ಗಯಾನ ಭಾರತದ ಪಾಲಿಗೆ ಹೊಸ ತೈಲ ನಿಧಿ


Team Udayavani, Mar 5, 2023, 6:50 AM IST

ಗಯಾನ ಭಾರತದ ಪಾಲಿಗೆ ಹೊಸ ತೈಲ ನಿಧಿ

ಇಂಧನ ಸ್ವಾವಲಂಬನೆಯ ಅಗತ್ಯ ಈಗ ಪ್ರತಿಯೊಂದು ರಾಷ್ಟ್ರಕ್ಕೂ ಮನವರಿಕೆಯಾಗಿದೆ. ತೈಲ, ಅನಿಲದ ಕೊರತೆ ಮತ್ತು ಏಕಸ್ವಾಮ್ಯದಿಂದ ಯುರೋಪ್‌ ರಾಷ್ಟ್ರಗಳಲ್ಲಿ ಎದುರಿಸು ತ್ತಿರುವ ಸಮಸ್ಯೆಗಳು ಎಲ್ಲರ ಕಣ್ಣ ಮುಂದಿವೆ. ಇಂಥ ಹೊತ್ತಿನಲ್ಲಿ ತೈಲ ನಿಕ್ಷೇಪಗಳಿಂದ ಜಗತ್ತಿನ ಗಮನ ಸೆಳೆದಿರುವ ಗಯಾನ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಭಾರತಕ್ಕೀಗ ಸುವರ್ಣ ಅವಕಾಶ ಸಿಕ್ಕಿದೆ. ಈಗಾಗಲೇ ಆರ್ಥಿಕ, ಆರೋಗ್ಯ, ಶಿಕ್ಷಣ ಸಹಿತ ಹಲವು ರೀತಿಯಲ್ಲಿ ಗಯಾನಕ್ಕೆ ಭಾರತ ನೆರವು ನೀಡಿದೆ. ಇದು ಇಂಧನ ವಿಷಯದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ವರದಾನವಾಗಲಿದೆ.

ಏನಾಗಿದೆ ?
ಇಡೀ ವಿಶ್ವದಲ್ಲೇ ಈಗ ನೈಸರ್ಗಿಕ ಇಂಧನದ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ಸ್ವಾವಲಂಬನೆ ಸಾಧಿಸು ವುದು ಪ್ರತಿಯೊಂದು ರಾಷ್ಟ್ರಕ್ಕೂ ಅನಿವಾರ್ಯ ವಾಗಿದೆ. ಈ ನಡುವೆ ಭಾರತದ ಪಾಲಿಗೆ ಆಶಾ ದಾಯಕವಾಗಿ ಕಾಣಿಸಿರುವುದು ಗಯಾನ. ಗಯಾನ ಪ್ರಸ್ತುತ ದಕ್ಷಿಣ ಅಮೆರಿಕದ ಎರಡನೇ ಬಡ ರಾಷ್ಟ್ರ. ಆದರೆ ಇಲ್ಲಿ ದೊರೆತಿರುವ ತೈಲ ನಿಕ್ಷೇಪವು ಮುಂದಿನ ದಿನ ಗಳಲ್ಲಿ ಈ ದೇಶವನ್ನು ಅತ್ಯಂತ ಶ್ರೀಮಂತ ಗೊಳಿಸುವ ಸಾಧ್ಯತೆ ಇದೆ.

