ರೋಚಕ ಏಕದಿನ ಹಣಾಹಣಿ; ಮಲಾನ್ ಶತಕ: ಬಾಂಗ್ಲಾದೆದುರು ಇಂಗ್ಲೆಂಡ್ ಜಯ
Team Udayavani, Mar 2, 2023, 5:30 AM IST
ಢಾಕಾ: ಸಣ್ಣ ಮೊತ್ತದ ರೋಚಕ ಏಕದಿನ ಹಣಾಹಣಿ ಯೊಂದರಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತು.
ಬಾಂಗ್ಲಾದೇಶ 47.2 ಓವರ್‌ಗಳಲ್ಲಿ 209ಕ್ಕೆ ಆಲೌಟಾದರೆ, ಇಂಗ್ಲೆಂಡ್ 48.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ವನ್‌ಡೌನ್ ಆಟಗಾರ ಡೇವಿಡ್ ಮಲಾನ್ ಅವರ ಅಜೇಯ ಶತಕ ಇಂಗ್ಲೆಂಡ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 114 ರನ್ ಹೊಡೆದರು (145 ಎಸೆತ, 8 ಬೌಂಡರಿ, 4 ಸಿಕ್ಸರ್).
ಇಂಗ್ಲೆಂಡ್ ನಿರಂತರವಾಗಿ ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದಾಗ ಒಂದೆಡೆ ಕ್ರೀಸ್ ಕಚ್ಚಿಕೊಂಡು ನಿಂತ ಡೇವಿಡ್ ಮಲಾನ್ ಬಾಂಗ್ಲಾದ ಆಸೆಗೆ ತಣ್ಣೀರೆರಚಿದರು. ಮೊದಲ ಓವರ್‌ನಲ್ಲೇ ಜೇಸನ್ ರಾಯ್ (4) ಅವರನ್ನು ಕಳೆದುಕೊಂಡ ಬಳಿಕ ಮಲಾನ್ ಕ್ರೀಸ್ ಇಳಿದಿದ್ದರು. 65ಕ್ಕೆ 4 ವಿಕೆಟ್, 103ಕ್ಕೆ 5 ವಿಕೆಟ್, 161ಕ್ಕೆ 7 ವಿಕೆಟ್… ಹೀಗೆ ಇಂಗ್ಲೆಂಡ್ ಹಂತ ಹಂತಕ್ಕೂ ಆತಂಕ ಎದುರಿಸುತ್ತ ಹೋಯಿತು. ಆದರೆ ಮಲಾನ್ ಮಾತ್ರ ಪಟ್ಟು ಸಡಿಲಿಸಲಿಲ್ಲ. ಅವರಿಗೆ ವಿಲ್ ಜಾಕ್ಸ್ (26), ಕೊನೆಯಲ್ಲಿ ಆದಿಲ್ ರಶೀದ್ (ಅಜೇಯ 17) ಉತ್ತಮ ಬೆಂಬಲ ನೀಡಿದರು.
ಬಾಂಗ್ಲಾವನ್ನು ನಿಯಂತ್ರಿಸುವಲ್ಲಿ ಇಂಗ್ಲೆಂಡ್‌ನ ನಾಲ್ವರು ಬೌಲರ್‌ಗಳ ಪಾಲಿತ್ತು. ಜೋಫÅ ಆರ್ಚರ್, ಮಾರ್ಕ್ ವುಡ್, ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಉರುಳಿಸಿದರು. ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವ ರೆಂದರೆ ನಜ್ಮುಲ್ ಹುಸೇನ್ (58) ಮತ್ತು ಮಹಮದುಲ್ಲ (31).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.