ಮೋದಿ ಅವಧಿಯಲ್ಲಿ ಪಾಕ್‌ಗೆ ಏಟು ಖಚಿತ! ಚೀನಾ ಜತೆಗೂ ಸಶಸ್ತ್ರ ಸಂಘರ್ಷ ಸಾಧ್ಯತೆ
Team Udayavani, Mar 10, 2023, 8:10 AM IST
ವಾಷಿಂಗ್ಟನ್: “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನ ಸೇನೆ ಕೈಗೊಳ್ಳುವ ದುಷ್ಕೃತ್ಯಗಳಿಗೆ ಮತ್ತಷ್ಟು ಪ್ರಬಲ ಪ್ರತಿಕ್ರಿಯೆ ನೀಡುವುದು ಖಚಿತ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇದ್ದುದ್ದಕ್ಕಿಂತ ತೀವ್ರ ರೀತಿಯಲ್ಲಿ ಇರಲಿದೆ.’
– ಹೀಗೆಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆ ದೇಶ ಸಂಸತ್‌ಗೆ ಸಲ್ಲಿಕೆ ಮಾಡಿರುವ ಮೌಲ್ಯಮಾಪನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದರ ಜತೆಗೆ 2020ರ ಗಾಲ್ವಾನ್ ದಾಳಿಯ ಬಳಿಕ ಭಾರತ ಹಾಗೂ ಚೀನಾ ನಡುವಿನ ಬಾಂಧವ್ಯದಲ್ಲಿ ಸುಧಾರಣೆಯಾಗಿಲ್ಲ. ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಯಾದ್ಯಂತ ಎರಡೂ ದೇಶಗಳ ಸೇನೆಗಳು ಜಮಾವಣೆಯಾಗಿವೆ. ಈ ಎಲ್ಲಾ ಪ್ರತಿಕೂಲ ಅಂಶಗಳ ಹೊರತಾಗಿಯೂ ಎರಡೂ ದೇಶಗಳ ನಡುವೆ ಮಾತುಕತೆಗಳು ನಡೆದಿದ್ದರೂ, ಅದರಲ್ಲೇನೂ ಧನಾತ್ಮಕ ಪರಿಣಾಮ ಬೀರಿಲ್ಲ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.
ಜಗತ್ತಿನ ವಿವಿಧ ಭಾಗಗಳಲ್ಲಿ ಭದ್ರತೆಗೆ ಇರುವ ಸಂಭಾವ್ಯ ಬೆದರಿಕೆಗಳನ್ನು ಪರಿ ಶೀಲಿಸಿ, ಅಮೆರಿಕದ ಗುಪ್ತಚರ ಸಂಸ್ಥೆಗಳ ಒಕ್ಕೂಟ ನಡೆಸಿರುವ ಮೌಲ್ಯಮಾಪನದಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ.
ಮೋದಿ ಅವಧಿಯಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಬಾಂಧವ್ಯ ಸುಧಾರಣೆಯಾಗಿಲ್ಲ. ಲಾಗಾಯ್ತಿನಿಂದ ಪಾಕಿಸ್ತಾನ, ಭಾರತ ವಿರೋಧಿ ಧೋರಣೆ ಗಳನ್ನು ಹೊಂದಿದೆ. ಭಾರತದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ನರೇಂದ್ರ ಮೋದಿ ಸರ್ಕಾರ ಪಾಕ್‌ನ ಕುತ್ಸಿತ ದುಷ್ಕೃತ್ಯಗಳಿಗೆ ಸೇನಾ ಮಾಧ್ಯಮದ ಮೂಲಕ ಹಿಂದಿನ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಬಲ ಪ್ರತ್ಯುತ್ತರ ನೀಡಲಿದೆ. ಕಾಶ್ಮೀರ ವಿಚಾರ, ಗಡಿಯಾಚೆಯಿಂದ ಭಯೋತ್ಪಾದನೆ ವಿಚಾರದಿಂದಾಗಿ ಬಾಂಧವ್ಯ ಮುರಿದು ಬಿದ್ದಿದೆ ಎಂದು ವರದಿಯಲ್ಲಿ ಅಭಿ ಪ್ರಾಯಪಡಲಾಗಿದೆ. ಭಯೋ ತ್ಪಾದ ನೆಗೆ ಪೂರ್ಣವಿರಾಮ ಬೀಳುವ ವರೆಗೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಭಾರತ ಸರ್ಕಾರ ಪ್ರತಿಪಾದಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಸಶಸ್ತ್ರ ಸಂಘರ್ಷ: ಭಾರತ ಮತ್ತು ಚೀನಾ ಸಂಘರ್ಷದ ಬಗ್ಗೆ ವರದಿಯಲ್ಲಿ ಉಲ್ಲೇಖೀ ಸಿರುವ ಪ್ರಕಾರ, “ಎಲ್‌ಎಸಿಯಾದ್ಯಂತ 2 ದೇಶಗಳ ಯೋಧರು ಜಮಾವಣೆಗೊಂಡಿ ದ್ದಾರೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಸಶಸ್ತ್ರ ಸಂಘರ್ಷ ನಡೆಯುವ ಸಾಧ್ಯತೆ ಯನ್ನೂ ತಳ್ಳಿ ಹಾಕುವಂತೆ ಇಲ್ಲ. ಇದು ಅಮೆರಿಕ ಸರ್ಕಾರಕ್ಕೆ ಮತ್ತು ಅದರ ಪ್ರಜೆಗಳಿಗೆ ನೇರ ಬೆದರಿಕೆಯನ್ನು ತಂದೊಡ್ಡುವ ಸಾಧ್ಯತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರದ ಮಧ್ಯಪ್ರವೇಶ ಮಾಡಿ ಬಿಗುವು ತಣಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.