ಫರ್ಸ್ಟ್ ಲುಕ್ ನಲ್ಲಿ ಸತ್ಯಂ ದರ್ಶನ
Team Udayavani, Mar 5, 2023, 4:31 PM IST
ಈಗಾಗಲೇ ಒಂದಷ್ಟು ಮಾಸ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ದ ನಟ ಸಂತೋಷ್ ಬಾಲರಾಜ್ ಈ ಬಾರಿ “ಸತ್ಯಂ’ ಎಂಬ ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಇಡೀ ರಾಜವಂಶವೇ ಬಲಿಯಾಗುತ್ತದೆ. ಇಂಥದ್ದೊಂದು ದಂತಕಥೆಯನ್ನು “ಸತ್ಯಂ’ ಸಿನಿಮಾ ಮೂಲಕ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ಅಶೋಕ್ ಕಡಬ.
“ಶ್ರೀಮಾತಾ ಕ್ರಿಯೇಶನ್ಸ್’ ಮೂಲಕ ಮಹಂತೇಶ್ ವಿ. ಕೆ. “ಸತ್ಯಂ’ ಸಿನಿಮಾವನ್ನು ನಿರ್ಮಿಸಿದ್ದು, ಇತ್ತೀಚೆಗೆ ಈ ಸಿನಿಮಾದ ಫಸ್ಟ್‌ಲುಕ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಅಶೋಕ್ ಕಡಬ, “ಇದೊಂದು ನೈಜ ಘಟನೆ ಆಧಾರಿತ ಸಿನಿಮಾ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ನಾಯಕಿಯ ಮನೆಗೆ ಬರುವ ನಾಯಕ ಅಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾನೆ ಎಂಬುದು ಕಥೆಯ ಒಂದು ಎಳೆ. ಇಡೀ ಸಿನಿಮಾದ ಶೇ. 40 ರಷ್ಟು ಕಥೆ ರಾತ್ರಿಯಲ್ಲೇ ನಡೆಯುತ್ತದೆ. ಸಿನಿಮಾದ ಪ್ರಮುಖ ಘಟ್ಟದಲ್ಲಿ ಭೂತಾರಾಧನೆಯಿದ್ದು, ಅದು ಕಥೆಗೊಂದು ತಿರುವುದು ಕೊಡುತ್ತದೆ’ ಎಂದು ಮಾಹಿತಿ ನೀಡಿದರು.
“ಸತ್ಯಂ’ ಬಗ್ಗೆ ಮಾತನಾಡಿದ ನಾಯಕ ಸಂತೋಷ್, “ಇದೊಂದು ಫ್ಯಾಮಿಲಿ ಸಬೆjಕ್ಟ್ ಇರುವಂಥ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಗೀತಾ ಎಂಬ ನಾಯಕನ ಜೊತೆ ತುಂಬಾ ಸಲುಗೆಯಿಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು.
“ಒಬ್ಬ ಜಮೀನ್ದಾರರ ಮನೆಯಲ್ಲಿ ಈ ಸಿನಿಮಾದ ಕಥೆ ನಡೆಯುತ್ತದೆ. ನಾಯಕ ಸಂತೋಷ್, ನಾಯಕಿ ರಂಜನಿ ರಾಘವನ್ ಅವರೊಂದಿಗೆ ಹಿರಿಯ ನಟ ಸುಮನ್, ಅವಿನಾಶ್, ಸಯ್ನಾಜಿ ಶಿಂಧೆ, ವಿನಯಾ ಪ್ರಸಾದ್ ಹೀಗೆ ಅನೇಕ ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ. ಒಬ್ಬ ಪ್ರೇಕ್ಷಕನಾಗಿ ನನಗೆ ಸಿನಿಮಾ ಚೆನ್ನಾಗಿ ಬಂದಿದೆ ಎಂಬ ನಂಬಿಕೆಯಿದೆ’ ಎಂಬ ವಿಶ್ವಾಸದ ಮಾತು ನಿರ್ಮಾಪಕ ಮಹಂತೇಶ್ ಮಾತು.
ಉಡುಪಿ, ಚಿಕ್ಕಮಗಳೂರು, ಮಂಗಳೂರು ಸುತ್ತಮುತ್ತ ಸುಮಾರು 85 ದಿನಗಳ ಕಾಲ “ಸತ್ಯಂ’ ಚಿತ್ರೀಕರಣ ನಡೆಸಲಾಗಿದೆ. ಸದ್ಯ “ಸತ್ಯಂ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಅಂತಿಮ ಕೆಲಸದಲ್ಲಿರುವ ಚಿತ್ರತಂಡ ಇದೇ ಏಪ್ರಿಲ್ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.