ʼಕೆಜಿಎಫ್ -2ʼ, ಯಶ್ ಬಗ್ಗೆ ನಿಂದನಾತ್ಮಕ ಮಾತು: ಟಾಲಿವುಡ್ ನಿರ್ದೇಶಕನ ವಿರುದ್ಧ ಆಕ್ರೋಶ
Team Udayavani, Mar 6, 2023, 4:26 PM IST
ಹೈದರಾಬಾದ್ : ಕನ್ನಡ ಮಾತ್ರವಲ್ಲದೆ ಭಾರತ ಚಿತ್ರರಂಗದಲ್ಲಿ ಒಂದು ಹೊಸ ದಾಖಲೆ ಬರೆದ ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ಸಿನಿಮಾ ʼಕೆಜಿಎಫ್ -2ʼ ಬಗ್ಗೆ ಟಾಲಿವುಡ್ ನಿರ್ದೇಶಕರೊಬ್ಬರು ನಿಂದನಾತ್ಮಕ ಮಾತುಗಳನ್ನಾಡಿ ಪೇಚಿಗೆ ಸಿಲುಕಿದ್ದಾರೆ.
ʼC/o ಕಂಚರಪಾಲೆಂʼ,ʼ ಮಾಡರ್ನ್ ಲವ್ ಹೈದರಾಬಾದ್ʼ ಸಿನಿಮಾಗಳನ್ನು ಮಾಡಿರುವ ವೆಂಕಟೇಶ್ ಮಹಾ ಇತ್ತೀಚೆಗೆ ರೌಂಡ್ ಟೇಬಲ್ ಸಂದರ್ಶನದಲ್ಲಿ ಮಾತನಾಡುವ ವೇಳೆ ʼಕೆಜಿಎಫ್-2ʼ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ ಮತ್ತು ವಿವೇಕ್ ಆತ್ರೇಯ ಅವರೊಂದಿಗೆ ರೌಂಡ್ ಟೇಬರ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ವೆಂಕಟೇಶ್ ಮಹಾ ಮಾತನಾಡುತ್ತಾ ಒಂದು ಸಿನಿಮಾದಲ್ಲಿ ನಾಯಕನ ತಾಯಿ ತನ್ನ ಮಗ ಶ್ರೀಮಂತನಾಗಬೇಕೆಂದು ಬಯಸುತ್ತಾಳೆ. ಆತ ಜನರನ್ನು ಬಳಸಿ ಶ್ರೀಮಂತನಾಗುತ್ತಾನೆ. ಆದರೆ ಆ ಬಳಿಕ ಜನರಿಗೆ ಆತ ಏನನ್ನೂ ನೀಡುವುದಿಲ್ಲ ಎಂದು ಸಿನಿಮಾದ ಹೆಸರನ್ನು ಹೇಳದೇ ಹೀಯಾಳಿಸಿದ್ದಾರೆ. ಇದು ʼಕೆಜಿಎಫ್ -2ʼ ಕಥೆಯ ಎಳೆಯಾಗಿದ್ದು, ಇದರೊಂದಿಗೆ ನಾಯಕನ ಪಾತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಮಾತನ್ನು ಕೇಳಿ ಅಲ್ಲಿದ್ದ ಉಳಿದ ನಿರ್ದೇಶಕರು ಕೂಡ ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ: ಶಾರುಖ್ ಜತೆ ʼಜವಾನ್ʼ ನಲ್ಲಿ ಶಿವರಾಜ್ ಕುಮಾರ್ ನಟನೆ? ಹೆಚ್ಚಾಯಿತು ಶಿವಣ್ಣನ ಬೇಡಿಕೆ
ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು, ಮೊದಲು ನಟ ಯಶ್ ರಲ್ಲಿ ಕ್ಷಮೆ ಕೇಳಿ ಇಲ್ಲದಿದ್ರೆ ಪರಿಣಾಮ ಒಳ್ಳೆದಿರಲ್ಲ. ಕೇವಲ ಎರಡು ಸಿನಿಮಾ ಮಾಡಿ ದೊಡ್ಡ ಸಿನಿಮಾದ ಬಗ್ಗೆ ಈ ರೀತಿ ಟೀಕಿಸುವುದು ಸರಿಯಲ್ಲ ಎಂದು ಫ್ಯಾನ್ಸ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ವೆಂಕಟೇಶ್ ಅವರ ಅಭಿಪ್ರಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇನ್ನು ಕೆಲ ಟಾಲಿವುಡ್ ಫ್ಯಾನ್ಸ್ ಗಳೇ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇದು ಯಾರನ್ನೂ ಉದ್ದೇಶಪೂರ್ವಕವಾಗಿ ನೋವು ತರಲು ಹೇಳಿದ ಮಾತಲ್ಲ. ಈ ವಿಚಾರವನ್ನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
Nenu chesta gaa pic.twitter.com/GasbikJNig
— బూమర్ (@AkhilDeepak) March 5, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.