ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕ ಯಾರು?


Team Udayavani, Mar 1, 2023, 6:33 AM IST

ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕ ಯಾರು?

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚುನಾವಣ ರಾಜಕಾರಣದಿಂದ ಹಿಂದೆ ಸರಿದಿರುವುದರಿಂದ ಬಿಜೆಪಿಯಲ್ಲಿ ಮುಂದಿನ ಲಿಂಗಾಯತ ನಾಯಕ ಯಾರೆಂಬುದಕ್ಕಿಂತಲೂ ಈಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕ ಯಾರು ಎಂಬ ಜಿಜ್ಞಾಸೆ ಉಂಟಾಗಿದೆ. ಈ ಕುರಿತು ಪಕ್ಷದೊಳಗೆ ವಿಭಿನ್ನ ಹಾಗೂ ವ್ಯಾಪಕ ಚರ್ಚೆಗಳು ನಡೆದಿವೆ.

ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಜತೆ ಬಲವಾಗಿ ನಿಂತಿದ್ದ ವೀರಶೈವ- ಲಿಂಗಾಯತ ಮತಗಳು ಈ ಚುನಾ ವಣೆಯಲ್ಲಿ ಚದುರಿ ಹೋಗಲಿವೆ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿ ದ್ದರೆ, ಚದುರಿದ ಮತಗಳು ನಮಗೆ ಬೀಳಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರಶೈವ-ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ “ಯಾರು ನಾಯಕ’ ಎಂಬ ಪ್ರಶ್ನೆಗಳು ಮೂಡಿವೆ.

ಯಡಿಯೂರಪ್ಪ ಅವರನ್ನು ಬಿಜೆಪಿ ಹಾಗೂ ವೀರಶೈವ-ಲಿಂಗಾಯತ ಸಮಾಜ ಪ್ರಶ್ನಾತೀತ ನಾಯಕನೆಂದು ಒಪ್ಪಿಕೊಂಡಂತೆ ಕಾಂಗ್ರೆಸ್‌ನಲ್ಲಿ ಈ ಸಮಾಜದ ಪ್ರಶ್ನಾತೀತ ನಾಯಕ ಯಾರು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಸಮಾಜದ ಹಿರಿಯರು ಹಾಗೂ ಪಕ್ಷದ ಅತ್ಯಂತ ಹಿರಿಯ ನಾಯಕರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಪಕ್ಷ ಹಾಗೂ ಸಮಾಜದಲ್ಲಿ ಅವರದೇ ಆದ ಹಿರಿತನ, ಗೌರವವಿದೆ. ವೀರಶೈವ ಮಹಾಸಭಾ ಬೆಳವಣಿಗೆಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರಿಗಿಂತ ಮೊದಲೇ ರಾಜಕಾರಣ ಪ್ರವೇಶಿಸಿದ್ದರೂ ದಾವಣಗೆರೆಯಿಂದ ಆಚೆಗೆ ಯಡಿಯೂರಪ್ಪನವರಂತೆ ರಾಜಕೀಯವಾಗಿ ದೊಡ್ಡಮಟ್ಟದಲ್ಲಿ ಬೆಳೆಯಲಿಲ್ಲ, ಹತ್ತಾರು ವರ್ಷಗಳ ಕಾಲ ಕಾಂಗ್ರೆಸ್‌ಗೆ ಖಾಯಂ ಖಜಾಂಚಿಯಾಗಿದ್ದು ದೊಡ್ಡ ಮಟ್ಟದಲ್ಲಿ ಧನ ಸಹಾಯ ಮಾಡಿದ್ದಾರೆ. ಆದರೂ ಅವರಿಗೆ ಸಿಕ್ಕ ಅವಕಾಶಗಳು ಕಡಿಮೆ.

