ವಿಧಾನ ಕದನ 2023: ಮೋದಿ ಅಲೆ ಜೋರಾದರೆ ಜಯ ತೇಲುವುದು ಸುಲಭ


Team Udayavani, Mar 13, 2023, 7:24 AM IST

MODI IMP

ಎರಡೂ ಜಿಲ್ಲೆಗಳ ಬಹುತೇಕ ಕ್ಷೇತ್ರಗಳಲ್ಲಿ ಹಿಂದಿನವರೇ ಮತ್ತೆ ಸ್ಪರ್ಧಿಸುವ ನಂಬಿಕೆಯಲ್ಲಿದ್ದಾರೆ. ಆದರೂ ಕೆಲವೆಡೆ ಬದಲಾವಣೆಯ ಲೆಕ್ಕಾಚಾರ ಪಕ್ಷದ ವರಿಷ್ಠರ ತಲೆಯಲ್ಲಿ ನಡೆಯುತ್ತಿದೆ. ಎಲ್ಲವೂ ನಿಚ್ಚಳವಾಗುವುದು ಟಿಕೆಟ್‌ ಘೋಷಣೆಯಾದ ಮೇಲೆಯೇ. ಹಾಗಾಗಿ ಪಕ್ಷದಲ್ಲೂ ಟಿಕೆಟ್‌ ಆಕಾಂಕ್ಷಿಗಳ ಪ್ರಯತ್ನ ಭರದಿಂದ ಸಾಗಿದೆ.

ಮಂಗಳೂರು/ಉಡುಪಿ : ಹದಿಮೂರರಲ್ಲಿ 12 ತಮ್ಮದೇ ಶಾಸಕರು, ಇಬ್ಬರು ಸಚಿವರು, ಪ್ರಾರಂಭ ದಲ್ಲೇ ಅಮಿತ್‌ ಶಾ, ಜೆಪಿ ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರ ಉತ್ಸಾಹ ತುಂಬುವ ಇಂಜೆಕ್ಷನ್‌.

ಇವಿಷ್ಟು ಅಂಶಗಳ ಲೆಕ್ಕಾಚಾರ ನೋಡಿ ದರೆ ಮೇಲ್ನೋಟಕ್ಕೆ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಮಲ ಪಕ್ಷದ ಸಿದ್ಧತೆ ಭರ್ಜರಿಯಾಗಿ ಆರಂಭಗೊಂಡಿದೆ. ದಕ್ಷಿಣ ಕನ್ನಡದಲ್ಲಿ ಏಳು ಹಾಗೂ ಉಡುಪಿ ಜಿಲ್ಲೆಯಲ್ಲಿ ಐದು ಮಂದಿ ಶಾಸಕರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳೂ ಮಂದಿಗೆ ಮತ್ತೆ ಟಿಕೆಟ್‌ ಸಿಗಬಹುದೇ ಎಂದರೆ ಪಕ್ಷದ ಹಿರಿಯ ನಾಯಕರು, ಸಂಸದೀಯ ಮಂಡಳಿಗೆ ಬಿಟ್ಟದ್ದು ಎನ್ನುತ್ತಾರೆ ಪಕ್ಷದವರು. ಅಮಿತ್‌ಶಾ ಕಳೆದ ತಿಂಗಳು ಜಿಲ್ಲೆಗೆ ಬಂದಿದ್ದಾಗ, ಪಕ್ಷದೊಳಗಿನ ಭಿನ್ನಮತ ಸರಿಪಡಿಸಿಕೊಂಡು, ಕಾರ್ಯ ಕರ್ತರೊಂದಿಗೆ ಅಸಮಾಧಾನ ಸರಿಪಡಿಸಿಕೊಳ್ಳಲು ಶಾಸಕರಿಗೆ, ಪದಾಧಿಕಾರಿಗಳಿಗೆ ಸೂಚಿಸಿದ್ದರು.

