ಪುತ್ರಿಯಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಖುಲಾಸೆ
Team Udayavani, Mar 3, 2023, 2:32 AM IST
ಮಂಗಳೂರು: ಇಬ್ಬರು ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.
2021ರ ಜೂನ್ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿ ಅಬ್ದುಲ್ ಹಕೀಂ (48) ಅವರ ಮೇಲೆ ಅವರ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು. ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ಪೋಕ್ಸೋ ಕಾಯ್ದೆಯಡಿ ದಾಖಲಾಗಿತ್ತು.
ಕಿರಿಯ ಮಗಳು ತನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ಟಿಎಸ್ಸಿ ಪೋಕ್ಸೋ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಸಾಬೀತು ಮಾಡಲು ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲ ಎಂದು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಆರೋಪಿ ಕಳೆದ ಒಂದೂವರೆ ವರ್ಷಗಳಿಂದ ಜೈಲುವಾಸ ಅನಭವಿಸಿದ್ದರು. ಆರೋಪಿ ಪರ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ರುಬಿಯಾ ಅಖ್ತರ್, ಶ್ರೀನಿಧಿ ಪ್ರಕಾಶ್, ನಿರೀಕ್ಷಾ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Bantwal: ಬಿ.ಸಿ.ರೋಡ್ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್ ಪ್ಲ್ಯಾನ್
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.