ಕ್ರೆಡಿಟ್ ಸೂಸಿಗೆ ನೆರವು; ಸದ್ಯಕ್ಕೆ ಬಿಕ್ಕಟ್ಟಿನಿಂದ ಪಾರು!
Team Udayavani, Mar 17, 2023, 6:57 AM IST
ಜಿನೇವಾ: ಜಗತ್ತಿನ ಎಂಟನೇ ಅತೀದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರೆಡಿಟ್ ಸೂಸಿ ಪತನದ ಭೀತಿಯಿಂದ ಸದ್ಯಕ್ಕೆ ಪಾರಾಗಿದೆ.
ಸ್ವಿಟ್ಸರ್ಲೆಂಡ್ನ ಸೆಂಟ್ರಲ್ ಬ್ಯಾಂಕ್ನಿಂದ 54 ಬಿಲಿಯನ್ ಡಾಲರ್ ವಿತ್ತೀಯ ನೆರವು ಪಡೆದ ಬಳಿಕ ಬ್ಯಾಂಕ್ನ ಷೇರುಗಳು ಚೇತರಿಸಿಕೊಂಡಿವೆ. ಇದರಿಂದಾಗಿ ಆ ಬ್ಯಾಂಕ್ನ ಷೇರುದಾರರು, ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗಿದೆ. ಸಿಲಿಕಾನ್ ವ್ಯಾಲಿ ಮತ್ತು ಸಿಗ್ನೇಚರ್ ಬ್ಯಾಂಕ್ ಪತನದ ಬಳಿಕ ಜ್ಯೂರಿಚ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ರೆಡಿಟ್ ಸೂಸಿ ಬ್ಯಾಂಕ್ ಪತನಗೊಳ್ಳಲಿದೆ ಎಂದು 2008ರಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಭವಿಷ್ಯ ನುಡಿದಿದ್ದ ಆರ್ಥಿಕ ತಜ್ಞ ರಾಬರ್ಟ್ ಕಿಯೋಸಾಕಿ ಮುನ್ನೆಚ್ಚರಿಕೆ ನೀಡಿದ್ದರು. ಇದರಿಂದಾಗಿ ಬುಧವಾರ ಜಗತ್ತಿನ ಷೇರುಪೇಟೆಗಳಲ್ಲಿ ಮತ್ತು ಅರ್ಥ ವ್ಯವಸ್ಥೆಯಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.
ಸ್ವಿಟ್ಸರ್ಲೆಂಡ್ನ ಬ್ಯಾಂಕ್ನ ಷೇರುಗಳ ಏರಿಕೆಯಿಂದಾಗಿ ಐರೋಪ್ಯ ಒಕ್ಕೂಟದ ಹಾಗೂ ಅಮೆರಿಕದ ಕೆಲವು ಬ್ಯಾಂಕ್ಗಳ ಷೇರುಗಳು ಬೇಡಿಕೆ ಪಡೆದುಕೊಂಡಿವೆ. ದ ಸ್ಟಾಕ್ ಯುರೋಪ್ನ ಸೂಚ್ಯಂಕ ಗುರುವಾರ ಶೇ.0.8ರಷ್ಟು ಏರಿಕೆ ಕಾಣಲು ಸಾಧ್ಯವಾಯಿತು. ಅದಕ್ಕೆ ಪೂರಕವಾಗಿ ಸ್ವಿಟ್ಸರ್ಲೆಂಡ್ ಸರಕಾರದ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಅಲ್ಪ ವಿರಾಮ ಕಂಡಿರುವ ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸಿ, ಪರಾಮರ್ಶೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.