ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಗೆ ಎಲ್ಲರೂ ಕೈ ಜೋಡಿಸಿ


Team Udayavani, Mar 2, 2023, 2:50 PM IST

tdy-15

ಶ್ರೀರಂಗಪಟ್ಟಣ: ಪ್ರಜಾಧ್ವನಿ ಯಾತ್ರೆಗೆ ಪ್ರತಿ ಗ್ರಾಮಗಳಿಂದಲೂ ಕಾರ್ಯಕರ್ತರನ್ನು ಕರೆ ತರುವ ಮೂಲಕ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ಸಂಘಟನೆಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಮಾ.12ರಂದು ನಡೆಯುವ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂವ ಭಾವಿ ಸಭೆಯಲ್ಲಿ ಮಾತನಾಡಿ, ಕೇವಲ 50- 60 ದಿನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿದೆ. ಕಾಂಗ್ರೆಸ್‌ ಕಾರ್ಯಕರ್ತರು ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತರುವ ಮೂಲಕ ಸಂಘಟನೆಗೆ ಆದ್ಯತೆ ನೀಡಬೇಕು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇಂದಿನ ಸರ್ಕಾರಗಳು ಜನವಿರೋಧಿ ಕೆಲಸಗಳನ್ನು ಮಾಡುತ್ತಿವೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಜನಪರ ಕೆಲಸ ಮಾಡಲು ಜನರೊಂದಿಗೆ ಇರಬೇಕು. ಅದಕ್ಕೆ ನಾವೆಲ್ಲರೂ ನಿಮಗೆ ಸಹಕಾರ ನೀಡಲಿದ್ದು, ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಪ್ರಜಾಧ್ವನಿ ಯಾತ್ರೆ ಮಾರ್ಗ: ಮಾ.12ರ ಸಂಜೆ 4 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರೊಂದಿಗೆ ಪ್ರಜಾಧ್ವನಿ ಯಾತ್ರೆ ಪಾಂಡವಪುರ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬರಲಿದೆ. ಶ್ರೀರಂಗಪಟ್ಟಣ ಗಡಿಭಾಗದ ಕಪರನಕೊಪ್ಪಲು ಗ್ರಾಮದ ಬಳಿ ಪಟ್ಟಣ, ಬೆಳಗೊಳ, ಕೆ.ಶೆಟ್ಟಹಳ್ಳಿ ಹೋಬಳಿಯ ಕಾರ್ಯಕರ್ತರು ಸ್ವಾಗತಿಸಿ, ಹೆದ್ದಾರಿಯಲ್ಲಿ ರ್ಯಾಲಿ ಮೂಲಕ ಆಗಮಿಸಿ, ಪಟ್ಟಣದ ಕಲ್ಯಾಣ ಮಂಟಪದಲ್ಲಿ ಮುಖಂಡರು ಮಾತನಾಡಲಿದ್ದಾರೆ.

ನಂತರ ಶ್ರೀನಿವಾಸ ಅಗ್ರಹಾರ ಗ್ರಾಮದ ಮಾರ್ಗವಾಗಿ ಶಾಂತಿಕೊಪ್ಪಲಿನಿಂದ ಮಹದೇವಪುರ ಗ್ರಾಮಕ್ಕೆ ತೆರಳಿ ಕಾರ್ಯಕರ್ತರ ಸಭೆ ನಡೆಯಲಿದೆ. ಮಂಡ್ಯದ ಕೊಪ್ಪಲಿನಿಂದ ಅರಕೆರೆ ಹೋಬಳಿ ಕಾರ್ಯಕರ್ತರು ರ್ಯಾಲಿ ಮೂಲಕ ಅರಕೆರೆ ತೆರಳಿ, ಬಹಿರಂಗ ಸಭೆ ನಡೆಯಲಿದೆ. ಆ ನಂತರ ಕೊತ್ತತ್ತಿ ಮಾರ್ಗವಾಗಿ ಮಂಡ್ಯಕ್ಕೆ ಪ್ರಜಾಧ್ವನಿ ಯಾತ್ರೆ ತೆರಳಲಿದೆ ಎಂದು ತಿಳಿಸಿದರು.

ಜೆಡಿಎಸ್‌, ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು. ಶ್ರೀರಂಗ ಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಪ್ರಕಾಶ್‌ ಮತ್ತು ಮುಖಂಡರು ಹಾಜರಿದ್ದರು.

ಟಾಪ್ ನ್ಯೂಸ್

HDK 2

BJP-JDS ಮೈತ್ರಿಯಲ್ಲಿ ಬಿರುಕು?: ದಿಲ್ಲಿಗೆ ದೌಡಾಯಿಸಿದ ಬಿ.ವೈ. ವಿಜಯೇಂದ್ರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

highcort dharwad

Karkala; ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಆರೋಪ : ಕೃಷ್ಣ ನಾಯಕ್‌ ಅರ್ಜಿ ವಜಾ

Parameshwar

Reservation; ಒಳ ಮೀಸಲಾತಿ ಜಾರಿಗೆ ಎಡಗೈ, ಬಲಗೈ ಒಪ್ಪಿಗೆ?

K-H-Muniyappa

Ration Card; ಬಿಪಿಎಲ್‌, ಅಂತ್ಯೋದಯಕ್ಕೆ ಆಹಾರ ಕಿಟ್‌: ಕೆ.ಎಚ್‌. ಮುನಿಯಪ್ಪ

UT-Kahder

Port Development: ಮಂಗಳೂರು ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಕ್ರಮ: ಯು.ಟಿ.ಖಾದರ್‌

Chaluvarayaswamy

Government ಉರುಳಿಸುವುದೇ ಕುಮಾರಸ್ವಾಮಿ ಕೆಲಸ: ಸಚಿವ ಚಲುವರಾಯಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಔದಾರ್ಯತೆ ತೋರಲಿ: ಎಚ್‌ಡಿಕೆ

H. D. Kumaraswamy: ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಔದಾರ್ಯತೆ ತೋರಲಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

BY Election: ಪಕ್ಷ ಸಂಘಟನೆ ಗುರಿ: ನಿಖಿಲ್‌ ಕುಮಾರಸ್ವಾಮಿ

BY Election: ಪಕ್ಷ ಸಂಘಟನೆ ಗುರಿ: ನಿಖಿಲ್‌ ಕುಮಾರಸ್ವಾಮಿ

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

Mandya: 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌

Mandya: 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

HDK 2

BJP-JDS ಮೈತ್ರಿಯಲ್ಲಿ ಬಿರುಕು?: ದಿಲ್ಲಿಗೆ ದೌಡಾಯಿಸಿದ ಬಿ.ವೈ. ವಿಜಯೇಂದ್ರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

baby 2

KSRTC ಬಸ್‌ನಲ್ಲೇ ಅವಳಿ ಮಕ್ಕಳು ಜನನ!

highcort dharwad

Karkala; ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಆರೋಪ : ಕೃಷ್ಣ ನಾಯಕ್‌ ಅರ್ಜಿ ವಜಾ

Parameshwar

Reservation; ಒಳ ಮೀಸಲಾತಿ ಜಾರಿಗೆ ಎಡಗೈ, ಬಲಗೈ ಒಪ್ಪಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.