ಕೀಪರ್ ಬ್ಲಂಡಲ್ ಗೆ ಕ್ಯಾಚಿತ್ತರು. ಇದರೊಂದಿಗೆ ಆಂಗ್ಲರು ಸೋಲನುಭವಿಸಿದರು.
WHAT A GAME OF CRICKET
New Zealand have won it by the barest of margins…
This is test cricket at its finest ❤️
#NZvENG pic.twitter.com/cFgtFBIkR4
— Cricket on BT Sport (@btsportcricket) February 28, 2023
ಫಾಲೋ ಆನ್ ಪಡೆದ ತಂಡ ಜಯ ಸಾಧಿಸಿದ ನಾಲ್ಕನೇ ನಿದರ್ಶನ ಇದಾಗಿದೆ. 2001ರ ಫೇಮಸ್ ಕೋಲ್ಕತ್ತಾ ಪಂದ್ಯದ ಬಳಿಕ ನಡೆದ ಮೊದಲ ಪ್ರಸಂಗವಿದು.
ಇಂಗ್ಲೆಂಡ್-8 ವಿಕೆಟಿಗೆ 435 ಡಿಕ್ಲೇರ್. ನ್ಯೂಜಿಲ್ಯಾಂಡ್-209 ಮತ್ತು 483 (ಫಾಲೋ ಆನ್) ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 256 ರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.