ಹೇಗೆ?
ದಕ್ಷಿಣ ಅಮೆರಿಕದ ರಾಷ್ಟ್ರಗಳು ಶೀಘ್ರದಲ್ಲೇ ತಮ್ಮ ತೈಲೋದ್ಯಮವನ್ನು ವಿಸ್ತರಿಸಲು ಬಯಸುತ್ತಿದೆ. ಗಯಾನವು ಕಡಲಾಚೆಗೆ ಸುಮಾರು 120 ಮೈಲುಗಳಷ್ಟು ದೂರದಲ್ಲಿ ಅತೀ ದೊಡ್ಡ ಬಂದರು ನಗರವನ್ನು ಹೊಂದಿದ್ದು, ಇದು ಸುಮಾರು 6.6 ಮಿಲಿ ಯನ್‌ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ 2015ರಲ್ಲಿ ಪತ್ತೆ ಹಚ್ಚಲಾದ ಕಚ್ಚಾ ತೈಲ ನಿಕ್ಷೇಪ ಗಳು ಮತ್ತು 2019ರಲ್ಲಿ ಕಂಡುಹಿಡಿದ ಆವಿಷ್ಕಾರಗಳು ಇಂದು ಜಗತ್ತಿನ ಗಮನ ಸೆಳೆಯುತ್ತಿವೆ. ಇಲ್ಲಿನ 14 ಬ್ಲಾಕ್‌ಗಳಲ್ಲಿ 11 ಶತಕೋಟಿ ಗಿಂತಲೂ ಹೆಚ್ಚು ಬ್ಯಾರೆಲ್‌ ತೈಲ ಗಳನ್ನು ಹೊರತೆಗೆಯಲು ಎಪ್ರಿಲ್‌ ಮಧ್ಯ ಭಾಗದ ಬಳಿಕ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಪಾಲ್ಗೊಳ್ಳಲು ಸರಕಾರಿ ಸ್ವಾಮ್ಯದ ಭಾರತೀಯ ಕಂಪೆನಿಗಳಿಗೂ ಆಹ್ವಾನ ಸಿಕ್ಕಿದೆ.

ಎಲ್ಲಿ?
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂದು ಭಾರತದ ನಿರ್ಣಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲೂ ಲ್ಯಾಟಿನ್‌ ಅಮೆರಿಕದ ಕೆಲವು ರಾಷ್ಟ್ರಗಳು ಭಾರತದೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುತ್ತಿವೆ. ಈವರೆಗೆ ಭಾರತ ಇಲ್ಲಿ ಹೆಚ್ಚು ಸಂಪನ್ಮೂಲವನ್ನು ಹೂಡಿಕೆ ಮಾಡಿಲ್ಲ. ಆದರೂ ಇಲ್ಲಿನ ಗಯಾನ, ಸುರಿನಾಮ್‌ ಹಾಗೂ ಟ್ರಿನಿಡಾಡ್‌ ದೇಶಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಭಾರತ ಹೆಚ್ಚು ಆಸಕ್ತಿ ತೋರಿಸುತ್ತಿದೆ. ಇದು ಭವಿಷ್ಯದಲ್ಲಿ ಭಾರತದ ಪಾಲಿಗೂ ವರದಾನವಾಗಲಿದೆ.

ಯಾಕೆ?
ಇತ್ತೀಚೆಗೆ ಗಯಾನದ ಅಧ್ಯಕ್ಷ ಇರ್ಫಾನ್‌ ಅಲಿ ಭಾರತಕ್ಕೆ ಭೇಟಿ ನೀಡಿದ್ದು, ಇದು ಭಾರತ – ಗಯಾನ ನಡುವೆ ಬಾಂಧವ್ಯ ವೃದ್ಧಿಯ ಒಂದು ಪ್ರಯತ್ನ. 2009 ರಿಂದಲೇ ಭಾರತ ಮತ್ತು ಗಯಾನ ನಡುವೆ ವಿದೇಶಾಂಗ ಕಚೇರಿ ಸಮಾಲೋಚನೆ ಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಡೆದಿವೆ. ಮಾತ್ರ ವಲ್ಲದೆ ನಾಯಕರ ಸಭೆಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳನ್ನೂ ಆಯೋಜಿಸ ಲಾಗಿತ್ತು. ಹಲವಾರು ಭಾರತೀಯ ಕಂಪೆನಿಗಳು ಗಯಾನ ದಲ್ಲಿ ಭೂಮಿಯನ್ನು ಪಡೆದುಕೊಂಡು ಕೃಷಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಲ್ಲಿ ತೊಡಗಿಕೊಂಡಿವೆ. ಈಗ ಗಣಿಗಾರಿಕೆಯಲ್ಲೂ ಆಸಕ್ತಿ ತೋರಿಸಿದೆ.

