ಕಾಣಿಕೆ ಹಾಕಲು ಹುಂಡಿಯೇ ಇಲ್ಲದ ಚಿಲ್ಕೂರು “ವೀಸಾ ಬಾಲಾಜಿ” ದೇವಸ್ಥಾನದ ವಿಶೇಷತೆ ಗೊತ್ತಾ?

108 ಪ್ರದಕ್ಷಿಣೆಯೇ ಈ ದೇವರಿಗೆ ಹರಕೆ... ಇಲ್ಲಿ ದೇವರಿಗೆ ಕಾಣಿಕೆ ಹಾಕುವಂತಿಲ್ಲ..

ಸುಧೀರ್, Mar 11, 2023, 6:07 PM IST

ಕಾಣಿಕೆ ಹಾಕಲು ಹುಂಡಿಯೇ ಇಲ್ಲದ ಚಿಲ್ಕೂರು “ವೀಸಾ ಬಾಲಾಜಿ” ದೇವಸ್ಥಾನದ ವಿಶೇಷತೆ ಗೊತ್ತಾ?

ದೇಶದಲ್ಲಿ ಜನರು ತಮ್ಮ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ದೇವರ ಮೊರೆ ಹೋಗುವುದನ್ನು ನಾವು ನೋಡುತ್ತೇವೆ ಅದರಲ್ಲಿ, ಉದ್ಯೋಗ, ಅರೋಗ್ಯ ಸಮಸ್ಯೆ, ಮದುವೆ, ಮನೆ ನಿರ್ಮಾಣ ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ನಿವಾರಿಸು ಎಂದು ದೇವರಲ್ಲಿ ಬೇಡೋಕೊಳ್ಳುವುದುಂಟು, ಆದರೆ ತೆಲಂಗಾಣದಲ್ಲಿರುವ ದೇವಾಲಯ ಇದಕ್ಕೆಲ್ಲ ಭಿನ್ನವಾಗಿದೆ, ಅಲ್ಲದೆ ಇಲ್ಲಿಗೆ ದಿನವೊಂದಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ, ಹಾಗಾದರೆ ಅಷ್ಟೊಂದು ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಕಾರಣವೇನು ಈ ದೇವರಲ್ಲಿರುವ ಪವಾಡವಾದರೂ ಏನು ಎಂಬುದನ್ನು ತಿಳಿಯೋಣಾ…

ತೆಲಂಗಾಣದ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ ಬಹಳ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನವಾಗಿದೆ. ಇಲ್ಲಿ ದಿನವೊಂದಕ್ಕೆ ಸಾವಿರಾರು ಮಂದಿ ಭಕ್ತರು ಈ ದೇವಳಕ್ಕೆ ಬರುತ್ತಾರೆ. ಇದರಲ್ಲಿ ಸುಮಾರು 80% ಮಂದಿ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವವರು ಅಲ್ಲದೆ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲೆಂದು ವಿದೇಶಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆಯ ಹೆಚ್ಚಾಗಿರುತ್ತದೆ ಕಾರಣ, ವಿದೇಶಕ್ಕೆ ತೆರಳಬೇಕಾದರೆ ವೀಸಾ ಅಗತ್ಯ.. ಕೆಲವೊಂದು ಜನರಿಗೆ ವೀಸಾ ಬಹು ಬೇಗನೆ ಸಿಗುತ್ತದೆ. ಇನ್ನು ಕೆಲವರಿಗೆ ವೀಸಾ ಸಿಗುವುದು ತಡವಾಗಬಹುದು ಇಲ್ಲವೇ ಸಿಗದೇ ಇರಬಹುದು ಆದರೆ ಚಿಲ್ಕೂರಿನಲ್ಲಿರು ಬಾಲಾಜಿ ದೇವಸ್ಥಾನಕ್ಕೆ ಬಂದು ದೇವರಲ್ಲಿ ವೀಸಾ ಆದಷ್ಟು ಬೇಗ ಕರುಣಿಸುವಂತೆ ಮಾಡು ದೇವರೇ ಎಂದು ಬೇಡಿಕೊಂಡರೆ ಕೆಲವೇ ದಿನಗಳಲ್ಲಿ ವೀಸಾ ಬರುತ್ತಂತೆ ಅಷ್ಟು ಶಕ್ತಿ ಈ ವೆಂಕಟೇಶ್ವರ ದೇವರಿಗೆ ಇದೆಯಂತೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತರು.

