ನೆಲದ ಸೊಗಡಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್; ನೋಡಿದವರಿಗೆ ಮೋಡಿ ಮಾಡಿದ‌ ಜೋಡಿ


Team Udayavani, Mar 7, 2023, 5:30 PM IST

ನೆಲದ ಸೊಗಡಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್; ನೋಡಿದವರಿಗೆ ಮೋಡಿ ಮಾಡಿದ‌ ಜೋಡಿ

ಇತ್ತೀಚೆಗೆ ಎಲ್ಲ ವಿಚಾರದಲ್ಲೂ ನಾವು ತೀರಾ ಮಾಡರ್ನ್ ಆಗಿದ್ದೇವೆ.‌ ನಿತ್ಯದ ದಿನಚರಿಯೂ ಹಿಂತಿರುಗಿ ನೋಡಲಾಗಷ್ಟು ಬದಲಾಗಿ‍ದೆ. ಹವ್ಯಾಸಗಳು, ರೂಢಿಗಳು ಬದಾಲಾಗಿವೆ. ಇಡೀ ಜಗತ್ತೇ ಈ ಹಾದಿಯಲ್ಲಿ ಹೊರಟಿದೆ. ಸುಮ್ನೆ ನಾನೇಕೆ ಹೊಸ ಹಾದಿಯಲ್ಲಿ ಹೋಗಬೇಕು ಎಂಬುದಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ.

ಈಗ ಹೇಳಬೇಕಾದ ವಿಷಯಕ್ಕೆ ಬರೋಣ. ಮದುವೆಗೆ ಮುನ್ನ ಜೋಡಿಯು ಫೋಟೋ ಶೂಟ್ ಮಾಡಿಸೋದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.  ಥೇಟ್ ಹೀರೋ ಹೀರೋಯಿನ್‌ಗಳಂತೆ ಪೋಸ್ ಕೊಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಳ್ಳುವುದು, ಡ್ರೋನ್ ಹಾರಿ ಬಿಟ್ಟು ವಿಹಂಗಮ ನೋಟದ ದೃಶ್ಯ ಚಿತ್ರೀಕರಿಸಿ ಜಾಣ್ಮೆಯಿಂದ ಎಡಿಟ್ ಮಾಡಿಸುವುದು, ನಂತರ ಅದನ್ನು ತಮ್ಮ ಸ್ನೇಹಿತರು, ಬಂಧುಗಳು, ಹಿತೈಷಿಗಳೊಂದಿಗೆ ಹಂಚಿಕೊಳ್ಳುವುದು, ಆ ಮೂಲಕ ಖುಷಿ ಪಡೋದು ಸಾಮಾನ್ಯ ಎಂಬಂತಾಗಿದೆ. ಇದಕ್ಕಾಗಿ ಪ್ರಕೃತಿಯ ರಮಣೀಯ ತಾಣಗಳಿಗೆ ಹೋಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡುವವರೂ ಇದ್ದಾರೆ‌.

ಆದರೆ ಅಂಥವರೆಲ್ಲರ ನಡುವೆ ಇಲ್ಲೊಂದು ಜೋಡಿ ಪಕ್ಕಾ ಗ್ರಾಮ್ಯ ಸೊಗಡಿನಲ್ಲಿ ವಿಭಿನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದೆ‌. ಬಳ್ಳಾರಿ ಮೂಲದ ಪವಿತ್ರಾ ಮತ್ತು ಅರ್ಜುನ್ ಎಂಬ ಈ ಜೋಡಿಗೆ ಈ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸಿದವರು ಹುಬ್ಬಳ್ಳಿಯ ಯುವ ಪ್ರತಿಭೆ ಅಭಿನಂದನ್ ಜೈನ್. ವೃತ್ತಿಪರ ಫೋಟೋಗ್ರಾಫರ್ ಆಗಿರುವ ಇವರು ಉತ್ತಮ ದೃಶ್ಯ ಸಂಕಲನಕಾರ (ವಿಡಿಯೋ ಎಡಿಟರ್) ಕೂಡ ಹೌದು. ಸದಾ ಹೊಸತನಕ್ಕೆ ಹಂಬಲಿಸುವ ಅಭಿನಂದನ್, ಸೃಜನಶೀಲ ಛಾಯಾಗ್ರಹಣಕ್ಕೆ ಮುಂದಾಗುತ್ತಾರೆ. ಅವರು ಕ್ಲಿಕ್ ಮಾಡಿದ ಈ ಫೋಟೋಗಳನ್ನು ಗಮನಿಸಿದರೆ ವರಕವಿ ಡಾ. ದ. ರಾ ಬೇಂದ್ರೆ ಅವರ ಈ ಕವಿತೆ ನೆನಪಾಗುವುದು.

ನಾನು ಬಡವಿ ಆತ ಬಡವ

ಒಲವೇ ನಮ್ಮ ಬದುಕು

ಬಳಸಿಕೊಂಡೆವದನೇ ನಾವು

ಅದಕು ಇದಕು ಎದಕು

ಈ ಫೋಟೋಗಳಲ್ಲಿ ದಂಪತಿಯ ನಡುವೆ ಇರಬೇಕಾದ ಅಕ್ಕರೆ ಇದೆ. ಉತ್ಕಟ ಪ್ರೇಮ ಕಾಣುತ್ತಿದೆ. ಭಾವ ಬೆಸುಗೆ ಹೊಸೆದುಕೊಂಡಿದೆ. ಬಿಟ್ಟಿರಲಾಗದ ಬಾಂಧವ್ಯ ಏರ್ಪಟ್ಟಿದೆ. ನಿನ್ನ ಆಸೆ, ತುಡಿತ, ಬಯಕೆ, ಇಂಗಿತಗಳೆಲ್ಲವನ್ನೂ ಅರ್ಥೈಸಿಕೊಂಡು ಅದನ್ನು ಪೂರೈಸುವುದು ನನ್ನ ಸವಿನಯ ಕರ್ತವ್ಯ ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೇನೋ ಎಂಬಂತೆ ಈ ಫೋಟೋಗಳು ಕಾಣುತ್ತಿವೆ.

ಮಾಡಿಸಿದರೆ ಈ ತರ ಫೋಟೋ ಶೂಟ್ ಮಾಡಿಸಬೇಕು. ಅದರ ದಾಂಪತ್ಯದ ಏಳು-ಬೀಳಿನ ವಿವಿಧ ಮಜಲುಗಳು ಒಡಮೂಡಿ ಬರಬೇಕು ಎಂಬ ಅಭಿಪ್ರಾಯವನ್ನು ಈ ಫೋಟೋ ನೋಡಿದವರು ವ್ಯಕ್ತಪಡಿಸುತ್ತಿದ್ದಾರೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ- ಸೊಗಡು ಮರೆಯದಿರೋಣ. ನಮ್ಮ ನೆಲ ಮೂಲದ ಆಚಾರ-ವಿಚಾರಕ್ಕೆ ಜೈ ಎನ್ನೋಣ. ಏನಂತೀರಿ?

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.