ಚೀನ ಮಿಲಿಟರಿ ವೆಚ್ಚ ಹೆಚ್ಚಳ  ಜಾಗತಿಕ ಅಶಾಂತಿಗೆ ನಾಂದಿ


Team Udayavani, Mar 6, 2023, 6:00 AM IST

ಚೀನ ಮಿಲಿಟರಿ ವೆಚ್ಚ ಹೆಚ್ಚಳ  ಜಾಗತಿಕ ಅಶಾಂತಿಗೆ ನಾಂದಿ

ಜಾಗತಿಕ ಅಶಾಂತಿಗೆ ಕಾರಣವಾಗಬಲ್ಲ ದೇಶಗಳ ಪಟ್ಟಿಯಲ್ಲಿ ಚೀನ ಮೇಲಿನ ಸಾಲಿನಲ್ಲಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಅಮೆರಿಕವನ್ನು ಮೀರಿಸಿ, ತಾನೇ ದೊಡ್ಡಣ್ಣನಾಗಬೇಕು ಎಂಬ ಛಲದಿಂದ ಚೀನ, ತೃತೀಯ ಜಗತ್ತಿನ ದೇಶಗಳನ್ನು ಹಣದ ಪ್ರಭಾವದಿಂದ ತನ್ನ ಕಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕೆಲವು ದೇಶಗಳು ಚೀನದ ಟ್ರ್ಯಾಪ್‌ಗೆ ಬಿದ್ದಿದ್ದರೆ, ಇನ್ನು  ಕೆಲವು ದೇಶಗಳು ಅದರಿಂದ ಹೊರಗೆ ಬಂದಿವೆ.

ಜಾಗತಿಕವಾಗಿ ದೊಡ್ಡಣ್ಣನಾಗಲು ಚೀನ ಆರಿಸಿಕೊಂಡಿರುವ ಮಾರ್ಗಗಳು ಎರಡು. ಒಂದು ಹಣ, ಮಗದೊಂದು ಮಿಲಿಟರಿ ಶಕ್ತಿ. ಈ ಮೊದಲೇ ಹೇಳಿದಂತೆ, ತೃತೀಯ ಜಗತ್ತಿನ ದೇಶಗಳು ಮತ್ತು ಬಡ ದೇಶಗಳಿಗೆ ಸಾಲದ ಆಮಿಷ ಕೊಟ್ಟು ಅವುಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಈ ಮೂಲಕ ಹಣಕಾಸಿನ ನೆರವಿಗಾಗಿ ಅಮೆರಿಕದತ್ತ ನೋಡುತ್ತಿದ್ದ ದೇಶಗಳು, ಈಗ ಚೀನದತ್ತ ನೋಡಬೇಕು ಎಂಬ ನಿಲುವನ್ನು ಈ ಮೂಲಕ ಪ್ರದರ್ಶಿಸಿದೆ.

ಇನ್ನೊಂದು ಮಿಲಿಟರಿ ಶಕ್ತಿ. ಕಳೆದ ಕೆಲವು ವರ್ಷಗಳ ದಾಖಲೆಗಳನ್ನು ನೋಡುತ್ತಾ ಹೋದರೆ, ಚೀನ ದಿನದಿಂದ ದಿನಕ್ಕೆ ತನ್ನ ಮಿಲಿಟರಿ ವೆಚ್ಚವನ್ನು ಹಿಗ್ಗಿಸಿಕೊಳ್ಳುತ್ತಲೇ ಹೋಗುತ್ತಿದೆ. ಒಂದು ದಿನ ತಾನು, ವಾರ್ಷಿಕವಾಗಿ ಅಮೆರಿಕದ ಸರಿಸಮನಾಗಿ ನಿಲ್ಲಬೇಕು ಎಂಬ ಲೆಕ್ಕಾಚಾರದಲ್ಲೇ ಅದು ಓಡುತ್ತಿದೆ. ಅಂದರೆ, ಚೀನ ಕಳೆದ 27 ವರ್ಷಗಳಿಂದಲೂ ರಕ್ಷಣಾ ಬಜೆಟ್‌ ಅನ್ನು ಏರಿಸಿಕೊಂಡು ಬರುತ್ತಲೇ ಇದೆ. ಆದರೆ 2012ರಿಂದ ಇಲ್ಲಿಯವರೆಗೆ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಅವಧಿಯಲ್ಲಿ 148 ಬಿಲಿಯನ್‌ ಅಮೆರಿಕನ್‌ ಡಾಲರ್‌ನಷ್ಟು ವೆಚ್ಚ ಮಾಡಿದೆ. ಅಂದರೆ, ಇದು ಶೇ.100ರಷ್ಟು ಹೆಚ್ಚಾಗಿದೆ.