ಇಲ್ಲಿಗೆ ಬರುವ ಭಕ್ತರಲ್ಲಿ ಹೆಚ್ಚಿನವರು ವಿದೇಶಗಳಿಗೆ ತೆರಳಲು ತಯಾರಿ ನಡೆಸಿ ಕೇವಲ ವೀಸಾ ಬರುವುದಕೋಸ್ಕರ ಕಾಯುವವರು ಅಂಥವರು ಈ ದೇವಸ್ಥಾನಕ್ಕೆ ಬಂದು ದೇವರಲ್ಲಿ ಬೇಡಿಕೊಂಡರೆ ತಮ್ಮ ಬೇಡಿಕೆ ಈಡೇರುತ್ತದೆ ಎನ್ನುತ್ತಾರೆ. ಹಾಗಾಗಿ ಈ ದೇವರಿಗೆ ‘ವೀಸಾ ಬಾಲಾಜಿ ದೇವಸ್ಥಾನ’ ಎಂದು ಕರೆಯುತ್ತಾರೆ.

ವೀಸಾ ಬಾಲಾಜಿ ಹೆಸರು ಬಂದ ಹಿನ್ನೆಲೆ :
ನಮ್ಮ ದೇಶದಲ್ಲಿ ಉದ್ಯೋಗಾವಕಾಶಕ್ಕೆ, ವಿದ್ಯಾಭ್ಯಾಸಕ್ಕೆ ಎಲ್ಲಾ ಅವಕಾಶಗಳು ಇದ್ದರೂ ಇಲ್ಲಿನ ಕೆಲ ಜನರಿಗೆ ವಿದೇಶಕ್ಕೆ ತೆರಳಿ ಅಲ್ಲಿ ಉದ್ಯೋಗ ಮಾಡಬೇಕು ಹೆಚ್ಚಿನ ಸಂಪಾದನೆ ಮಾಡಬೇಕು ಎಂಬುದು  ಆಸೆ. ಅದರಂತೆ ಕೆಲವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಕೆಲಸ, ಹೆಚ್ಚಿನ ಸಂಬಳ ದೊರೆಯುತ್ತದೆ ಎಂದು ವಿದೇಶಕ್ಕೆ ತೆರಳಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಹಾಗೆಯೆ ಹೈದರಾಬಾದಿನ ಹೆಚ್ಚಿನ ಯುವಕ/ ಯುವತಿಯರು ತಮ್ಮ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ ಅಲ್ಲದೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡರು ವೀಸಾ ಮಾತ್ರ ಬಂದಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ತೆಲಂಗಾಣದ ಚಿಲ್ಕೂರಿನಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ತೆರಳಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ವೀಸಾ ಸಮಸ್ಯೆಯಾಗಿದೆ ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದರು. ಅದರಂತೆ ದೇವರಲ್ಲಿ ಬೇಡಿದ ಕೆಲ ದಿನಗಳಲ್ಲೇ ಕೆಲವು ಮಂದಿಗೆ ವೀಸಾ ಬಂದಿದೆ ಅಂದಿನಿಂದ ಹೈದರಾಬಾದ್ ಸುತ್ತಮುತ್ತ ಯಾರೇ ವಿದೇಶಕ್ಕೆ ತೆರಳುವುದಾದರೂ ವೀಸಾ ಪ್ರಕ್ರಿಯೆಗಾಗಿ ಈ ದೇವರಲ್ಲಿ ಪ್ರಾರ್ಥನೆ ಸಲ್ಲುಸುತ್ತಿದ್ದರು. ಕ್ರಮೇಣ ಈ ದೇವಸ್ಥಾನಕ್ಕೆ ವೀಸಾ ಸಂಬಂಧಿತ ಜನರೇ ಹೆಚ್ಚೆಚ್ಚು ಬರಲು ಆರಂಭವಾಯಿತು ಅಂದಿನಿಂದ ಈ ಬಾಲಾಜಿ ದೇವಸ್ಥಾನವನ್ನು ‘ವೀಸಾ ಬಾಲಾಜಿ ದೇವಸ್ಥಾನ’ ಎಂದು ಕರೆಯಲು ಆರಂಭವಾಯಿತು.

