ಇಂದು ಇಸ್ರೋದಿಂದ “ಸವಾಲಿನ ಪ್ರಯೋಗ’; ಅಪಾಯವಾಗದಂತೆ ಇಳಿಸುವುದೇ ಸವಾಲು
ಹಳೆಯ ಉಪಗ್ರಹವನ್ನು ಭೂ ವಾತಾವರಣಕ್ಕೆ ಮರಳಿಸುವ ಪ್ರಕ್ರಿಯೆ
Team Udayavani, Mar 7, 2023, 7:35 AM IST
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅತಿದೊಡ್ಡ ಸವಾಲಿನ ಪ್ರಯೋಗವೊಂದಕ್ಕೆ ಮುಂದಾಗಿದೆ. ಕಾರ್ಯಸ್ಥಗಿತಗೊಳಿಸಿರುವ ಉಪಗ್ರಹವೊಂದನ್ನು ಭೂಮಿಯ ವಾತಾವರಣಕ್ಕೆ ಮರಳಿ ತರುವ ಕೆಲಸವನ್ನು ಇಸ್ರೋ ಮಂಗಳವಾರ ಕೈಗೆತ್ತಿಕೊಳ್ಳಲಿದೆ.
ನಿಯಂತ್ರಿತ ಮರುಪ್ರವೇಶದ ಪ್ರಯೋಗವನ್ನು ಯಾವುದೇ ಅಪಾಯ ಉಂಟಾಗದಂತೆ ಪೂರ್ಣಗೊಳಿಸುವುದೇ ಅತ್ಯಂತ ಸವಾಲಿನ ಕೆಲಸವಾಗಿದೆ. ಪೆಸಿಫಿಕ್ ಸಮುದ್ರದ 5 ಡಿಗ್ರಿ ದಕ್ಷಿಣದಿಂದ 14 ಡಿಗ್ರಿ ದಕ್ಷಿಣದ ಅಕ್ಷಾಂಶ ಮತ್ತು 119 ಡಿಗ್ರಿ ಪಶ್ಚಿಮದಿಂದ 100 ಡಿಗ್ರಿ ಪಶ್ಚಿಮ ರೇಖಾಂಶದ ನಡುವಿನ ಜನವಸತಿ ಇಲ್ಲದೇ ಇರುವ ಪ್ರದೇಶವನ್ನು, ಉಪಗ್ರಹದ ಉದ್ದೇಶಿತ ಮರುಪ್ರವೇಶ ವಲಯವೆಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ 4.30ರಿಂದ 7.30ರ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಯಾವುದು ಈ ಉಪಗ್ರಹ?
ಭೂಮಿಯ ಕೆಳಕಕ್ಷೆಯಲ್ಲಿ ಸುತ್ತುತ್ತಿರುವ ಮೇಘಾ-ಟ್ರೋಪಿಕ್ಸ್-1 ಎಂಬ ಹೆಸರಿನ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ 2011ರ ಅ.12ರಂದು ಉಡಾವಣೆ ಮಾಡಿದ್ದವು. ಇದರ ಆರಂಭಿಕ ಬಾಳಿಕೆ ಅವಧಿ ಕೇವಲ 3 ವರ್ಷಗಳು. ಆದರೂ, ಇದು 2021ರವರೆಗೂ ಮೌಲ್ಯಯುತ ದತ್ತಾಂಶಗಳನ್ನು ರವಾನಿಸುತ್ತಿತ್ತು ಎಂದು ಇಸ್ರೋ ಹೇಳಿದೆ.
ಹೇಗೆ ನಡೆಯುತ್ತದೆ ಪ್ರಕ್ರಿಯೆ?
2022ರ ಆಗಸ್ಟ್‌ನಿಂದಲೇ ಈ ಉಪಗ್ರಹವನ್ನು ಹಂತ ಹಂತವಾಗಿ ಕೆಳಕ್ಕಿಳಿಸುವ ಪ್ರಕ್ರಿಯೆಯನ್ನು 18 ಬಾರಿ ಮಾಡಲಾಗಿದೆ. ಉಪಗ್ರಹದೊಳಗೆ ಸುಮಾರು 125 ಕೆಜಿ ಇಂಧನ ಇನ್ನೂ ಉಳಿದಿದ್ದು, ಇದನ್ನು ಬಳಸಿಕೊಂಡು ಮಂಗಳವಾರ ಉಪಗ್ರಹವನ್ನು ಭೂಮಿಯ ವಾತಾವರಣದೊಳಗೆ ತರಲಾಗುತ್ತದೆ. ಆಕಸ್ಮಿಕವಾಗಿ ಅವಘಡವೇನಾದರೂ ಸಂಭವಿಸಿದರೆ ಉಳಿಕೆ ಇಂಧನದಿಂದ ಅಪಾಯ ಉಂಟಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಅತ್ಯಂತ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಉಪಗ್ರಹವನ್ನು ಇಳಿಸುವುದು ದೊಡ್ಡ ಸವಾಲಾಗಿದೆ.
ಉಪಗ್ರಹದ ತೂಕ- 1000 ಕೆ.ಜಿ.
ಉಡಾವಣೆಯಾಗಿದ್ದು- 2011
ಕಾರ್ಯಾಚರಣೆ ಸ್ಥಗಿತಗೊಂಡಿದ್ದು- 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.