ಸದ್ಯ ಶಾಮನೂರು ಶಿವಶಂಕರಪ್ಪ ಅವರು ವಯಸ್ಸು ಹಾಗೂ ಆರೋಗ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ “ಪೋಷಕ ನಟ’ನ ಪಾತ್ರದಲ್ಲಿದ್ದಾರೆ. ಸದ್ಯ ನಮಗೆ ಮತಗಳನ್ನು ತಂದುಕೊಡುವ ಜನಾಕರ್ಷಕ, ಜನಮನ್ನಣೆ ಪಡೆದಿರುವ “ಹೀರೋ’ ಬೇಕಿದೆ ಎಂಬ ಮಾತುಗಳು ಕಾಂಗ್ರೆಸ್‌ ಪಕ್ಷದೊಳಗೆ ಕೇಳಿ ಬರುತ್ತಿವೆ. ಈ ದೃಷ್ಟಿಯಿಂದ ನೋಡುವುದಾದರೆ ಕಾಂಗ್ರೆಸ್‌ನಲ್ಲಿ ಲಿಂಗಾಯತರ ಸಂಖ್ಯೆಯೇನೂ ಕಡಿಮೆ ಇಲ್ಲ, ಅದರೆ “ನಾಯಕತ್ವ’ ನೀಡಬಲ್ಲವರು ಬೆರಳೆಣಿಕೆಯಷ್ಟು. ಇದ್ದವರನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈ ಕೊರತೆ ನಿವಾರಣೆಯಾದರೆ ಪಕ್ಷ ಹಾಗೂ ಸಮಾಜ ಎರಡಕ್ಕೂ ಉತ್ತಮ ಭವಿಷ್ಯವಿದೆ. ಈಗ ಅದು ಸಕಾಲ ಎಂಬುದು ಲಿಂಗಾಯತ ನಾಯಕರ ಅನಿಸಿಕೆಯಾಗಿದೆ.

ಈ ಸಾಲಿನಲ್ಲಿ ಬಂದು ನಿಲ್ಲುವವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ. ಇಬ್ಬರಿಗೂ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಖಂಡ್ರೆ ಅವರು ವೀರಶೈವ ಮಹಾಸಭಾದಲ್ಲೂ ಗುರು ತಿಸಿಕೊಂಡವರು. ರಾಜ್ಯವ್ಯಾಪಿ ಸುತ್ತಿದ ಅನುಭವವಿದೆ. ಮಠಗಳು, ಮಠಾಧೀಶರ ಸಂಪರ್ಕವಿದೆ, ಮಾತುಗಾರಿಕೆ ಬಲ್ಲವರು, ಗಟ್ಟಿತನ ರೂಪಿಸಿಕೊಂಡಿದ್ಧಾರೆ. ನಾಯಕತ್ವದ ಗುಣಗಳನ್ನು ಇನ್ನಷ್ಟು ಬೆಳೆಸಿಕೊಂಡರೆ ಸಮುದಾಯದ ನಾಯಕತ್ವ ಪಡೆಯುವ ಸಾಮರ್ಥ್ಯ ಇವರಿಗಿದೆ.

