ಸ್ವಂತ ಅನುಭವದ ಮೇಲೆ ಭವಿಷ್ಯ ರೂಪಿಸಿಕೊಳ್ಳಲು ಆದ್ಯತೆ ನೀಡಿರಿ: ರಾಜ್ಯಪಾಲ ಗೆಹ್ಲೋಟ್
Team Udayavani, Feb 28, 2023, 11:02 AM IST
ದಾವಣಗೆರೆ: ಯಶಸ್ಸು ಬಹಳ ವ್ಯಕ್ತಿನಿಷ್ಠ ಪರಿಕಲ್ಪನೆಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಮಂಗಳವಾರ ಶಿವಂಗೋತ್ರಿಯ ಜ್ಞಾನ ಸೌಧದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಕೆಲವರು ಪದಕ ಪಡೆದಿರಬಹುದು. ಇನ್ನು ಕೆಲವರು ಕ್ರೀಡೆಯಲ್ಲಿ ಮಿಂಚಿರಬಹುದು. ಇನ್ನು ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿರಬಹುದು. ಈ ಯಶಸ್ಸು, ಸಾಧನೆಗಳನ್ನು ಅಳೆಯಬಾರದು. ಇವೆಲ್ಲ ಅಪ್ರಸ್ತುತ. ಅದರೆ ನಿಜವಾದ ಸಾಧನೆ ಜಗತ್ತು ಆನಂದಿಸಬೇಕು. ಅದೇ ವ್ಯಕ್ತಿಯ ನಿಜವಾದ ಸಾಧನೆ ಮತ್ತು ಯಶಸ್ಸು ಎಂದು ಅಭಿಪ್ರಾಯ ಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ತುಲನಾತ್ಮಕವಾಗಿ ಯುವ ವಿಶ್ವವಿದ್ಯಾಲಯವಾಗಿದ್ದು, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳನ್ನು ನೀಡುತ್ತದೆ. ವಿಶ್ವವಿದ್ಯಾನಿಲಯವು 14 ಪಿಎಚ್‌ಡಿ ಪದವಿ ನೀಡುತ್ತಿದೆ. 12,179 ಅಭ್ಯರ್ಥಿಗಳಿಗೆ ಪದವಿ ಮತ್ತು 1,799 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ಸಹ ನೀಡುತ್ತದೆ ಇದು ಸಂತಸದ ಮತ್ತು ಹೆಮ್ಮೆ ಪಡುವ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಕೆಲವೊಮ್ಮೆ ಕ್ಯಾಂಪಸ್ ಜೀವನದಿಂದ ವಿದ್ಯಾರ್ಥಿ ಗಳಿಗೆ ನಿರೀಕ್ಷಿಸಿದ್ದೆಲ್ಲವೂ ಸಿಗದೇ ಇರಬಹುದು. ಅದನ್ನು ವಿಮರ್ಶಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುವ ಬದಲು, ಅದನ್ನು ಅರ್ಥಮಾಡಿಕೊಂಡಾಗ ಜೀವನ ಹೇಗಿರುತ್ತದೆ ಎಂಬುದು ತಿಳಿಯುತ್ತದೆ ಎಂದು ನುಡಿದರು.
