ಮುಖಂಡರ ಮುಂದೆಯೇ ಬಿಜೆಪಿ ಕಾರ್ಯಕರ್ತರ ಕಚ್ಚಾಟ


Team Udayavani, Mar 11, 2023, 1:58 PM IST

tdy-20

ಮಾಲೂರು: ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಜಿಲ್ಲಾಧ್ಯಕ್ಷರ ಮುಂದೆಯೇ ಪಕ್ಷದ 2 ಬಣದ ಕಾರ್ಯಕರ್ತರು ಕೈ ಕೈ ಮೀಲಾಯಿಸಿಕೊಂಡ ಘಟನೆ ನಡೆಯಿತು.

ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯು ಸಂಪೂರ್ಣ ಗೊಂದಲಮಯವಾಗಿತ್ತು. ತಾಲೂಕು ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸದ ಹಿರಿಯ ಮುಖಂಡ ಹನುಮಪ್ಪ ಅವರ ಭಾಷಣದಿಂದಲೇ ಗೊಂದಲ ಆರಂಭವಾಯಿತು. ಸಭೆ ಉದ್ದೇಶಿಸಿ ಜಿಲ್ಲಾಧ್ಯಕ್ಷರು ಮಾತನಾಡುವ ವೇಳೆ ಮುಖಂಡ ಕೂರಿ ಮಂಜುನಾಥ್‌ ಅವರು ಟಿಕೆಟ್‌ ಯಾರಿಗೆ ಎಂದು ಫೈನಲ್‌ ಮಾಡಿ ಗೊಂದಲ ನಿವಾರಣೆ ಮಾಡಿ ಎಂದು ಒತ್ತಡ ಹಾಕಿದರು.

ಈ ವೇಳೆ, ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ, ಹೂಡಿ ವಿಜಯಕುಮಾರ್‌ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟಿತು. ಒಂದು ಹಂತದಲ್ಲಿ ಉಭಯ ಬಣದ ನಡುವೆ ಜೋರು ಗಲಾಟೆ ನಡೆದು ಕೈಕೈ ಮಿಸಲಾಯಿಸಿದರು.

ಪೊಲೀಸರ ಮಧ್ಯ ಪ್ರವೇಶ: ಚುನಾವಣಾ ಉಸ್ತುವಾರಿ ಹಾಗೂ ಜಿಲ್ಲಾ ನಾಯಕರ ಮುಂದೆಯೇ 2 ಬಣದ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡು ಜಿಲ್ಲಾ ನಾಯಕರಿಗೆ ಮುಜುಗರ ತಂದಿದ್ದಲ್ಲದೆ, ಪೊಲೀಸರು ಮಧ್ಯ ಪ್ರವೇಶ ಮಾಡುವವರೆಗೂ ಗೊಂದಲ ಬಿಗುವಿ ನಿಂದ ಕೂಡಿತ್ತು. ಇನ್ಸ್‌ಪೆಕ್ಟರ್‌ ಚಂದ್ರದರ್‌ ಮಧ್ಯ ಪ್ರವೇಶಿಸಿ ಗೊಂದಲ ತಿಳಿಗೊಳಿಸಿದರು.

