ಗದಗ: ಮನೆಗೊಂದು ರೊಟ್ಟಿ-ರೂಪಾಯಿ ಭಿಕ್ಷೆಗೆ ಚಾಲನೆ
ಗ್ರಾಮದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ರೊಟ್ಟಿ, ನಾಣ್ಯದ ಭಿಕ್ಷೆ ಪಡೆದರು.
Team Udayavani, Mar 6, 2023, 6:37 PM IST
ಗದಗ: ಇಂದು ನೋಟಿನ ಮೂಲಕ ಚುನಾವಣೆ ನಡೆಯುತ್ತಿದ್ದು, ನೋಟಿನ ಮೂಲಕ ವೋಟು ಗಿಟ್ಟಿಸುವ ಕೆಲಸವಾಗುತ್ತಿದೆ. ಆದ್ದರಿಂದ, ಚುನಾವಣೆಗಳು ಬದಲಾವಣೆಯಾಗಬೇಕು. ಯೋಗ್ಯ ಹಾಗೂ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಸಾರ್ವಜನಿಕರು ಕೂಡ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ತಾಲೂಕಿನ ಸೊರಟೂರು ಗ್ರಾಮದಲ್ಲಿ ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ. ನಮ್ಮ ನಡೆ ನಿಮ್ಮೆಲ್ಲರ ಮನೆ-ಮನದ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರು 100, 500 ರೂ.ಗೆ ಮತವನ್ನು ಮಾರಿಕೊಳ್ಳಬಾರದು ಎಂಬ ದೃಷ್ಟಿಯಿಂದ ಹೊಸ ಪರಿಕಲ್ಪನೆಯೊಂದಿಗೆ ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ. ನಮ್ಮ ನಡೆ ನಿಮ್ಮೆಲ್ಲರ ಮನೆ-ಮನದ ಕಡೆ ಕಾರ್ಯಕ್ರಮದೊಂದಿಗೆ ಜನರ ಮನೆಗೆ ಹೋಗಿ ರೊಟ್ಟಿಯ ಜೊತೆಗೆ ಒಂದು ರೂ. ನಾಣ್ಯದ ಭಿಕ್ಷೆ ಪಡೆದು ಆಶೀರ್ವಾದ ಕೇಳುತ್ತಿದ್ದೇನೆ ಎಂದು ಹೇಳಿದರು.
ಗದಗ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 59 ಸಾವಿರ ಮನೆಗಳಿದ್ದು, ಪ್ರತಿ ಮನೆಗೆ ಭೇಟಿ ನೀಡಿ, ಅದರಿಂದ ಕೂಡಿದ ಹಣದಲ್ಲಿ ಬಿಜೆಪಿ ಪಕ್ಷದ ನಾಮಪತ್ರ ಸಲ್ಲಿಸಲು ಬಳಸಲಾಗುತ್ತದೆ. ಜನರ ಶಾಸಕನಾಗಬೇಕು. ಜನರ ಹಿಡಿತದಲ್ಲಿರುವ ಹಾಗೂ ಜನರ ನೋವು, ಕಷ್ಟ ಅರ್ಥ ಮಾಡಿಕೊಳ್ಳುವ ಶಾಸಕನಾಗಬೇಕು. ಅಂದಾಗ ಮಾತ್ರ ಜನರು ಕೊಟ್ಟ ರೊಟ್ಟಿಗೂ, ನಾಣ್ಯಕ್ಕೂ, ಮಾಡಿದ ಮತದಾನಕ್ಕೂ ಬೆಲೆ ಬರುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಕಾಂಗ್ರೆಸ್ ನಾಯಕರು ಅನಿಲ ಮೆಣಸಿನಕಾಯಿ ಚಿಲ್ಲರೆ ರಾಜಕಾರಣ ಮಾಡುತ್ತಾನೆಂದು ಹೇಳಿದ್ದಾರೆ. ಅವರಿಗೆ ನೋಟಿನ ಬಗ್ಗೆ ಮಾತ್ರ ಗೊತ್ತಿದೆ. ಚಿಲ್ಲರೆ ಮಹತ್ವ ಅರಿತುಕೊಂಡಿಲ್ಲ. ಯಾವುದೇ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕಾದರೆ ಒಂದು ಸಾವಿರ ನೋಟಿದ್ದರೂ ಅದರ ಮೇಲಿನ 1ರೂ. ಚಿಲ್ಲರೆಗೆ ಬಹಳ ಬೆಲೆ, ಮಹತ್ವ ಬರುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಸ್ವಾಭಿಮಾನದ ಜನತೆ ಚಿಲ್ಲರೆಯ ಮಹತ್ವ ತಿಳಿಸಿಕೊಡುತ್ತಾರೆ ಎಂದು ಹೇಳಿದರು.
ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ ಅಭಿಯಾನದ ಅಂಗವಾಗಿ ಸೊರಟೂರ ಗ್ರಾಮದ ಹಾಲುಮತ ಸಮುದಾಯದ ನೀಲಪ್ಪ ಸೀತಾರಹಳ್ಳಿ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸಂಗಟಿ, ಮಜ್ಜಿಗೆ, ರೊಟ್ಟಿ, ಕಡಲೆಕಾಳು, ಹೆಸರಕಾಳು, ಬದನೆಕಾಯಿ ಪಲ್ಯೆ ಹಾಗೂ ಮೊಸರು, ಚಿತ್ರಣ್ಣ ಊಟ ಸವಿದರು. ನಂತರ ಗ್ರಾಮದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ರೊಟ್ಟಿ, ನಾಣ್ಯದ ಭಿಕ್ಷೆ ಪಡೆದರು.
ಅನಿಲಗೆ ಮೆಣಸಿನಕಾಯಿ ಹಾರ: ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸೊರಟೂರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಮುಖಂಡರು ಕಿತ್ತಳೆ ಹಣ್ಣು, ದೊಣ್ಣೆ ಮೆಣಸಿನಕಾಯಿ, ಚೆಂಡು ಹೂವು, ಮೆಣಸಿನಕಾಯಿ ಬಳಸಿ ತಯಾರಿಸಿದ 15 ಅಡಿ ಎತ್ತರದ ಹಾರವನ್ನು ಜೆಸಿಬಿ ಮೂಲಕ ಹಾಕಲಾಯಿತು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಮುಖಂಡರಾದ ಭದ್ರೇಶ ಕುಸಲಾಪೂರ, ಎಂ.ಎಂ. ಹಿರೇಮಠ, ಪರಮೇಶ ನಾಯ್ಕ, ಕೆ.ಪಿ. ಕೋಟಿಗೌಡರ, ವಿಜಯಲಕ್ಷ್ಮೀ ಮಾನ್ವಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.