ಬೈಕಂಪಾಡಿ; ಭಾರೀ ಪ್ರಮಾಣದ ತ್ಯಾಜ್ಯ-ಜಲಮೂಲಕ್ಕೆ ಹಾನಿ
ಜೋಕಟ್ಟೆವರೆಗೆ ಸಾಗುವ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕಲಾಗಿದೆ
Team Udayavani, Mar 6, 2023, 4:22 PM IST
ಬೈಕಂಪಾಡಿ: ಬೈಕಂಪಾಡಿಯಿಂದ ಜೋಕಟ್ಟೆಗೆ ಸಾಗುವ ಹಾದಿಯ ಇಕ್ಕೆಲಗಳಲ್ಲೂ ಇರುವ ಕಾಂಡ್ಲಾವನ, ನೀರಿನ ಪ್ರದೇಶ ಇದೀಗ ಅವನತಿಯ ಅಂಚಿಗೆ ಸಾಗುತ್ತಿದೆ. ಮುಂದೊಂದು ದಿನ ಕಣ್ಮರೆಯಾದರೂ ಅಚ್ಚರಿಯಿಲ್ಲ. ಪಶ್ಚಿಮ ಘಟ್ಟದಿಂದ ಹರಿದು ಬರುವ ಮಳೆ ನೀರಿನ ಪ್ರಮುಖ ಹಳ್ಳ – ಹೊಳೆಗಳಿಗೆ ಇದೀಗ ಸರ್ವನಾಶದ ಭೀತಿ ಎದುರಾಗಿದೆ. ಒಂದೆಡೆ ತ್ಯಾಜ್ಯ ರಾಶಿ ಸೇರಿ ಜಲ ಮೂಲ ಮಲಿನವಾಗು ತ್ತದೆ. ಈ ಮಲೀನ ನೀರು ತೋಕೂರು ಮೂಲಕ ಫಲ್ಗುಣಿ ನದಿ ಪಾಲಾಗುತ್ತಿದೆ.
ಪೆರ್ಮುದೆ ಗ್ರಾಮ ಪಂ.ವ್ಯಾಪ್ತಿಯಲ್ಲಿ ಲ್ಯಾಂಡ್ ಫಿಲ್ಲಿಂಗ್!
ಜೋಕಟ್ಟೆ ರೈಲ್ವೇ ಟ್ಯಾಕ್ ಸಮೀಪ ಪೇಜಾವರ ಮಠಕ್ಕೆ ಹೋಗುವ ಹಾದಿಯಲ್ಲಿ ಹಳ್ಳ – ಕೊಳ್ಳಗ ಳಿದ್ದು, ಈ ಪ್ರದೇಶದ ರಸ್ತೆ ಬದಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಮಣ್ಣು ತಂದು ತಂಬಿಸಲಾಗು ತ್ತಿದೆ. ಗ್ರಾನೈಟ್ ತುಂಡುಗಳು,ಕಟ್ಟಡ ತ್ಯಾಜ್ಯಗಳು ಭಾರೀ ಪ್ರಮಾಣದಲ್ಲಿ ಬಂದು ಬೀಳುತ್ತಿವೆ. ಕಣ್ಗಾವಲು ಎಂಬುದು ಇಲ್ಲಿ ಇಲ್ಲವೇ ಇಲ್ಲ. ಮುಂದೊಂದು ದಿನ ಕಟ್ಟಡ ನಿರ್ಮಾಣವಾಗುವ ಸಾಧ್ಯತೆ ಇದೆ.
ರಸ್ತೆ ಇಕ್ಕೆಲಗಳಲ್ಲೂ ತ್ಯಾಜ್ಯ ರಾಶಿ!