ನಡತೆ ಬದಲಿಸಿಕೊಳ್ಳದಿದ್ದರೆ ಕ್ರಮ: ಬಿಜೆಪಿ ಚುನಾ ವಣಾ ಉಸ್ತುವಾರಿ ನರೇಂದ್ರ ರಂಗಪ್ಪ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ರೀತಿಯ ನಡೆ ಸರಿಯಾದುದ್ದಲ್ಲ, ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸುವ ಮಟ್ಟಕ್ಕೆ ಕಾರ್ಯಕರ್ತರು ಇಳಿದಿದ್ದು ಒಪ್ಪಲು ಸಾಧ್ಯವಿಲ್ಲ. ನಿಮ್ಮ ನಡತೆಗಳನ್ನು ಬದಲಾಯಿಸಿ ಕೊಳ್ಳದೇ ಹೋದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಯಾರಿಗೇ ಟಿಕೆಟ್‌ ಕೊಟ್ರೂ ಕೆಲಸ ಮಾಡಿ: ಮಾಲೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ನಿಮ್ಮ ಈ ನಡೆಯಿಂದಾಗಿ ನಾವು ಕ್ಷೇತ್ರವನ್ನು ಕಳೆದುಕೊಳ್ಳ ಬೇಕಾಗುತ್ತದೆ. ಟಿಕೆಟ್‌ ನೀಡುವುದು ಪಕ್ಷದ ಹೈಕಮಾಂಡ್‌, ಅವರು ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ಮಾತನಾಡಿ, ಮಾ.12ರಂದು ತಾಲೂಕಿಗೆ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು, ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಯಶಸ್ವಿಯಾಗಿ ಕಳುಹಿಸಿಕೊಡಿ: ಮಾಜಿ ಶಾಸಕ ಕೆ. ಎಸ್‌.ಮಂಜುನಾಥ್‌ಗೌಡ ಮಾತನಾಡಿ, ಕೋಲಾರ ಜಿಲ್ಲೆಯ ವಿಜಯ ಸಂಕಲ್ಪ ಯಾತ್ರೆ ತಾಲೂಕಿನಿಂದ ಆರಂಭಗೊಳ್ಳಲಿದ್ದು, ಹೊಸಕೋಟೆ ರಸ್ತೆಯ ಮೂಲಕ ಪಟ್ಟಣಕ್ಕೆ ಆಗಮಿಸಿ, ನಂತರ ಕೋಲಾರಕ್ಕೆ ತೆರಳಲಿದೆ. ಯಾತ್ರೆಯನ್ನು ಕಾರ್ಯಕರ್ತರು ಯಶಸ್ವಿಯಾಗಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲಾ ಉಸ್ತುವಾರಿ ಕೆ.ಚಂದ್ರಾರೆಡ್ಡಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ರಾಮಮೂರ್ತಿ, ಟಿಕೆಟ್‌ ಆಕಾಂಕ್ಷಿ ಆರ್‌ .ವಿ.ಭೂತಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್‌ ಆರಾಧ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಂಬರೀಶ್‌ ರೆಡ್ಡಿ, ವೆಂಕಟೇಶ್‌, ಮಾಜಿ ಅಧ್ಯಕ್ಷ ಬಿ.ಆರ್‌.ವೆಂಕಟೇಶ್‌, ತಿಮ್ಮನಾಯಕನಹಳ್ಳಿ ನಾರಾಯಣ ಸ್ವಾಮಿ, ಗೋಪಾಲಕೃಷ್ಣ, ಅಮುದಾ ವೇಣು, ಪದ್ಮಾವತಿ, ಅನಿತಾ ನಾಗರಾಜ್‌, ಮುಖಂಡ ರಾದ ದೇವರಾಜ್‌ ರೆಡ್ಡಿ, ರಾಜಾರಾಂ, ಆರ್‌.ಪ್ರಭಾಕರ್‌, ಆಗ್ರಿನಾರಾಯಣಪ್ಪ, ಪಿ.ನಾರಾಯಣ ಸ್ವಾಮಿ, ಚಿನ್ನಸ್ವಾಮಿಗೌಡ, ಟಿ.ಬಿ.ಕೃಷ್ಣಪ್ಪ, ದಿಬ್ಬಯ್ಯ, ಹರೀಶ್‌ಗೌಡ, ವೇಮನ, ಭಾನುತೇಜಾ, ಸಿ.ಪಿ.ನಾಗರಾಜ್‌, ಆಲೂಗಡ್ಡೆ ಮಂಜುನಾಥ್‌, ಪ್ರಸನ್ನ, ಭಾರತಮ್ಮ, ನೀಲಾಚಂದ್ರ ಮುಖಂಡರು ಇದ್ದರು.

ಟಾಪ್ ನ್ಯೂಸ್

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chaitra-Kundapur

BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ

gold-suresh-bigg-boss

BBK-11: ಬಾಡಿಗಾರ್ಡ್ ಗಳೊಂದಿಗೆ ಬಿಗ್ ಬಾಸ್ ಬಂದ ‘ಗೋಲ್ಡ್ ಸುರೇಶ್’

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chaitra-Kundapur

BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ

byndoor

Udupi: ಕಾರುಗಳ ಢಿಕ್ಕಿ; ಮೂವರಿಗೆ ಗಾಯ

gold-suresh-bigg-boss

BBK-11: ಬಾಡಿಗಾರ್ಡ್ ಗಳೊಂದಿಗೆ ಬಿಗ್ ಬಾಸ್ ಬಂದ ‘ಗೋಲ್ಡ್ ಸುರೇಶ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.