ಬೇನಾಮಿ ಆಸ್ತಿ ತನಿಖೆ ವಿಳಂಬ ಮಾಡಿದರೆ ಧರಣಿ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
Team Udayavani, Mar 7, 2023, 7:07 AM IST
ಕಾರ್ಕಳ: ಬಿಜೆಪಿಯಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿ ಆದಾಯವಿಲ್ಲದಿದ್ದರೂ ತನ್ನ ಹಾಗೂ ಪತ್ನಿ ಹೆಸರಿನಲ್ಲಿ ಕೋಟ್ಯಂತರ ರೂ. ಆಸ್ತಿ ಖರೀದಿಸಿದ್ದು ಹೇಗೆ? ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು, ಬೇನಾಮಿ ಆಸ್ತಿ ತನಿಖೆ ವಿಳಂಬಿಸಿದರೆ ಲೋಕಾಯುಕ್ತ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಬೇನಾಮಿ ಆಸ್ತಿ ಹಿಂದೆ ಸಚಿವರ ಕೈವಾಡವಿರುವ ಸಂಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬೇನಾಮಿ ಆಸ್ತಿಗೆ ಸಂಬಂಧಿಸಿ ಫೆ. 28ರಂದು ಡಿ.ಸಿ.ಯವರಿಗೆ, ದೂರು, ಮಾ. 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮದಲ್ಲಿ 4.15 ಕೋ.ರೂ.ಗಳಿಗೆ 67.94 ಎಕ್ರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಅವರಿಗೆ ಅಷ್ಟು ಆದಾಯ ಇಲ್ಲ. ಬೇನಾಮಿ ಹೆಸರಿನಲ್ಲಿ ಆದಂತಹ ಹಗರಣ ಇದು. ಇದರಲ್ಲಿ ಸಚಿವರ ಕೈವಾಡದ ಸಂಶಯ ಇದೆ. ಈ ಜಾಗ ಮುಂದೆ ಇಂಡಸ್ಟ್ರಿಯಲ್ ಏರಿಯಾ ಆಗುತ್ತದೆ ಎಂದು ಗೊತ್ತಿದ್ದೇ ಖರೀದಿ ಮಾಡಿ¨ªಾರೆ. ಇದು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಇಂಡಸ್ಟ್ರಿಯಲ್ ಏರಿಯಾ ಎಂದು ಘೋಷಣೆ ಆಗಿ ಈಗ ಆ ಜಾಗದ ಕಿಮ್ಮತ್ತು ನಾಲ್ಕು ಪಟ್ಟು ಹೆಚ್ಚಿದೆ. ಇದು ಭ್ರಷ್ಟಾಚಾರ. ಇಂತಹ ಬೇನಾಮಿ ಆಸ್ತಿ ಈ ಕ್ಷೇತ್ರದಲ್ಲಿ ಸಾಕಷ್ಟಿವೆ. ಇದರ ವಿರುದ್ಧ ಸಮರ ಆರಂಭಿಸಿದ್ದೇನೆ ಎಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಸುನಿಲ್‌ಗೆ ಅಭಿನಂದನೆ
ಕೋಟಿ ಚೆನ್ನಯ, ಪರಶುರಾಮ ಥೀಂ ಪಾರ್ಕ್ ಮತ್ತು ಕಾರ್ಕಳ ಉತ್ಸವ ಇದೆಲ್ಲ ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಕಾರ್ಯಗಳು. ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲಕರ. ಇದಕ್ಕೆ ಸಚಿವರಿಗೆ ಅಭಿನಂದನೆ. ಉಳಿದಂತೆ ಅಭಿವೃದ್ಧಿಯಲ್ಲಿ ಹಗರಣಗಳು ನಡೆದಿವೆ. ಇವುಗಳನ್ನೂ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಹೆಬ್ರಿ ತಾಲೂಕಿನಲ್ಲಿ ಅಭಿವೃದ್ಧಿ ಏನಾಗಿದೆ ಎಂದು ಮುತಾಲಿಕ್ ಪ್ರಶ್ನಿಸಿದರು.