…ಆದರೂ ಪ್ರಚಾರ ಸುಗಮ
ಶಾ ರ ಸಲಹೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಯಾಗಿದೆಯೋ ಗೊತ್ತಿಲ್ಲ. ಪುತ್ತೂರಿನಲ್ಲಿ ಬಣ ಮೇಲಾಟ ಸ್ವಲ್ಪ ಕಡಿಮೆಯಾಗಿದೆ ಅಂತೆ. ಬಂಟ್ವಾಳ, ಸುಳ್ಯ ಕೆಲವೆಡೆ ಒಂದಷ್ಟು ಅಸಮಾಧಾನ ಬೇಸರಗಳಿರುವುದನ್ನು ನಾಯಕರೇ ಅಲ್ಲಗಳೆಯು ತ್ತಿಲ್ಲ. ಹಾಗಾಗಿ ಕೆಲವು ಕಾರ್ಯಕ್ರಮಗಳಲ್ಲಿ ನೀರಸ ವಾತಾವರಣದ ಮಾತು ಕೇಳಿಬರುತ್ತಿದೆ.
ಸುಳ್ಯದ ಕೆಲವೆಡೆ ರಸ್ತೆ ಆಗಿಲ್ಲ ಎಂದು ಕಾರ್ಯಕರ್ತರೇ ನೋಟಾ ಅಭಿಯಾನಕ್ಕೆ ಮುಂದಾ ಗಿದ್ದಾರೆ ಎನ್ನಲಾಗಿದೆ. ಹಾಗೆಯೇ ಚುನಾವಣ ಬಹಿಷ್ಕಾರ ಹಾಕಿರುವವರ ಮನವೊಲಿಕೆ ಯತ್ನ ಚಾಲ್ತಿಯಲ್ಲಿದೆ.

ಪುತ್ತೂರಿನ ಶಾಸಕರಿಗೆ ಉಪ್ಪಿನಂಗಡಿಯಲ್ಲಿ ತುಸು ಇರಿಸುಮುರಿಸಾಗುವ ಪ್ರಸಂಗ ನಡೆದಿದೆ. ಪುತ್ತಿಲ ಬಣದವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಆದರೆ ಒಳಗಿನಿಂದ ಇರುವ ಅಸಮಾಧಾನ ಕಡಿಮೆಯಾಗಿಲ್ಲ. ಇಷ್ಟೆಲ್ಲ ಇದ್ದರೂ ಪ್ರಚಾರದಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ.

ಬಂಟ್ವಾಳ ಭಾಗದಲ್ಲೂ ಶಾಸಕರು ನಮ್ಮ ಮಾತನ್ನು ಕೇಳುತ್ತಲ್ಲ ಎಂಬ ಸಣ್ಣ ಕೋಪ ಕೆಲವು ಕಾರ್ಯಕರ್ತರಲ್ಲಿದ್ದರೂ, ಪ್ರಚಾರಕ್ಕೆ ಅಡ್ಡಿಯಾ ಗಿಲ್ಲ. ಒಂದೆಡೆ ರಮಾನಾಥ ರೈ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ರಂಗಕ್ಕೆ ಇಳಿದಿದ್ದಾರೆ. ಆದರೆ ಇನ್ನೂ ಅವರಿಗೆ ಟಿಕೆಟ್‌ ಖಚಿತವಾಗಬೇಕಿದೆ. ಇನ್ನೊಂದೆಡೆ ಎಸ್‌ಡಿಪಿಐ ತನ್ನ ಅಸ್ತಿತ್ವ ಪ್ರದರ್ಶನಕ್ಕೆ ಸಜ್ಜಾಗಿದೆ. ಇದು ನಮಗೆ ಅನುಕೂಲ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು.

ಹೆಚ್ಚಿದ ಶಿಲಾನ್ಯಾಸ, ಉದ್ಘಾಟನೆ
ಆಡಳಿತದಲ್ಲಿರುವ ಕಾರಣ ಸಹಜವಾಗಿಯೇ ಪ್ರಚಾರಕ್ಕೆ ಸಿಗುವ ಅವಕಾಶವನ್ನು ಬಿಜೆಪಿ ಕಳೆದುಕೊಳ್ಳುತ್ತಿಲ್ಲ. ಸದ್ಯ ಎಲ್ಲ ಕ್ಷೇತ್ರಗಳಲ್ಲೂ ನಡೆಯುವ ಕಾರ್ಯಕ್ರಮಗಳು, ಫಲಾನುಭವಿಗಳ ಸಮಾವೇಶಗಳು, ಹೊಸ ಯೋಜನೆಗೆ ಶಿಲಾನ್ಯಾಸ, ಚಾಲನೆ ಇತ್ಯಾದಿ ಭರ್ಜರಿಯಾಗಿ ನಡೆಯುತ್ತಿದೆ.