ಯಾರು, ಎಷ್ಟು ?
ಭಾರತ ಮತ್ತು ಗಯಾನ ನಡುವೆ 2008ರಿಂದ ದ್ವಿಪಕ್ಷೀಯ ವ್ಯಾಪಾರ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, 2008- 09ರಲ್ಲಿ ಒಟ್ಟು 22.84 ಮಿಲಿಯನ್‌ ಯುಎಸ್‌ ಡಾಲರ್‌ ವಹಿವಾಟು ನಡೆದಿದ್ದು, ಇದರಲ್ಲಿ ಭಾರತ 12.18 ಮಿ.ಡಾಲರ್‌ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿ, 10.66 ಮಿ.ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿತ್ತು. 2009 – 10ರಲ್ಲಿ 24.62 ಮಿ. ಡಾಲರ್‌ ವಹಿವಾಟು ನಡೆದಿದ್ದು, 16.30 ಮಿ. ಡಾಲರ್‌ ರಫ್ತು, 8.32 ಮಿ. ಡಾಲರ್‌ ಆಮದು, 2010- 11ರಲ್ಲಿ 25.28 ಮಿ. ಡಾಲರ್‌ ವಹಿವಾಟು ನಡೆದಿದ್ದು, 16.04 ಮಿ. ಡಾಲರ್‌ ರಫ್ತು, 8.63 ಮಿ. ಡಾಲರ್‌ ಆಮದು, 2011- 12ರಲ್ಲಿ 30.21 ಮಿ. ಡಾಲರ್‌ ವಹಿವಾಟಿನಲ್ಲಿ 21.53 ಮಿಲಿಯನ್‌ ಡಾಲರ್‌ ರಫ್ತು, 8.68 ಮಿ.ಡಾಲರ್‌ ಆಮದು, 2012- 13ರಲ್ಲಿ 26.67 ಮಿ.ಡಾಲರ್‌ ವಹಿವಾಟು ನಡೆದಿದ್ದು, 21.94 ಮಿ. ಡಾಲರ್‌ ರಫ್ತಿಗೆ ಹಾಗೂ 4.73 ಮಿ. ಡಾಲರ್‌ ಆಮದಿಗೆ ಬಳಸಿಕೊಂಡಿದೆ.

ಮುಂದೇನು?
ವೆನೆಜುವೆಲಾ, ಬ್ರೆಜಿಲ್‌, ಸುರಿನಾಮ್‌ ದೇಶಗಳ ನಡುವೆ ಇರುವ ಗಯಾನದಲ್ಲಿ ತೈಲ ನಿಕ್ಷೇಪಗಳಿರುವುದು ಪತ್ತೆಯಾದ ಬಳಿಕ ವೆನೆಜುವೆಲಾ ನಡುವಿನ ಹಳೆಯ ಗಡಿ ವಿವಾದ ಮತ್ತೆ ಪ್ರಾರಂಭವಾಗಿದೆ. ಭಾರತದೊಂದಿಗೆ ಸುಮಧುರ ಬಾಂಧವ್ಯವನ್ನು ಕಾಪಾಡಿಕೊಂಡರೆ ಇವರ ಪಾಲಿಗೆ ಇದು ವರದಾನವಾಗುವುದು. ಗಯಾನದೊಂದಿಗಿನ ಸಂಬಂಧ ಭಾರತದ ಪಾಲಿಗೂ ಲಾಭವಾಗಲಿದೆ. ಗಯಾನದ ಹೆಚ್ಚಿನ ಭಾಗವು ಉಷ್ಣವಲಯದ ಮಳೆಕಾಡುಗಳಿಂದ ಆವೃತ್ತವಾಗಿದ್ದು, ಬಾಕ್ಸೆ„ಟ್‌, ಚಿನ್ನ, ಕಚ್ಚಾ ತೈಲದ ಸಮೃದ್ಧ ನಿಕ್ಷೇಪಗಳನ್ನು ಹೊಂದಿದ್ದರೂ ಅದು ಹೂಡಿಕೆ ಆಕರ್ಷಿಸಲು ಹೆಣಗಾಡುತ್ತಿದೆ. ಭಾರತವು ಕಚ್ಚಾ ತೈಲಕ್ಕಾಗಿ ಪ್ರಸ್ತುತ ಅರಬ್‌ ರಾಷ್ಟ್ರಗಳನ್ನು ಅವಲಂಬಿಸಿದೆ. ಸದ್ಯದ ಸ್ಥಿತಿಯಲ್ಲಿ ಕಚ್ಚಾ ತೈಲಕ್ಕಾಗಿ ಒಂದೇ ದೇಶವನ್ನು ಅವಲಂಬಿಸುವುದು ಸಾಧುವಲ್ಲ. ಇಂಥ ಹೊತ್ತಿನಲ್ಲಿ ಗಯಾನವು ಭಾರತಕ್ಕೆ ಕಚ್ಚಾತೈಲಕ್ಕಿರುವ ಪರ್ಯಾಯ ಆಯ್ಕೆಯ ಅವಕಾಶವನ್ನು ತೆರೆದಿದೆ. ಹೀಗಾಗಿ ಗಯಾನ ಹಾಗೂ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಬಂಧ ಬಲಪಡಿಸಲು ಭಾರತ ಶ್ರಮಿಸುತ್ತಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಗಯಾನಕ್ಕೆ ಪ್ರಸ್ತುತ ಭಾರತದಿಂದ ಸಾಕಷ್ಟು ನೆರವು ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಭಾರತದ ಬೇಡಿಕೆಯನ್ನು ತಿರಸ್ಕರಿಸಲಾಗದು.

