ಕಸಾಯಿಖಾನೆಗೆ ತಂದ ಕೋಣದಿಂದ ದಾಂಧಲೆ ಓರ್ವ ಸಾವು; ಹಲವರಿಗೆ ಗಾಯ


Team Udayavani, Mar 11, 2023, 5:25 AM IST

kona

ಕಾಸರಗೋಡು: ಕಸಾಯಿಖಾನೆಗೆ ತಂದ ಕೋಣವೊಂದು ನಡೆಸಿದ ದಾಂಧಲೆಯಲ್ಲಿ ಯುವಕನೋರ್ವ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ಅಂಗಡಿಗಳಿಗೆ ಹಾನಿಯಾದ ಘಟನೆ ಮೊಗ್ರಾಲ್‌ ಪುತ್ತೂರು ಕಡವತ್ತ್ನಲ್ಲಿ ನಡೆದಿದೆ.

ಲಾರಿಯಿಂದ ಕೋಣವನ್ನು ತಂದಿಳಿಸಿದಾಗ ಅದರ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಓಡ ತೊಡಗಿತು. ಅದನ್ನು ಹಿಡಿಯಲು ಓಡಿದ ವಿಜಯನಗರದ ಎನ್‌ಎಚ್‌ ರಸ್ತೆಯ ರಝಾಕ್‌ ಸಾಬ್‌ ಅವರ ಪುತ್ರ ಸಾದಿಕ್‌ (22) ಗೆ ಕೋಣ ಕೊಂಬಿನಿಂದ ಇರಿಯಿತು. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ತತ್‌ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆ ಬಳಿಕವೂ ಪರಾಕ್ರಮ ಮುಂದುವರಿಸಿದ ಕೋಣ ಪರಿಸರದಲ್ಲಿದ್ದ ಹಲವರಿಗೆ ಹಾಯ್ದು ಗಾಯಗೊಳಿಸಿತು. ಅಲ್ಲೇ ಪಕ್ಕದ ಮನೆ ಬಳಿ ಆಟ ಆಡುತ್ತಿದ್ದ ಮುಜೀಬ್‌ ಅವರ ಪುತ್ರಿ ಹೈರಾಫತ್‌ (4 ವರ್ಷ) ಮೇಲೂ ಹಾಯ್ದ ಕಾರಣ ಆಕೆಯ ಕೆಲವು ಹಲ್ಲುಗಳು ಉದುರಿ ಹೋಗಿವೆ. ಕೋಣದ ದಾಳಿಯಲ್ಲಿ 25ರಷ್ಟು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕೋಣವನ್ನು ಮೃತ ಸಾದಿಕ್‌ ಮತ್ತು ಆತನ ತಂದೆ ರಝಾಕ್‌ ಸಾಬ್‌ ಕರ್ನಾಟಕದಿಂದ ಲಾರಿಯಲ್ಲಿ ಮೊಗ್ರಾಲ್‌ ಪುತ್ತೂರಿಗೆ ತಂದಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೋಳಿ ಅಂಕಕ್ಕೆ ದಾಳಿ 7 ಮಂದಿ ಬಂಧನ
ಉಪ್ಪಳ: ಪಟ್ಟತ್ತಮೊಗರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರ ಸಮೀಪದ ಬಯಲಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿ 17 ಕೋಳಿಗಳನ್ನು ಹಾಗೂ 20,550 ರೂ. ವಶಪಡಿಸಿಕೊಂಡಿದ್ದಾರೆ.