ಇದನ್ನೂ ಓದಿ:ಸೋಲಿನ ಬಾಯಿಂದ ಜಯ ಕಸಿದ ಕಿವೀಸ್; ಟೆಸ್ಟ್ ಪಂದ್ಯದಲ್ಲಿ ಒಂದು ರನ್ ಅಂತರದ ರೋಚಕ ಜಯ
ಪದವಿ ಪೂರ್ಣಗೊಳಿಸುವುದು ಶೈಕ್ಷಣಿಕ ಪ್ರಯಾಣದ ಅಂತ್ಯದಂತೆ ಕಾಣಬಹುದು. ಆದರೆ ಇದು ಆರಂಭ ಎಂಬುದನ್ನು ನೆನಪಿಡಿ. ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ಅರ್ಹತೆಯ ಆಧಾರದ ಮೇಲೆ ಸ್ವಂತ ಜೀವನವನ್ನು ರೂಪಿಸಲು ಪ್ರಾರಂಭಿಸಿದೆ. ಬೇರೆಯವರನ್ನು ಅನುಕರಿಸಿ ಜೀವನ ಮಾಡುವುದಕ್ಕಿಂತ ನಿಮ್ಮ ಸ್ವಂತ ಅನುಭವದ ಮೇಲೆ ಭವಿಷ್ಯ ರೂಪಿಸಿಕೊಳ್ಳಲು ಆದ್ಯತೆ ನೀಡಿರಿ. ಆಗ ಎಲ್ಲ ಪ್ರಯತ್ನಗಳೂ ಕೈಗೂಡಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈಗಿನ ವಿದ್ಯಾರ್ಥಿಗಳು ಹಿರಿಯರಿಗಿಂತ ಅದೃಷ್ಟವಂತರು. ಹೊಸ ರೀತಿಯ ಕಲಿಕೆಯ ವಾತಾವರಣಕ್ಕೆ ಒಡ್ಡಿಕೊಳ್ಳುತ್ತೀರಿ. ನೀವು ತೋರಿದ ಸಾಧನೆ, ಯಶಸ್ಸಿನ ಹಿಂದೆ ನಿಮ್ಮ ಪೋಷಕರು, ಶಿಕ್ಷಕರು, ಸಂಬಂಧಿಗಳು, ಆತ್ಮೀಯರು, ಸ್ನೇಹಿತರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಆದರೆ ಒಂದಲ್ಲ ಒಂದು ದಿನ ನಿಮ್ಮ ಕ್ಷೇತ್ರದಲ್ಲಿ ಗೂಡು ಕೆತ್ತಿ ಯಶಸ್ವಿಯಾದಾಗ ಯಾರನ್ನೂ ಮರೆಯಬಾರದು. ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞರಾಗಿರಬೇಕು. ಕಠಿಣ ಪರಿಶ್ರಮ, ತ್ಯಾಗ, ಪ್ರೀತಿಯಿಂದ ಆಶೀರ್ವದಿಸಿದ ಎಲ್ಲರಿಗೂ ಸಹಾಯ ಮಾಡಿ ಎಂದು ಸಲಹೆ ನೀಡಿದರು.
ಇತ್ತೀಚೆಗೆ ಎಲ್ಲರಿಗೂ ಸರ್ಕಾರಿ ಉದ್ಯೋಗಕ್ಕಾಗಿ ನಿರಂತರ ಓಟ ನಡೆಯುತ್ತಿದೆ. ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸಬೇಡಿ ಎಂದು ಹೇಳುತ್ತಿಲ್ಲ. ಅದೊಂದು ಆಯ್ಕೆಯಾಗಿರಲಿ. ಆದರೆ ಅಸ್ತಿತ್ವದ ಏಕೈಕ ಉದ್ದೇಶ ಮತ್ತು ಸಂತೋಷಕ್ಕೆ ಕಾರಣವಲ್ಲ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.50ಕ್ಕಿಂತ ಹೆಚ್ಚು ಜನರೆಲ್ಲರಿಗೂ ಸರ್ಕಾರದ ಉದ್ಯೋಗದಲ್ಲಿ ನೆಲೆಗೊಳ್ಳಲು ತಮ್ಮ ಅರ್ಹತೆ, ಕೌಶಲ್ಯಗಳನ್ನು ಬಳಸುತ್ತಿದ್ದಾರೆ. ಆದರೆ ನಿಮ್ಮ ಕನಸು, ಪ್ರತಿಭೆ, ಅರ್ಹತೆ, ಉತ್ಪಾದಕತೆಯನ್ನು ತ್ಯಾಗ ಮಾಡುತ್ತಿರುವುದು ಸಂತಸದ ವಿಷಯ. ಆದರೆ ಅದಕ್ಕಾಗಿ ಕಾಯುವ ಬದಲಾಗಿ 5ನೇ ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯಲ್ಲಿ ಹಣ ಗಳಿಸುವುದು ಅಟು ಸವಾಲಿನ ಸಂಗತಿಯಾಗುವುದಿಲ್ಲ. ಹೊಸ ದಿಕ್ಕಿನಲ್ಲಿ ಯೋಚಿಸುವುದತ್ತ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.