ಸದ್ಯ ಇಡೀ ಜಗತ್ತಿನಲ್ಲಿ ರಕ್ಷಣೆಗಾಗಿ ಹೆಚ್ಚು ಹಣ ಮೀಸಲಿಡುತ್ತಿರುವುದು ಅಮೆರಿಕ. ಇದು ಜಾಗತಿಕ ವೆಚ್ಚದ ಶೇ.37.9ರಷ್ಟಾಗಿದೆ. 2021ರ ಅಂಕಿ ಅಂಶಗಳ ಪ್ರಕಾರ, ವಾರ್ಷಿಕವಾಗಿ 801 ಬಿಲಿಯನ್‌ ಡಾಲರ್‌ ಹಣ ವೆಚ್ಚ ಮಾಡುತ್ತಿದೆ. ಇನ್ನು ಚೀನ ಶೇ.13.9ರಷ್ಟು ವೆಚ್ಚ ಮಾಡುತ್ತಿದ್ದು, ಇದರ ಗಾತ್ರ 293 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು, ಶೇ.3.6ರಷ್ಟನ್ನು ವೆಚ್ಚ ಮಾಡುತ್ತಿದೆ. ಇದು 76.6 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ.

ಈ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಅಮೆರಿಕಕ್ಕೆ ಸ್ಪರ್ಧೆ ನೀಡುವ ಲೆಕ್ಕಾಚಾರದಲ್ಲಿ ಚೀನ ರಕ್ಷಣಾ ವೆಚ್ಚ ಏರಿಸಿಕೊಂಡು ಹೋಗುತ್ತಿದೆ. ರವಿವಾರ ಮಂಡನೆಯಾದ ಬಜೆಟ್‌ನಲ್ಲಿ ತನ್ನ ಜಿಡಿಪಿಯ ಶೇ.7.2ರಷ್ಟು ಹೆಚ್ಚು ವೆಚ್ಚ ತೋರಿಸಿದೆ. ಈ ಹಣದಿಂದ ನೌಕಾಪಡೆಯನ್ನು ಸದೃಢಗೊಳಿಸಿಕೊಳ್ಳುತ್ತಿದೆ.

ಚೀನದ ರಕ್ಷಣಾ ವೆಚ್ಚದ ಹಿಂದೆ ಅಮೆರಿಕ, ಭಾರತವೇ ಟಾರ್ಗೆಟ್‌ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಮೆರಿಕವು ಚೀನ ನೆರೆಯ ದೇಶವಾಗಿರುವ ತೈವಾನ್‌ ಬೆನ್ನಿಗೆ ನಿಂತಿದ್ದು ಇದು ಡ್ರ್ಯಾಗನ್‌ ದೇಶಕ್ಕೆ ಸಿಟ್ಟು ತರಿಸಿದೆ. ಹೀಗಾಗಿಯೇ ನೌಕಾಪಡೆಯ ಆಧುನೀಕರಣಕ್ಕೆ ಹೆಚ್ಚು ವೆಚ್ಚ ಮಾಡುತ್ತಿದೆ. ಅಲ್ಲದೆ ತೈವಾನ್‌ ಮೇಲೆ ದಾಳಿ ನಡೆಸಿದಾಗ, ಅಮೆರಿಕವೇನಾದರೂ ಅದರ ನೆರವಿಗೆ ಬಂದರೆ ಯಶಸ್ವಿಯಾಗಿ ಎದುರಿಸಲು ಈ ಪರಿಯಲ್ಲಿ ವೆಚ್ಚ ಮಾಡುತ್ತಿದೆ ಎಂಬ ವಿಶ್ಲೇಷಣೆಗಳಿವೆ.

ಏನೇ ಆಗಲಿ, ಚೀನದ ಮಿಲಿಟರಿ ವೆಚ್ಚದ ಹಿಂದೆ ಯುದ್ದೋನ್ಮಾದದ ಬಯಕೆಗಳಿವೆ ಎಂಬುದು ಭಾರತೀಯರಿಗೂ ಗೊತ್ತಿರುವ ವಿಚಾರ. ಗಡಿ ವಿಚಾರದಲ್ಲಿ ಅದರ ನಡವಳಿಕೆಯೇ ಹಾಗಿದೆ. ಅಲ್ಲದೆ, ಅಮೆರಿಕ ಮತ್ತು ಚೀನದ ನಡುವಿನ ಸಂಭಾವ್ಯ ತಿಕ್ಕಾಟವನ್ನು ತಪ್ಪಿಸುವ ಮತ್ತು ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ವಿಶ್ವಸಂಸ್ಥೆ ಮೇಲಿದೆ. ಈ ನಿಟ್ಟಿನಲ್ಲಿ ಅದು ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯಕ್ಕೆ ಯತ್ನಿಸುತ್ತಿರುವ ಚೀನದ ನಡವಳಿಕೆ ಮೇಲೂ ನಿಯಂತ್ರಣ ಹೇರುವ ಅಗತ್ಯ ಇದೆ.

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.