ಉಳಿತಾಯ ಬಜೆಟ್ ಮಂಡಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ಕಾವ್ಯಶ್ರೀ
Team Udayavani, Mar 14, 2023, 7:44 PM IST
ಕೊರಟಗೆರೆ; ಪಟ್ಟಣದ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳೊಂದಿಗೆ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಪ.ಪಂ. ಅಧ್ಯಕ್ಷೆ ಕಾವ್ಯಶ್ರೀ ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿಯ 2023-24ನೇ ಸಾಲಿನಲ್ಲಿ ನೀರಿಕ್ಷೆ ಮಾಡಲಾದ ಆದಾಯ ಹಾಗೂ ಖರ್ಚುಗಳ ವಿವರದ ಬಜೆಟ್ ಮಂಡಿಸಿದ ಅವರು 2023 ನೇ ಸಾಲಿನ ನಿರೀಕ್ಷಿತ ಆದಾಯ 2,24,44,876 ಹಾಗೂ ಸರ್ಕಾರದಿಂದ ನಿರೀಕ್ಷಿಸುವ ಆನುದಾನ 14,85,72,255 ಆದಾಯ ಸೇರಿದಂತೆ ಒಟ್ಟು 17,10,17,131 ರೂಗಳ ಆದಾಯವಾಗಿದ್ದು ಒಟ್ಟು ನಿರೀಕ್ಷಿತ ಖರ್ಚು 17,05,76,142 ರೂಗಳಾಗಿದ್ದು 4.40.989 ಉಳಿತಾಯವಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳಲ್ಲಿ ಪುಟ್‌ಬಾತ್ ನಿರ್ಮಾಣ ಕಾವಗಾರಿ ಕೈಗೆತ್ತುಕೊಳ್ಳುವ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ 1,70,00,000 ರೂಗಳನ್ನು ರಸ್ತೆ ಬದಿಯ ಚರಂಡಿ, ಮಳೆ ನೀರು ಚರಂಡಿಗಳ ಕಾಮಗಾರಿಗೆ 2 ಕೋಟಿ, ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗೆ 30 ಲಕ್ಷ ರೂಗಳಲ್ಲಿ ಕಾಮಗಾರಿಗೆ ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಬೆಯಲ್ಲಿದ್ದ ಸದಸ್ಯರು ಮಾತನಾಡಿ ಪಟ್ಟಣದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳು ಕಳಪೆ ಮಟ್ಟದ್ದು ಎಂಬ ಸಾರ್ವಜನಿಕರ ದೂರು ಕೆಳಿಬರುತ್ತಿದ್ದು ಅಧ್ಯಕ್ಷರು ಉಪಾಧ್ಯಕ್ಷರು ಮುಖ್ಯಾಧಿಕಾರಿಗಳೊಂದಿಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಗುತ್ತಿಗೆ ದಾರರಿಗೆ ಉತ್ತಮ ಗಣಮಟ್ಟಕ್ಕೆ ತಾಕೀತು ಮಾಡಬೇಕೆಂದು ಹಾಗೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲವಾದ ಹಿನ್ನೆಲೆಯಲ್ಲಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಬಜೆಟ್ ಮಂಡನೆ ಸಮಯದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭಾಗ್ಯಮ್ಮ ಬಜೆಟ್ ವಿವಿರಗಳನ್ನು ಓದಿ ಮಂಡಿಸಿದ ನಂತರ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುಮೋದಿಸಿದರು. ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಕಾವ್ಯಶ್ರೀ ಸೇರಿದಂತೆ ಉಪಾಧ್ಯಕ್ಷೆ ಕೆ.ವಿ.ಭಾರತಿ, ಸದಸ್ಯರುಗಳಾದ ಎ,ಡಿ.ಬಲರಾಮಯ್ಯ, ಕೆ.ಎನ್.ನಟರಾಜು, ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷ್ಮೀನಾರಾಯಣ್, ಹೆಚ್.ಎಸ್.ಪ್ರದೀಪ್ ಕುಮಾರ್, ಪುಟ್ಟನರಸಪ್ಪ, ನಾಗರಾಜು, ಕೆ.ಎನ್.ನಂದೀಶ್, ಹುಸ್ನಾಫಾರಿಯಾ, ಕೆ.ಓಅನಿತಾ, ಮಂಜುಳಾ, ಎಸ್. ಹೇಮಲತಾ, ನಾಮಿನಿ ಸದಸ್ಯರಾದ ಪ್ರೇಮ್‌ಕುಮಾರ್, ಗೋವಿಂದರಾಜು, ರಂಗನಾಥ್, ಮುಖ್ಯಾಧಿಕಾರಿ ಭಾಗ್ಯಮ್ಮ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಇದನ್ನೂ ಓದಿ: ಹೊಸ ರಾಜ್ಯ ರಚನೆಗೆ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ: ಕೇಂದ್ರ ಸರ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.