![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 6, 2023, 5:52 AM IST
ದುಬಾೖ: ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ತಮ್ಮ ವರ್ಷಾರಂಭದ ಉನ್ನತ ಫಾರ್ಮ್ ಮುಂದುವರಿಸಿದ್ದು, ಸತತ 3 ವಾರ 3 ಟೆನಿಸ್ ಪ್ರಶಸ್ತಿ ಗೆದ್ದು ಮಿಂಚಿದ್ದಾರೆ. ಅವರ ಪ್ರಶಸ್ತಿಗಳ ಹ್ಯಾಟ್ರಿಕ್ ದುಬಾೖ ಓಪನ್‌ನಲ್ಲಿ ಪೂರ್ತಿಗೊಂಡಿತು.
ಇದೊಂದು ಬಾಲ್ಯದ ಗೆಳೆಯರ ನಡುವಿನ ಪ್ರಶಸ್ತಿ ಸಮರವಾಗಿತ್ತು. ಮೆಡ್ವೆಡೇವ್ ತಮ್ಮದೇ ದೇಶದ ಆ್ಯಂಡ್ರೆ ರುಬ್ಲೇವ್‌ಗೆ 6-2, 6-2 ಅಂತರದ ಸೋಲುಣಿಸಿದರು. ರುಬ್ಲೇವ್ ಹಾಲಿ ಚಾಂಪಿಯನ್ ಆಗಿದ್ದರು. ಆದರೆ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಎಡವಿದರು.
ಹಿಂದಿನೆರಡು ವಾರಗಳಲ್ಲಿ ಡ್ಯಾನಿಲ್ ಮೆಡ್ವೆಡೇವ್ ದೋಹಾ ಹಾಗೂ ರೋಟರ್‌ಡ್ಯಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ದುಬಾೖ ಜಯದೊಂದಿಗೆ ಮೆಡ್ವೆಡೇವ್ ಗೆದ್ದ ಟೂರ್-ಲೆವೆಲ್ ಪ್ರಶಸ್ತಿಗಳ ಸಂಖ್ಯೆ 19ಕ್ಕೆ ಏರಿತು.
ಡ್ಯಾನಿಲ್ ಮೆಡ್ವೆಡೇವ್ ಇನ್ನು ಅಮೆರಿಕದತ್ತ ಪಯಣಿಸಲಿದ್ದು, ಅಲ್ಲಿ “ಇಂಡಿಯನ್ ವೆಲ್ಸ್ ಟೂರ್ನಿ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾವಳಿ ಮಾ. 19ರಿಂದ ಏ. 2ರ ತನಕ ನಡೆಯಲಿದೆ
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.