ಇಲ್ಲಿ ಕೆಐಎಡಿಬಿ ಕೈಗಾರಿಕ ವಲಯದಿಂದ ಜೋಕಟ್ಟೆವರೆಗೆ ಸಾಗುವ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕಲಾಗಿದೆ. ಹೀಗೆ ತ್ಯಾಜ್ಯ ಸುರಿಯುವವರನ್ನು ಇಲ್ಲಿ ಕೇಳುವವರು ಯಾರು ಇಲ್ಲವೇ ಎಂಬುದು ಪ್ರಶ್ನೆ. ಇಲ್ಲಿನ ಪ್ರದೇಶ ಎರಡು ಪಂಚಾಯತ್ ಹಾಗೂ ಕೈಗಾರಿಕ ವಲ ಯದ ವ್ಯಾಪ್ತಿಗೆ ಸೇರಿದೆ. ತ್ಯಾಜ್ಯವನ್ನು ಕೊಳ್ಳದ ಅಂಚಿನಲ್ಲಿ ಹಾಕುತ್ತಾ ಕೊಳ್ಳದ ಸುಗಮ ಹರಿವಿಗೆ ತಡೆ ಒಡ್ಡುವ ಆತಂಕ ಎದುರಾಗಿದೆ. ಇಲ್ಲಿ ರಸ್ತೆಯಂಚಿನಲ್ಲಿ ಮಧ್ಯದ ಬಾಟಲಿಗಳ ಸಂಗ್ರಹವೇ ಕಂಡು ಬಂದಿದೆ.
ಇದರ ನಡುವೆ ತ್ಯಾಜ್ಯಗಳಿಗೆ ಬೆಂಕಿ ನೀಡಿ ಅದರಿಂದ ಗುಜರಿ ತೆಗೆಯುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇನ್ನು ಕೆಲವೆಡೆ ವಿಷಯುಕ್ತ ಕೈಗಾರಿಕಾ ತ್ಯಾಜ್ಯ ತಂದು ಗೋಣಿ ಚೀಲದಲ್ಲಿ ಕೊಳ್ಳದ ಬಳಿ ಎಸೆದು ಹೋಗಲಾಗುತ್ತಿದೆ. ಇದರಿಂದ ಇಲ್ಲಿನ ಜಲಚರಗಳು ಅಪಾಯದಂಚಿನಲ್ಲಿವೆ. ಇದನ್ನು ತಿನ್ನಲು ಬರುವ ನಾನಾ ಬಗೆಯ ಕೊಕ್ಕರೆ, ಮಿಂಚುಹುಳ ಸಹಿತ ಪಕ್ಷಿಗಳೂ ಅನಾರೋಗ್ಯಕ್ಕೀಡಾಗುವ ಸಂಭವ ಹೆಚ್ಚು
ಅಪರೂಪದ ಕಾಂಡ್ಲಾ ವನಕ್ಕೆ ಅಪಾಯ
ಇಲ್ಲಿ ಭಾರೀ ಪ್ರಮಾಣದಲ್ಲಿ ಕಾಂಡ್ಲಾ ವನವಿದ್ದು, ನೀರಿನ ಒರತೆ ಹೆಚ್ಚಿಸುವ ಹಾಗೂ ಹೆಚ್ಚು ಭೂ ಸವಕಳಿ ಆಗದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದೀಗ ಲ್ಯಾಂಡ್ ಫಿಲ್ಲಿಂಗ್ ಮಾಡುವ ಪರಿಣಾಮ ಇವು ಮಣ್ಣಿನಡಿ ಬಿದ್ದು ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಸಿಆರ್‌ಝಡ್ ಪ್ರದೇಶವಾಗಿರುವುದರಿಂದ ಇಲಾಖೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪರಿಶೀಲಿಸಿ ಕ್ರಮ
ಸಿಆರ್‌ಝಡ್ ಪ್ರದೇಶದಲ್ಲಿ ಯಾವುದಾದರೂ ಅಕ್ರಮ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಖುದ್ದಾಗಿ ನಾನೇ ಭೇಟಿ ನೀಡಿ ಪರಿಶೀಲಿಸುವೆ.
–ದಿನೇಶ್ ಕುಮಾರ್,
ಅರಣ್ಯ ಉಪಸಂರಕ್ಷಣಾಧಿಕಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.