ಇನ್ನು ಎಂ.ಬಿ.ಪಾಟೀಲರು ಪ್ರಭಾವಿ ನಾಯಕ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರೂಪಿಸಿ ಅಲ್ಪಸಂಖ್ಯಾಕ ಸ್ಥಾನಮಾನ, ಮೀಸ ಲಾತಿಗಾಗಿ ಸ್ವತಂತ್ರ ಧರ್ಮ ಹೋರಾಟದ ಮೂಲಕ ಲಿಂಗಾಯತರಲ್ಲಿ ಜಾಗೃತಿ ಮೂಡಲು ಎಂ.ಬಿ.ಪಾಟೀಲರು ಕಾರಣ ಎಂಬ ಮಾತಿದೆ. ಈಗ ಎಂ.ಬಿ.ಪಾಟೀಲರು “ರಾಜತಾಂತ್ರಿಕ’ವಾಗಿ ಹೆಜ್ಜೆ ಇಡಲು ಹೊರಟಿದ್ದಾರೆ ಎನ್ನಲಾಗಿದೆ. ಕಾವೇರಿ ಜಲ ವಿವಾದವೂ ಸಹಿತ ನೀರಾವರಿ ಖಾತೆ ನಿರ್ವಹಿಸಿದ ಬಗ್ಗೆ ಅನುಭವ ಹೊಂದಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ವರಿಷ್ಠರೊಂದಿಗಿನ ಒಳ್ಳೆಯ ಸಂಪರ್ಕ, ಸಂಬಂಧವಿಟ್ಟುಕೊಂಡು ಪ್ರಭಾವಿ ನಾಯಕರಾಗಿದ್ದಾರೆ. ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ಹಲವು ಸಲ ಹೇಳಿಕೊಂಡಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕತ್ವಕ್ಕೆ ಖಂಡ್ರೆ ಮತ್ತು ಎಂ.ಬಿ.ಪಾಟೀಲರ ನಡುವೆ ಪೈಪೋಟಿ ಇದೆ. ಆದರೆ ಪಾಟೀಲರು ಪಕ್ಷಕ್ಕೆ “ಸಂಪನ್ಮೂಲ’ ವ್ಯಕ್ತಿಯಾಗಬಲ್ಲವರಾಗಿರುವುದರಿಂದ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ.

ಒಕ್ಕಲಿಗರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು, ಕುರುಬ ಸಮುದಾಯದ ಮಂದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಗೂ ಲಿಂಗಾಯತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತಮ್ಮ ಸಮಾಜದ ನಾಯಕರಾಗಿ ಒಪ್ಪಿಕೊಂಡಿದ್ಧಾರೆ. ಆದರೆ ಈಗ ಯಡಿಯೂರಪ್ಪ ಅವರ ರಾಜಕೀಯ ಚಿತ್ರಣ ಬದಲಾಗಿರುವುದರಿಂದ ಲಿಂಗಾ ಯತರಿಗೆ ಮತ್ತೂಬ್ಬ ನಾಯಕ ಬೇಕಿದೆ. ಹೀಗಾಗಿ ಸದ್ಯಕ್ಕೆ ಲಿಂಗಾ ಯತರು ಕಾಂಗ್ರೆಸ್‌ ಕಡೆ ಮುಖ ಮಾಡುವ ಸಾಧ್ಯತೆಗಳಿರು ವುದರಿಂದ ಅವರನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ ಲಿಂಗಾಯತರ ನಾಯಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.

ಕಾಂಗ್ರೆಸ್‌ ಪಕ್ಷದಲ್ಲಿ ರಾಜ್ಯ ಹಾಗೂ ದಿಲ್ಲಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ವೀರೇಂದ್ರ ಪಾಟೀಲರು ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ತರುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. 1989ರಲ್ಲಿ 178 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ತಂದುಕೊಟ್ಟ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕ್ರಮದಿಂದಾಗಿ ಲಿಂಗಾಯತ ಸಮಾಜ ಅಂದಿನಿಂದಲೂ ಕಾಂಗ್ರೆಸ್‌ನಿಂದ ದೂರ ಉಳಿದಿದೆ ಎಂಬುದನ್ನು ಕಾಂಗ್ರೆಸಿಗರೇ ಒಪ್ಪುತ್ತಾರೆ.
ಲಿಂಗಾಯತರಿಗೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌, ಯಡಿಯೂರಪ್ಪ ಅನಂತರ ಯಾರು ನಾಯಕರಾಗಬಲ್ಲರು ಎನ್ನುವುದು ಎಲ್ಲ ಪಕ್ಷಗಳಿಗೂ ಕಾಡುವ ಯಕ್ಷ ಪ್ರಶ್ನೆಯಾಗಿದೆ.

-ಎಂ.ಎನ್‌.ಗುರುಮೂರ್ತಿ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.