ಇದೀಗ ಈ ದೇವಸ್ಥಾನಕ್ಕೆ ದೇಶದ ನಾನಾ ಮೂಲೆಗಳಿಂದ ಭಕ್ತರು ಬರುತ್ತಾರೆ ಅದರಲ್ಲಿ ಹೆಚ್ಚಿನವರು ವಿದೇಶಕ್ಕೆ ತೆರಳುವವರೇ ಆಗಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಹೇಳುತ್ತಾರೆ.

ದೇವಸ್ಥಾನದ ವಿಶೇಷತೆ:
ಅಂದಹಾಗೆ ಈ ವೀಸಾ ಬಾಲಾಜಿ ದೇವಸ್ಥಾನದಲ್ಲಿ ಹುಂಡಿಗಳಿಲ್ಲ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ದೇವರಿಗೆ ಕಾಣಿಕೆ ಹಾಕುವಂತಿಲ್ಲ ಬದಲಾಗಿ ಭಕ್ತರು ತಾವು ಬೇಡಿದ ಬೇಡಿಕೆ ಈಡೇರಿದಲ್ಲಿ ದೇವರಿಗೆ 108 ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರೆ ಅದೇ ಕಾಣಿಕೆ. ಹಾಗಾಗಿ ಇಲ್ಲಿನ ದೇವರ ಮೇಲೆ ಇಲ್ಲಿಗೆ ಬರುವ ಭಕ್ತರಿಗೂ ಅಪಾರ ನಂಬಿಕೆ, ಇಲ್ಲಿನ ದೇವರು ಭಕ್ತರಿಂದ ಯಾವುದೇ ರೀತಿಯಲ್ಲಿ ಹಣವನ್ನು ಪಡೆಯುವುದಿಲ್ಲ ಹಾಗಾಗಿ ಈ ದೇವಸ್ಥಾನದಲ್ಲಿ ಕಾಣಿಕೆ ಹಾಕಲು ಹುಂಡಿಯೇ ಇಲ್ಲ.

ದೇವರಲ್ಲಿ ಪ್ರಾರ್ಥನೆ ಮಾಡಲು ಬರುವವರು ದೇವರಿಗೆ ಮೂರು ಸುತ್ತು ಪ್ರದಕ್ಷಿಣೆ ಬಂದು ತಮ್ಮ ಬೇಡಿಕೆಗಳನ್ನು ಬೇಡಿಕೊಳ್ಳುತ್ತಾರೆ ಅದರಂತೆ ತಮ್ಮ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಬಂದು ದೇವರಿಗೆ 108 ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸಿದರೆ ಅದೇ ಕಾಣಿಕೆ, ಅದೇ ಹರಕೆ ಸಂದಾಯ ಮಾಡಿದಂತೆ.

ವಿಶೇಷ ದರ್ಶನಕ್ಕೆ ಅನುಮತಿ ಇಲ್ಲ
ಈ ದೇವಸ್ಥಾನದ ಇನ್ನೊಂದು ವಿಶೇಷತೆ ಏನೆಂದರೆ ಎಷ್ಟೇ ಶ್ರೀಮಂತ ವ್ಯಕ್ತಿಯಾದರೂ ಸರತಿ ಸಾಲಿನಲ್ಲೇ ನಿಲ್ಲಬೇಕು ಆಗ ಮಾತ್ರ ಈ ದೇವರ ದರುಶನಕ್ಕೆ ಅವಕಾಶ, ಎಷ್ಟೇ ಶ್ರೀಮಂತ ವ್ಯಕ್ತಿಯಾಗಿರಲಿ ಅವರು ಸಾಮಾನ್ಯರು ನಿಂತ ಸಾಲಿನಲ್ಲೇ ನಿಲ್ಲಬೇಕು ಹಾಗಾಗಿ ಇಲ್ಲಿಗೆ ಬರುವ ಎಲ್ಲರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

*ಸುಧೀರ್ ಎ. ಪರ್ಕಳ

ಟಾಪ್ ನ್ಯೂಸ್

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.