ತುಂಗಭದ್ರೆ ತುಂಬಿ ಹರಿದರೂ ನೀರು ಎರವಲು! ಮುಖ್ಯ ನಾಲೆಗೆ 3 ಟಿಎಂಸಿ ಕೊರತೆ

ಭದ್ರಾ ಡ್ಯಾಂನಲ್ಲೂ ನೀರು ಅಗತ್ಯಕ್ಕೆ ತಕ್ಕಷ್ಟೇ ಇದೆ ಎನ್ನುವ ಮಾತು ಕೇಳಿ ಬಂದಿದೆ.

Team Udayavani, Mar 1, 2023, 5:35 PM IST

ತುಂಗಭದ್ರೆ ತುಂಬಿ ಹರಿದರೂ ನೀರು ಎರವಲು! ಮುಖ್ಯ ನಾಲೆಗೆ 3 ಟಿಎಂಸಿ ಕೊರತೆ

ಕೊಪ್ಪಳ: ತುಂಗಭದ್ರಾ ಜಲಾಶಯ ಕಳೆದ ವರ್ಷ ಅತಿಯಾದ ಮಳೆಯಿಂದ ತುಂಬಿ ಹರಿದರೂ ಈಗ ಎರಡನೇ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಬೆಳೆ ಉಳಿಸಿಕೊಳ್ಳಲು ಎಡದಂಡೆ ಮುಖ್ಯ ಕಾಲುವೆಗೆ ಕನಿಷ್ಟ 3 ಟಿಎಂಸಿ ಅಡಿ ನೀರು ಬೇಕಿದೆ. ಈ ನೀರಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಬೆಳೆ ರಕ್ಷಣೆಗಾಗಿ ಭದ್ರಾ ಡ್ಯಾಂನಿಂದ ಅಥವಾ ಆಂಧ್ರ ಕೋಟಾದಡಿ ಕನಿಷ್ಟ 5 ಟಿಎಂಸಿ ಅಡಿ ಎರವಲು ಪಡೆಯಲು ಸಿಎಂ ಮೊರೆ ಹೋಗಿದ್ದಾರೆ.

ಹೌದು.. ತುಂಗಭದ್ರಾ ಜಲಾಶಯವು ಕೆಲವು ವರ್ಷಗಳಿಂದ ಅವ ಧಿಗೂ ಮುನ್ನವೇ ತುಂಬಿ ತಿಂಗಳುಗಟ್ಟಲೇ ಹೆಚ್ಚುವರಿ ನೀರು ಹರಿದು ನದಿಪಾತ್ರಗಳಿಗೆ ಬಿಡಲಾಗುತ್ತಿದೆ. ಡ್ಯಾಂನ ಸಾಮಾರ್ಥ್ಯ 133 ಟಿಎಂಸಿ ಅಡಿ ಇದ್ದರೂ 33 ಟಿಎಂಸಿಯಷ್ಟು ಹೂಳು ತುಂಬಿದ ಪರಿಣಾಮ 100 ಟಿಎಂಸಿಗೆ ಮಾತ್ರ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಇರುವ ನೀರು ನಿರ್ವಹಣೆ ಮಾಡುವಲ್ಲೂ ಅ ಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.

ಪ್ರತಿವರ್ಷವೂ ಮೊದಲ ಬೆಳೆಗೆ ನೀರು ಸಂಪೂರ್ಣ ದೊರೆತರೆ ಎರಡನೇ ಬೆಳೆಗೆ ನೀರಿನ ಕೊರತೆ ಎದುರಾಗುತ್ತಲೇ ಇದೆ. ಹಾಗಾಗಿ ನೀರಿನ ಕೊರತೆ ನೀಗಿಸಲು ನೀರಾವರಿ ಸಲಹಾ ಸಮಿತಿ ಪ್ರತಿ ವರ್ಷವೂ ಆನ್‌ ಆ್ಯಂಡ್‌ ಆಫ್‌ ಪದ್ಧತಿಯಡಿ ನೀರು ಹರಿಸುವ ತಂತ್ರಗಾರಿಕೆ ಮಾಡುತ್ತಿದೆ. ಆದರೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಡಿ ಬರುವ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಬೆಳೆಗೆ ಈ ವರ್ಷ ನೀರಿನ ಕೊರತೆ ಎದುರಾಗಲಿದೆ. ಕನಿಷ್ಟ 4-5 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿಯೂ ಇದು ಚರ್ಚೆಯಾಗಿದೆ.

ಪ್ರಸ್ತುತ ನಿಂತ ಬೆಳೆ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬಹುಪಾಲು ಎಡದಂಡೆ ಮುಖ್ಯ ನಾಲೆಯ ಕೋಟಾ ಮುಗಿಯುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 30 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ. ಇಷ್ಟು ನೀರಿನಲ್ಲಿ ಎಡ ಹಾಗೂ ಬಲದಂಡೆ ಭಾಗದ ಕಾಲುವೆಗಳಿಗೆ ನೀರು ಹಂಚಿಕೆಯಾಗಿವೆ. ನೀರಾವರಿ ಇಲಾಖೆ ಅಧಿಕಾರಿಗಳು ಎಡದಂಡೆ ನಾಲೆಗೆ ಮಾತ್ರ ನೀರಿನ ಕೊರತೆ ಎದುರಾಗಲಿದೆ ಎಂದೆನ್ನುತ್ತಿದ್ದಾರೆ. ಅಲ್ಲದೇ, ಮಾ. 31ರೊಳಗೆ ಕುಡಿಯುವ ನೀರು ಸೇರಿ ಎಲ್ಲ ಕೋಟಾವೂ ಮುಗಿಯಲಿದೆ ಎಂದೆನ್ನುತ್ತಿದ್ದಾರೆ. ಇದರಿಂದ ರೈತಾಪಿ ವಲಯದಲ್ಲಿ ಆತಂಕ ಮೂಡಿದೆ.