ಬಂಬ್ರಾಣ ನಿವಾಸಿ ಪ್ರಶಾಂತ್‌ ಕುಮಾರ್‌ (32), ಪಾಣಾಜೆಯ ರವೀಶ (23), ಮೂಡಂಬೈಲು ನಿವಾಸಿಗಳಾದ ಹರಿಜೀವನ್‌ದಾಸ್‌ (53), ರಾಜೀವ (55), ಪವಿ (46), ಸುರೇಶ್‌ (45), ಮಜಿಬೈಲಿನ ಚಂದ್ರಹಾಸ (60) ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಕದ ಬಗ್ಗೆ ರಹಸ್ಯ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದರು.
—————————————————-
ಬಚ್ಚಲು ಕೊಠಡಿ ಬೆಂಕಿಗಾಹುತಿ
ಉಪ್ಪಳ: ಅಟ್ಟೆಗೋಳಿ ನಿವಾಸಿ ಉಮೇಶ ಅವರ ಮನೆಗೆ ಹೊಂದಿಕೊಂಡಿರುವ ಬಚ್ಚಲು ಕೊಠಡಿಗೆ ಬೆಂಕಿ ಹತ್ತಿಕೊಂಡು ಸಾವಿರಾರು ರೂ. ನಷ್ಟ ಉಂಟಾಗಿದೆ. ಬಚ್ಚಲು ಕೊಠಡಿ ಸಮೀಪ ಸಂಗ್ರಹಿಸಿಟ್ಟಿದ್ದ 2000ದಷ್ಟು ಒಣ ತೆಂಗಿನ ಕಾಯಿ, ಮರ ಮೊದಲಾದವುಗಳು ಬೆಂಕಿಗಾಹುತಿಯಾಗಿವೆ. ಉಪ್ಪಳದ ಅಗ್ನಿಶಾಮಕ ದಳ ಮತ್ತು ಅಟ್ಟೆಗೋಳಿ ಯುವಕ ಸಂಘ ಗ್ರಂಥಾಲಯದ ಕಾರ್ಯಕರ್ತರು, ಸ್ಥಳೀಯರು ಬೆಂಕಿಯನ್ನು ಆರಿಸಿದರು.
————————————————————–
ದಿರ್ಹಂ ಬದಲು ಕಾಗದದ ಕಟ್ಟ ನೀಡಿ ವ್ಯಾಪಾರಿಗೆ 3 ಲಕ್ಷ ರೂ. ವಂಚನೆ
ಮಂಜೇಶ್ವರ: ಯುಎಇ ದಿರ್ಹಂ ಎಂದು ಸುಳ್ಳು ಹೇಳಿ ಕಾಸರಗೋಡು ಮನ್ನಿಪ್ಪಾಡಿ ಆರ್‌.ಡಿ. ನಗರ ಕೃಷ್ಣ ನಿಲಯದ ಆನಂದ (62) ಅವರಿಗೆ 3 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ನೀಡಿದ ದೂರಿನಂತೆ ಉಪ್ಪಳದ ಹಾಶಿಂ ಮತ್ತು ಪಶ್ಚಿಮ ಬಂಗಾಲದ ರಾಜು ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಾ. 9ರಂದು ಮಧ್ಯಾಹ್ನ ಉಪ್ಪಳ ಬಸ್‌ ನಿಲ್ದಾಣದಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುಗಾರರಾದ ಆನಂದ ಕಾಸರಗೋಡಿನಲ್ಲಿ ವಾಹನದ ಸ್ಪೇರ್‌ ಪಾರ್ಟ್ಸ್ ವ್ಯಾಪಾರಿಯಾಗಿದ್ದಾರೆ. ಇವರನ್ನು ರಾಜು ಸಂಪರ್ಕಿಸಿ ಯು.ಎ.ಇ. ದಿರØಂ ಹಸ್ತಾಂತರಿಸಲು ಇದೆಯೆಂದು ತಿಳಿಸಿದ್ದನು. ಅದನ್ನು ನಂಬಿದ ಆನಂದ ಅವರು 3 ಲಕ್ಷ ರೂ.ಗಳನ್ನು ರಾಜು ಮತ್ತು ಹಾಶಿಂಗೆ ನೀಡಿದ್ದು, ಅದಕ್ಕೆ ಬದಲಿ ಕಟ್ಟವೊಂದನ್ನು ಆನಂದ ಅವರಿಗೆ ನೀಡಿ ಅಲ್ಲಿಂದ ಕಾಲ್ಕಿತ್ತರು. ಕಟ್ಟವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕಾಗದದ ಕಟ್ಟುಗಳಿರುವುದು ಕಂಡು ಬಂತು. ಈ ಬಗ್ಗೆ ಕೂಡಲೇ ಪೊಲೀಸ್‌ ಕಂಟ್ರೋಲ್‌ ರೂಂಗೆ ವಿಷಯ ತಿಳಿಸಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಹಾಶಿಂ ಹಾಗು ರಾಜು ವಿರುದ್ಧ ಪೊಲೀಸರು ಕೇಸು ದಾಖಲಿಸಿ ಅವರಿಗೆ ಶೋಧ ನಡೆಸುತ್ತಿದ್ದಾರೆ.
—————————————————-
ಕಾರು – ಪಿಕಪ್‌ ಢಿಕ್ಕಿ: ಯುವಕನಿಗೆ ಗಾಯ
ಕುಂಬಳೆ: ಸೀತಾಂಗೋಳಿ ಮರದ ಮಿಲ್‌ ಬಳಿ ಕಾರು ಹಾಗೂ ಪಿಕಪ್‌ ಢಿಕ್ಕಿ ಹೊಡೆದು ಕುಡಾಲುಮೇರ್ಕಳ ನಿವಾಸಿ ಸಿದ್ದಿಕ್‌ (38) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
——————————————————————
ಮಟ್ಕಾ: ಬಂಧನ
ಕಾಸರಗೋಡು: ನಗರದ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ 250 ರೂ. ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.
————————————————————
ಕಾರು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನ: ಇಬ್ಬರು ವಶಕ್ಕೆ
ಕಾಸರಗೋಡು: ಬುಲೆಟ್‌ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಎಸ್‌ಟಿಯು ಕಾರ್ಯಕರ್ತ ಪಾರೆಕಟ್ಟೆಯ ಸಿದ್ದಿಕ್‌(26) ಅವರಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾಸರಗೋಡು ಎಂ.ಜಿ. ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.