ಆಡಿಯೋ ಒಂದರಲ್ಲಿ ಗುತ್ತಿಗೆದಾರನೊಬ್ಬ ಸಚಿವ ಸುನಿಲ್ ಅವರಿಗೆ ಕಮಿಶನ್ ನೀಡಬೇಕು ಎಂದು ಹೇಳಿರುವುದನ್ನು ಕೇಳಿಸಿಕೊಂಡಿದ್ದೇವೆ. ಟೆಂಡರ್ ಬಿಡುಗಡೆ, ಬಿಲ್ ಮಾಡುವಾಗ ಹೀಗೆ ಪ್ರತಿಬಾರಿಯೂ ಕಮಿಶನ್ ನೀಡಬೇಕು. ಒಂದು ತಿಂಗಳಿನಲ್ಲಿ ಕೋಟ್ಯಾಂತರ ರೂ.ಗಳ ಟೆಂಡರ್ ತರಾತುರಿಯಲ್ಲಿ ಆಗಿದೆ. ಇಂಧನ ಇಲಾಖೆ ಭ್ರಷ್ಟವಾಗಿದೆ. ಕೆಪಿಟಿಸಿಎಲ್‌ನಲ್ಲಿ ವರ್ಗ, ಭಡ್ತಿ ಎಲ್ಲವೂ ಭ್ರಷ್ಟವಾಗಿದೆ ಎಂದು ಆರೋಪಿಸಿದರು.
ಯಾರಾದರೂ ಸೈ, ಗೆಲ್ಲಿಸಲಿ
ನಾನು ಗೆಲ್ಲಬೇಕೆಂದು ಬಂದಿದ್ದೇನೆ. ಕಾಂಗ್ರೆಸ್‌ನವರು ಅಭ್ಯರ್ಥಿ ಹಾಕುವುದು ಬಿಡುವುದು ಅವರಿಗೆ ಬಿಟ್ಟದ್ದು. ಮುತಾಲಿಕ್ ಹಿಂದುತ್ವವನ್ನು ಗೆಲ್ಲಿಸುವುದಾದರೆ ಗೆಲ್ಲಿಸಲಿ ಎಂದರು.
ಕಾರ್ಯಕರ್ತರನ್ನು ಮುಟ್ಟಲಿ ನೋಡೋಣ ಎಲ್ಲ ಬೇನಾಮಿಗಳ ಬಗ್ಗೆ ದಾಖಲೆಗಳಿವೆ. ಎಲ್ಲವನ್ನೂ ಬಹಿರಂಗಪಡಿಸುವೆ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ, ಕೊಲೆ ಪ್ರಕರಣ ಹಾಕಿ¨ªಾರೆ. ಜಾಮೀನು ಹಾಗೂ ತಡೆ ಸಿಕ್ಕಿದೆ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಬಂದರೆ ನಾನಿದ್ದೇನೆ ಎಂಬ ಸ್ಪಷ್ಟ ಮಾತು ಹೇಳುತ್ತಿದ್ದೇನೆ. ಚುನಾವಣೆ ಘೋಷಣೆಯಾದ ಬಳಿಕ ಅವರ ಜತೆ ಗುರುತಿಸಿಕೊಂಡವರೆಲ್ಲ ನಮ್ಮ ಜತೆಗೆ ಇರುತ್ತಾರೆ ಎಂದು ಮುತಾಲಿಕ್ ಹೇಳಿದರು.
ದಾವಣಗೆರೆ ಶಾಸಕನ ಸಹಿತ ಹಲವು ಶಾಸಕರ ವಿರುದ್ಧ ಭ್ರಷ್ಟಾಚಾರ ದೂರು ದಾಖಲಿಸಿ 10 ವರ್ಷಗಳಾಗಿವೆ. ಸ್ಪಷ್ಟ ದಾಖಲೆ ನೀಡಿದ್ದರೂ ವಿಳಂಬ ಮಾಡುವುದಾದರೆ ಲೋಕಾಯುಕ್ತ ಕೂಡ ಭ್ರಷ್ಟವೇ ಎಂಬ ಪ್ರಶ್ನೆಯನ್ನು ಅವರ ಬಳಿಯೇ ಕೇಳುವೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ನ್ಯಾಯವಾದಿ ಹರೀಶ್ ಅಧಿಕಾರಿ, ಲಕ್ಷ್ಮೀನಾರಾಯಣ ಮಲ್ಯ, ಸುಭಾಶ್ ಹೆಗ್ಡೆ, ದಿವ್ಯಾ, ಗಂಗಾಧರ ಕುಲಕರ್ಣಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.