ಹಿಂದೆ ಏನಾಗಿದೆ?
ಗಯಾನದ ಜಾರ್ಜ್‌ಟೌನ್‌ನಲ್ಲಿ ವಿಶೇಷ ಆಸ್ಪತ್ರೆ, ರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ, ಸಕ್ಕರೆ ಪ್ಯಾಕೇಜಿಂಗ್‌ ಪ್ಲ್ರಾಂಟ್‌, ಟ್ರಾಫಿಕ್‌ ಲೈಟ್ಸ್‌, ಭಾರೀ ಪ್ರಮಾಣದ ಕೊಳಚೆ ತೆಗೆಯುವ ಪಂಪ್‌ ನಿರ್ಮಾಣಕ್ಕೂ ಭಾರತ ನೆರವು ನೀಡಿದೆ. ಗಯಾನಕ್ಕೆ ಮಾನವ ಸಂಪನ್ಮೂಲವನ್ನು ನೀಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜಕೀಯ, ವ್ಯಾಪಾರ, ಆರ್ಥಿಕ, ತೈಲ ಮತ್ತು ಅನಿಲ, ಆಹಾರ ಭದ್ರತೆ, ಕೃಷಿ, ಆರೋಗ್ಯ ಶಿಕ್ಷಣ, ಸಂಸ್ಕೃತಿ ಸಹಿತ ಹಲವು ಕ್ಷೇತ್ರಗಳ ತಜ್ಞರನ್ನು ಒದಗಿಸುವ ಕುರಿತು 2022ರ ನವೆಂಬರ್‌ ತಿಂಗಳಲ್ಲಿ ಚರ್ಚೆ ನಡೆದಿತ್ತು.

ಈಗ ಹೇಗಿದೆ?
ತಾಂತ್ರಿಕ ಮತ್ತುಆರ್ಥಿಕ ಕೌಶಲ ಒದಗಿಸಲು ಗಯಾನದ ಹಲವಾರು ವಿದ್ವಾಂಸರಿಗೆ ಭಾರತದಲ್ಲಿ ತರಬೇತಿ ನೀಡಲಾಗುತ್ತಿದೆ. ಭಾರತದ ಕೃಷಿ ಪರಿಣಿತರು ಗಯಾನದಲ್ಲಿ ದುಡಿಯುತ್ತಿದ್ದಾರೆ. ಭಾರತದ ಸುಮಾರು 300 ವೈದ್ಯರು, ಶುಶ್ರೂಷಕರು, ಲ್ಯಾಬ್‌ ತಂತ್ರಜ್ಞರು, ಸಣ್ಣ ಉದ್ಯಮಿಗಳು, ಕಾರ್ಮಿಕರು ಗಯಾನದ ಬಹುದೊಡ್ಡ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

-  ವಿದ್ಯಾ ಇರ್ವತ್ತೂರು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.