ಉಭಯ ಜಿಲ್ಲೆಗಳಲ್ಲೂ ಬೂತ್‌ ಲೆಕ್ಕಾಚಾರ
ದಕ್ಷಿಣ ಕನ್ನಡ ಜಿಲ್ಲೆಯ 1860 ಬೂತ್‌ ಪೈಕಿ 1800ರಷ್ಟು ಬೂತ್‌ಗಳಲ್ಲಿ ಬೂತ್‌ ವಿಜಯ ಅಭಿಯಾನ ಯಶಸ್ವಿಯಾಗಿದೆ. ಬೂತ್‌ನಲ್ಲಿರುವವರನ್ನು ಸೇರಿಸಿ ಮಾತುಕತೆ ನಡೆಸುವುದು, ಕಾರ್ಯಕರ್ತರ ಜೋಡಣೆ, ಪೇಜ್‌ ಪ್ರಮುಖರ ನಿಯುಕ್ತಿ, ಇರುವ ಸಣ್ಣ ಪುಟ್ಟ ವ್ಯತ್ಯಾಸ ಬಗೆಹರಿಸುವುದು ಹಾಗೂ ಚುನಾವಣೆಗೆ ಸಜ್ಜುಗೊಳಿಸುವುದು ಇತ್ಯಾದಿಗೆ ಚಾಲನೆ ನೀಡಲಾಗಿದೆ. 495ರಷ್ಟು ಶಕ್ತಿ ಕೇಂದ್ರಗಳಲ್ಲಿ ಸಭೆ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಮೋರ್ಚಾಗಳ ಸಭೆಗಳನ್ನೂ ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ಎಸ್‌ಟಿ ಮೋರ್ಚಾ ಸಭೆ ನಡೆಸಲಾಗಿದ್ದು, ಮಂಗಳೂರಿನಲ್ಲಿ ಯುವಮೋರ್ಚಾ, ಮೂಡುಬಿದಿರೆಯಲ್ಲಿ ಒ.ಬಿ.ಸಿ ಮೋರ್ಚಾ, ಸುಳ್ಯದಲ್ಲಿ ಮಹಿಳಾ ಮೋರ್ಚಾ, ಬೆಳ್ತಂಗಡಿಯಲ್ಲಿ ಎಸ್‌ಸಿ ಮೋರ್ಚಾ, ಬಂಟ್ವಾಳದಲ್ಲಿ ರೈತ ಮೋರ್ಚಾ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬೂತ್‌ ಮಟ್ಟದಲ್ಲಿ ಹೋಗಿ ಬಿಜೆಪಿಯ ಸಾಧನೆ ಪ್ರಚುರ ಪಡಿಸುವ ಎಲ್‌ಇಡಿ ವಾಹನಗಳು ಸಂಚರಿಸುತ್ತಿವೆ, ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವ ಕೆಲಸ ನಡೆದಿದೆ.

ಹಾಗೆಯೇ ಉಡುಪಿ ಜಿಲ್ಲೆಯಲ್ಲೂ ಪ್ರತಿ ಬೂತ್‌ನಲ್ಲೂ 12 ಜನರ ತಂಡ ರಚಿಸಲಾಗಿದೆ. ಪ್ರತಿ ಗ್ರಾಮಗಳಿಗೆ ಒಂದರಂತೆ (ಐದು ಬೂತ್‌ ಒಳಗೊಂಡು) ಶಕ್ತಿ ಕೇಂದ್ರ ರೂಪಿಸಿ, ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಮೇಲುಸ್ತುವಾರಿಯಾಗಿ ನಿಯೋಜಿಸಲಾಗಿದೆ. ಮಂಡಲ, ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ತಂಡಗಳಿವೆ. ಚುನಾವಣೆ ಕಾರ್ಯಕ್ಕಾಗಿ ನಿಯೋಜಿಸಿರುವ ಪ್ರಚಾರಕರೂ ಕ್ಷೇತ್ರ ಸುತ್ತುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನೇ ಪ್ರಮುಖವಾಗಿಟ್ಟುಕೊಂಡು ಪ್ರಚಾರ ಶುರು ಮಾಡಿ ದ್ದಾರೆ. ಸರಕಾರಗಳ ಸಾಧನೆಯ ವಿವರ ಹೊತ್ತ ಡಿಜಿಟಲ್‌ ರಥವೂ ಪ್ರತೀ ಗ್ರಾ.ಪಂ.ಗಳಲ್ಲೂ ತಿರುಗುತ್ತಿದೆ.

