ಅವನ ಮೊದಲ ಪತ್ನಿಯೇ ಈಗ ಇವನ 2ನೇ ಪತ್ನಿ, ಇವನ ಮೊದಲ ಪತ್ನಿ ಈಗ ಆತನ 2ನೇ ಪತ್ನಿ.!
ಪರಸ್ಪರರ ಗಂಡಂದಿರನ್ನೇ ಮದುವೆಯಾಗಿರುವ ಮಹಿಳೆಯರು.!
Team Udayavani, Mar 2, 2023, 1:22 PM IST
ಪಾಟ್ನಾ: ಇಬ್ಬರು ಮಹಿಳೆಯರು ಪರಸ್ಪರರ ಗಂಡಂದಿರನ್ನೇ ಮದುವೆಯಾಗಿರುವ ಪ್ರಕರಣ ಬಿಹಾರದಲ್ಲಿ ನಡೆದಿರುವುದು ಖಗರಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನೀರಜ್ ಕುಮಾರ್ ಸಿಂಗ್ ಎನ್ನುವ ವ್ಯಕ್ತಿ 2009 ರಲ್ಲಿ ಚೌತಮ್‌ನಲ್ಲಿರುವ ಪಸ್ರಾಹ ಗ್ರಾಮದ ರೂಬಿದೇವಿ ಎನ್ನುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಒಟ್ಟು 4 ಮಕ್ಕಳಿದ್ದಾರೆ. ಕಳೆದ ವರ್ಷ ರೂಬಿದೇವಿ ಪೋಷಕರ ಮನೆ ಬಳಿ ಇರುವ ಪ್ರಿಯಕರ ಮುಕೇಶ್ ಕುಮಾರ್ ಸಿಂಗ್ ಅವರೊಟ್ಟಿಗೆ ಓಡಿ ಹೋಗಿ ಮದುವೆಯಾಗಿದ್ದಾರೆ.
ಒಂದು ಹೆಣ್ಣು ಮಗುವನ್ನು ನೀರಜ್ ನೊಂದಿಗೆ ಬಿಟ್ಟು, ಪ್ರಿಯಕರ ಮುಕೇಶ್ ಅವರೊಂದಿಗೆ ರೂಬಿದೇವಿ ವಿವಾಹವಾಗಿದ್ದಾರೆ. ಇಲ್ಲಿ ಗಮನ ಸೆಳೆಯುವ ಮತ್ತೊಂದು ವಿಚಾರವೇನೆಂದರೆ ಮುಕೇಶ್ ಕುಮಾರ್ ಸಿಂಗ್ ಅವರಿಗೆ ಈಗಾಗಲೇ ಮದುವೆಯಾಗಿ 2 ಮಕ್ಕಳಿದ್ದಾರೆ. ಇಷ್ಟು ಮಾತ್ರವಲ್ಲದೇ ಮುಕೇಶ್ ಅವರ ಮೊದಲ ಪತ್ನಿಯ ಹೆಸರು ಕೂಡ ರೂಬಿದೇವಿ.!
ಮುಕೇಶ್ ಅವರ ಮೊದಲ ಪತ್ನಿ ರೂಬಿದೇವಿ, ಪತಿಯಿಂದ ದೂರವಾಗಿದ್ದಾರೆ. ಮುಕೇಶ್ ತನ್ನ ಹೊಸ ಪ್ರಿಯತಮೆ ರೂಬಿದೇವಿ ಅವರೊಂದಿಗೆ ವಾಸಿಸುತ್ತಿದ್ದಾರೆ.
ಕೆಲ ಸಮಯದ ಬಳಿಕ ನೀರಜ್ ಕುಮಾರ್ ಸಿಂಗ್ ಅದ್ಯಾಗೋ ತನ್ನ ಪತ್ನಿ ರೂಬಿದೇವಿಯನ್ನು ವರಿಸಿರುವ ಮುಕೇಶ್ ಕುಮಾರ್ ಅವರ ಮೊದಲ ಪತ್ನಿ ರೂಬಿದೇವಿ ಅವರ ಪೋನ್ ನಂಬರ್ ಪಡೆದುಕೊಳ್ಳುತ್ತಾರೆ. ಒಂದು ಬಾರಿ ಫೋನಿನಲ್ಲಿ ನೀರಜ್ ಹಾಗೂ ರೂಬಿದೇವಿ ಮಾತನಾಡಿದ ಬಳಿಕ ಇಬ್ಬರು ನಿತ್ಯ ಫೋನಿನಲ್ಲಿ ಮಾತನಾಡಲು ಶುರು ಮಾಡುತ್ತಾರೆ.
ಇಬ್ಬರ ನಡುವಿನ ಮಾತು ಆಪ್ತವಾಗಿ, ಪ್ರೇಮಕ್ಕೆ ತಿರುಗುತ್ತದೆ. ಇತ್ತೀಚೆಗೆ(ಫೆ.18 ರಂದು) ಮುಕೇಶ್ ಮೊದಲ ಪತ್ನಿ ರೂಬಿದೇವಿ, ನೀರಜ್ ಕುಮಾರ್ ಇಬ್ಬರು ಕೋರ್ಟಿನಲ್ಲಿ ಮದುವೆಯಾಗಿದ್ದಾರೆ. ನೀರಜ್ ಕುಮಾರ್ ರೂಬಿದೇವಿ ಮೂವರು ಮಕ್ಕಳೊಂದಿಗೆ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ನೀರಜ್ ಕುಮಾರ್ ತನ್ನ ಮೊದಲ ಪತ್ನಿಯೊಂದಿಗೆ ಪರಾರಿಯಾಗಿ ಮದುವೆಯಾದ ಮುಕೇಶ್ ಅವರಿಗೆ ಬುದ್ಧಿ ಕಲಿಸಬೇಕೆನ್ನುವ ನಿಟ್ಟಿನಲ್ಲಿ ಮುಕೇಶ್ ಅವರ ಮೊದಲ ಪತ್ನಿಯನ್ನು ಪ್ರೀತಿಸಿ ತನ್ನ ಬಲೆಗೆ ಬೀಳಿಸಿದ್ದ ಎಂದು ವರದಿಯೊಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.