ಮಾಸ್- ಸೆಂಟಿಮೆಂಟ್ ಮಿಶ್ರಣ..; ಟ್ರೆಂಡಿಂಗ್ ನಲ್ಲಿದೆ ‘ಕಬ್ಜ’ ಟ್ರೇಲರ್
Team Udayavani, Mar 6, 2023, 9:51 AM IST
ಕೊನೆಗೂ ಬಹುನಿರೀಕ್ಷಿತ “ಕಬ್ಜ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಗ್ ಬಿ ಅಮಿತಾಭ್ ಬಚ್ಚನ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಔಟ್ ಅಂಡ್ ಔಟ್ ಮಾಸ್ ಅಂಶಗಳೊಂದಿಗೆ ಮೂಡಿಬಂದಿರುವ ಟ್ರೇಲರ್ನಲ್ಲಿ ಸ್ವಾತಂತ್ರ್ಯ, ಬ್ರಿಟಿಷರ ವಿರುದ್ಧದ ಹೋರಾಟ, ತಾಯಿ-ಅಣ್ಣನ ಸೆಂಟಿಮೆಂಟ್ ಸೇರಿದಂತೆ ಹಲವು ಸನ್ನಿವೇಶಗಳು ಟ್ರೇಲರ್ನಲ್ಲಿ ಮೂಡಿಬಂದಿವೆ. ಇದರ ಜೊತೆಗೆ ಚಿತ್ರದಲ್ಲಿ ಸುದೀಪ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. “ಕವ್ಜ’ ಚಿತ್ರದಲ್ಲಿ ಉಪೇಂದ್ರ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದ್ದಾರೆ. ಏರ್ಫೋರ್ಸ್ ಆಫೀಸರ್ ಆಗಿ ಹಾಗೂ ರುಂಡ ಚೆಂಡಾಡುವ ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದರ ಜೊತೆಗೆ ಚಿತ್ರದ ಹಲವು ಪ್ರಮುಖ ಪಾತ್ರಗಳನ್ನು ಕೂಡಾ ಪರಿಚಯಿಸಿದ್ದಾರೆ.
ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದಲ್ಲ, ಅದನ್ನು ಹಿಡಿದಿತರುವ ಬಲವಾದ ಕೈಗಳಿಂದ.. ಎಂಬ ಮಾಸ್ ಡೈಲಾಗ್ ಚಿತ್ರದ ಆ್ಯಕ್ಷನ್ ಅಬ್ಬರದ ಸೂಚನೆ ನೀಡಿದೆ. ಇನ್ನು, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಟ್ರೇಲರ್ ಖದರ್ ಹೆಚ್ಚಿಸಿದೆ.
ಆರ್.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಸುದೀಪ್ ಹಾಗೂ ಶಿವರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಾ ಶರಣ್ ಈ ಸಿನಿಮಾದ ನಾಯಕಿ. ಉಳಿದಂತೆ ತೆಲುಗು, ಹಿಂದಿ ಚಿತ್ರರಂಗದ ಪ್ರಮುಖ ನಟರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ನಟ-ನಟಿಯರು ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.