ಸಿಎಂಗೆ ಮೊರೆ: ಬೆಳೆದು ನಿಂತ ಬೆಳೆ ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಅರಿತು ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಕಾಡಾ ಅಧ್ಯಕ್ಷ ಶೇಷಗಿರಿರಾವ್‌ ಸೇರಿ ಇತರೆ ಜನಪ್ರತಿನಿಧಿಗಳು ಮಂಗಳವಾರ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಭದ್ರಾ ಡ್ಯಾಂನಿಂದ 5 ಟಿಎಂಸಿ ಅಥವಾ ಆಂಧ್ರ ಕೋಟಾದಡಿ ನೀರು ಉಳಿಕೆ ಮಾಡಿ ಬೆಳೆಗೆ ನೀರು ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ಶೀಘ್ರ ಚುನಾವಣೆ ಎದುರಾಗಲಿದ್ದು, ಈ ವೇಳೆ ನೀರಿನ ಸಮಸ್ಯೆ ಉದ್ಭವಿಸಿದರೆ ಅದು ನಮಗೆ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದೆನ್ನುವ ಮಾತುಗಳು ವ್ಯಕ್ತವಾಗಿದ್ದು, ಸಿಎಂ ಸಹಿತ ಸಕಾರಾತ್ಮಕ ಸ್ಪಂದಿಸಿ, ಈಗಿರುವ ಬೆಳೆ ರಕ್ಷಣೆ ಮಾಡಿಕೊಳ್ಳಲು ಪರ್ಯಾಯ ಅವಕಾಶಗಳೇನು ಎನ್ನುವ ಕುರಿತು ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳ ಜೊತೆಗೂ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಭದ್ರಾ ಡ್ಯಾಂನಲ್ಲೂ ನೀರು ಅಗತ್ಯಕ್ಕೆ ತಕ್ಕಷ್ಟೇ ಇದೆ ಎನ್ನುವ ಮಾತು ಕೇಳಿ ಬಂದಿದೆ. ತುಂಗಭದ್ರಾದಲ್ಲೇ ಇರುವ ಆಂಧ್ರ ಕೋಟದಡಿ ಕನಿಷ್ಟ 1 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಆಂಧ್ರ, ತೆಲಂಗಾಣ ಜೊತೆ ಚರ್ಚಿಸುವಂತೆಯೂ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎರಡನೇ ಬೆಳೆಗೆ ಈ ಬಾರಿ ನೀರಿ ಕೊರತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಭದ್ರಾ ಡ್ಯಾಮ್‌ನಿಂದ ಕನಿಷ್ಟ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಸಿಎಂ ಸಹಿತ ಸಕಾರಾತ್ಮಕವಾಗಿ ಸ್ಪಂದಿಸಿ, ಇಲಾಖೆ ಕಾರ್ಯದರ್ಶಿಗಳಿಗೆ ಮಾತನಾಡಿದ್ದಾರೆ. ನಿಂತ ಬೆಳೆ ರಕ್ಷಣೆ ಮಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.
ಸಂಗಣ್ಣ ಕರಡಿ, ಸಂಸದ

ಎರಡನೇ ಬೆಳೆಗೆ ನಮಗೆ ಕನಿಷ್ಟ 3 ಟಿಎಂಸಿ ನೀರಾದರೂ ಬೇಕಾಗುತ್ತದೆ. ಈ ಕುರಿತಂತೆ ನಾವೆಲ್ಲ ಶಾಸಕರು ನಿಯೋಗ ತೆರಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಭದ್ರಾ ಡ್ಯಾಂ ಅಥವಾ ಆಂಧ್ರ ಕೋಟಾದಲ್ಲಿ ನೀರು ಬಳಕೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದೇವೆ. ಸಿಎಂ ಸ್ಪಂದಿಸಿದ್ದು, ಯಾವ ಅವಕಾಶ ಇದೆಯೋ ಅದರಲ್ಲಿ ನೀರಿನ ಬಳಕೆಗೆ ಸಮ್ಮತಿ ಸೂಚಿಸಿದ್ದಾರೆ.
ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

5-koppala

Koppala: ಶಾರ್ಟ್ ಸರ್ಕ್ಯೂಟ್ ನಿಂದ ಓರ್ವ ಸಾವು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

KEA: ಪರೀಕ್ಷೆ ವೇಳೆ ತುಂಬು ತೋಳಿನ ಶರ್ಟ್‌ಗೆ ಕತ್ತರಿ!

KEA: ಪರೀಕ್ಷೆ ವೇಳೆ ತುಂಬು ತೋಳಿನ ಶರ್ಟ್‌ಗೆ ಕತ್ತರಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.