ಉಡುಪಿ ಜಿಲ್ಲೆಯಲ್ಲೂ 2018ರಲ್ಲಿ ಗೆದ್ದ 5 ಸ್ಥಾನಗಳನ್ನು ಉಳಿಸಿಕೊಂಡು, ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವುದರತ್ತ ಹೆಚ್ಚು ಪ್ರಯತ್ನ ನಡೆದಿದೆ. ಬೈಂದೂರು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಪಕ್ಷದಿಂದ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾದವರೇ ಇದ್ದಾರೆ. ಸಂಘಟನಾತ್ಮಕವಾಗಿ ಚುನಾವಣೆ ಸಿದ್ಧತೆ ಬಹು ಹಿಂದಿನಿಂದಲೇ ಆರಂಭಿಸಿದೆ.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಜಿಲ್ಲೆಯಲ್ಲಿ ಒಂದು ಸುತ್ತಿನ ಪ್ರವಾಸ ಪೂರ್ಣಗೊಳಿಸಿ, ಬೂತ್‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಸಹ ಉಸ್ತುವಾರಿ ಅಣ್ಣಾಮಲೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೊದಲಾದವರು ಜಿಲ್ಲಾದ್ಯಂತ ಪ್ರಥಮ ಹಂತದ ಮತಭೇಟಿ ಪೂರೈಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಕೆಲವು ಶಾಸಕರಿಗೆ ವೈಯಕ್ತಿಕ ಪ್ರಚಾರಕ್ಕಿಂತ ಪಕ್ಷವನ್ನು ಮುನ್ನೆಲೆಯಾಗಿಟ್ಟುಕೊಂಡು ಪ್ರಚಾರ ನಡೆಸಿ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಿ ಎಂಬ ಸೂಚನೆಯನ್ನು ರವಾನಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್‌ ಸಾವಂತ್‌, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಮೊದಲಾದವರ ಪ್ರವಾಸ ಈ ತಿಂಗಳಲ್ಲಿ ನಿಗದಿಯಾಗಿದೆ. ಇದಲ್ಲದೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಜಿಲ್ಲೆಗೆ ಕರೆಸಿ, ಬೃಹತ್‌ ಸಮಾವೇಶ ನಡೆಸುವ ಕುರಿತೂ ಜಿಲ್ಲಾ ಸಮಿತಿ ರಾಜ್ಯದ ವರಿಷ್ಠರಿಗೆ ಮನವಿ ಮಾಡಿದೆ.

ಮೊದಲ ಹಂತದಲ್ಲಿ ಪ್ರಚಾರ ಯಶಸ್ವಿಯಾಗಿ ನೆರವೇರಿದೆ, ಅಭ್ಯರ್ಥಿಗಳ ಹೆಸರುಗಳು ಇನ್ನೂ ಅಂತಿಮ ಗೊಂಡಿಲ್ಲ, ಚುನಾವಣೆ ಘೋಷಣೆ ಹಾಗೂ ಅಭ್ಯರ್ಥಿಗಳ ಘೋಷಣೆ ಬಳಿಕ ಮತ್ತೆ ಮನೆ ಮನೆ ಭೇಟಿ, ರ್ಯಾಲಿ ಇತ್ಯಾದಿಗಳನ್ನು ಹಮ್ಮಿಕೊಳ್ಳುತ್ತೇವೆ.

