ಆಪ್ ಕಿತ್ತೂಗೆಯಲು 400 ದಿನ ಬಿಜೆಪಿ ಅಭಿಯಾನ! ವಿಧಾನಸಭೆ ಚುನಾವಣೆವರೆಗೆ ಹೋರಾಟ
Team Udayavani, Mar 11, 2023, 7:33 AM IST
ನವದೆಹಲಿ: ಅಮ್ ಆದ್ಮಿ ಪಕ್ಷದ 10 ಹಗರಣಗಳನ್ನು ಮುಂದಿಟ್ಟುಕೊಂಡು, ಮುಂದಿನ 400 ದಿನಗಳು ಆಪ್ ವಿರುದ್ಧ ಅಭಿಯಾನ ಹಮ್ಮಿಕೊಳ್ಳಲು ಬಿಜೆಪಿ ಯೋಜಿಸಿದೆ. ಈ ಮೂಲಕ ದೆಹಲಿ ಹಾಗೂ ದೇಶದಿಂದ ಆಪ್ ಪಕ್ಷವನ್ನು ಬೇರುಸಹಿತ ಕಿತ್ತುಹಾಕಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ಈಗಾಗಲೇ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದರೊಂದಿಗೆ ದೆಹಲಿ ಆಪ್ ಸರ್ಕಾರದ ಶಾಲಾ ಕೊಠಡಿ ಹಗರಣ, ಜಲ ಮಂಡಳಿ ಹಗರಣ, ಡಿಟಿಸಿ ಹಗರಣ, ಹವಾಲ ಹಗರಣ, ಜಾಹೀರಾತು ಹಗರಣ ಹಾಗೂ ಬೇಹುಗಾರಿಕೆ ಹಗರಣದ ವಿರುದ್ಧ ಮುಂದಿನ 400 ದಿನಗಳಲ್ಲಿ ಅಭಿಯಾನವನ್ನು ತೀವ್ರಗೊಳಿಸಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
2025ರ ದೆಹಲಿ ವಿಧಾನಸಭೆ ಚುನಾವಣೆವರೆಗೆ ದಿನಂಪ್ರತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಅಲ್ಲದೇ 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಈ ಹಗರಣಗಳನ್ನು ಪ್ರಸ್ತಾಪಿಸಲಾಗುವುದು. ಈ ಹಗರಣಗಳ ಹಿಂದಿನ ವ್ಯಕ್ತಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಿದ್ದಾರೆ.
ಸಚಿವರನ್ನು ಮುಂದಿಟ್ಟುಕೊಂಡು ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕೇಜ್ರಿವಾಲ್ ಅವರ ಅಸಲಿ ಪ್ರಾಮಾಣಿಕತೆಯನ್ನು ಜನರ ಎದುರು ತೆರೆದಿಡಲಾಗುವುದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…