-ಸುದರ್ಶನ ಎಂ., ಬಿಜೆಪಿ ಜಿಲ್ಲಾಧ್ಯಕ್ಷರು, ದ.ಕ.

ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸುವ ಕಾರ್ಯ ಸದಾ ಮಾಡುತ್ತಿರುತ್ತೇವೆ. ಚುನಾವಣೆಗಾಗಿ ವಿಶೇಷ ತಯಾರಿ ಎಂದೇನೂ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರದ ಸಾಧನೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದೇವೆ.
- ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷರು, ಉಡುಪಿ

 ಸೌವಾಲುಗಳನ್ನು ಸಣ್ಣದೆಂದು ಅವಗಣಿಸುವಂತಿಲ್ಲ

ಈ ಬಾರಿಯೂ ಶಾಸಕರ ವರ್ಚಸ್ಸಿಗಷ್ಟೇ ಪಕ್ಷ ಆತುಕೊಂಡಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರದ ಸಾಧನೆ ಹಾಗೂ ಕಾಂಗ್ರೆಸ್‌ ನ ಗ್ಯಾರಂಟಿ ಕಾರ್ಡ್‌ಗಳ ವಾಸ್ತವವನ್ನು ಜನಕ್ಕೆ ಮನವರಿಕೆ ಮಾಡುವುದರೊಂದಿಗೆ ಬಲವಾಗಿ ಮೋದಿ ಅಲೆಯನ್ನು ನಂಬಿದೆ. ಈ ಹಿಂದೆಯೂ ಮೋದಿ ಅಲೆಯೇ ಕೈ ಹಿಡಿದಿತ್ತು.

ಕೇಡರ್‌ ಕಥೆ
ಸಂಘ ಪರಿವಾರದ ಶಕ್ತಿಯೇ ಬಿಜೆಪಿಗೆ ಸಿಂಹಬಲವಾಗಿರುವಂಥದ್ದು. ಜತೆಗೆ ಪಕ್ಷದ ಕೇಡರ್‌ ವ್ಯವಸ್ಥೆ. ಕೆಲವು ಕ್ಷೇತ್ರ ಹೊರತುಪಡಿಸಿ ಉಳಿದ ಜಿ.ಪಂ., ತಾ.ಪಂ.ನಲ್ಲಿ ಪಕ್ಷದ ಸದಸ್ಯರಿದ್ದರು. ಗ್ರಾ.ಪಂ.ಗಳಲ್ಲೂ ಬಿಜೆಪಿ ಬೆಂಬಲಿತ ಪ್ರತಿನಿಧಿಗಳು ಅಧಿಕಾರದಲ್ಲಿದ್ದಾರೆ. ನಗರಸಭೆ, ಪುರಸಭೆಯಲ್ಲೂ ಪಕ್ಷದ್ದೇ ಆಡಳಿತ. ಬಣ ರಾಜಕೀಯ ಕಡಿಮೆ ಇದ್ದರೂ, ಜಾತಿ ರಾಜಕೀಯ ಚಾಲ್ತಿಯಲ್ಲಿದೆ. ಪಕ್ಷದ ಚಿನ್ಹೆಯಡಿ ಗೆದ್ದು ಬಂದವರೂ ಕಾರ್ಯಕರ್ತರನ್ನು ಮರೆತು ಜಾತಿಗೆ ಮನ್ನಣೆ ನೀಡುತ್ತಾರೆ ಎಂಬ ಟೀಕೆ ಇದೆ. ಕೆಲವೆಡೆ ಭ್ರಷ್ಟಾಚಾರದ ಆರೋಪಗಳೂ ಕೇಳಿಬರುತ್ತಿವೆ. ಇದಕ್ಕೆಲ್ಲ ಮದ್ದು ಕಂಡುಕೊಳ್ಳುವ ಸವಾಲು ಜಿಲ್ಲಾ ಬಿಜೆಪಿ ಘಟಕದ ಮುಂದಿದೆ.

~ವೇಣುವಿನೋದ್‌.ಕೆ.ಎಸ್‌ , ರಾಜು ಖಾರ್ವಿ ಕೊಡೇರಿ

 

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.