ಚಂದನವನಕ್ಕೆ ಬಂದ ವಿಕ್ರಮ್ ಬೆಡಗಿ ಸ್ವಾತಿಷ್ಠ ಕೃಷ್ಣನ್
Team Udayavani, Mar 17, 2023, 12:08 PM IST
ಸಿಂಪಲ್ ಸುನಿ ನಿರ್ದೇಶನದ, ವಿನಯ್ ರಾಜಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ “ಒಂದು ಸರಳ ಪ್ರೇಮಕಥೆ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇನ್ನು ಈ ಸಿನಿಮಾದ ಮೂಲಕ ಸ್ವಾತಿಷ್ಠ ಕೃಷ್ಣನ್ ಎಂಬ ನವ ನಾಯಕ ನಟಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಯಾರು ಈ ಸ್ವಾತಿಷ್ಠ ಕೃಷ್ಣನ್? ಎಂಬ ಪ್ರಶ್ನೆಗೆ ಉತ್ತರ, ತಮಿಳಿನ ಸೂಪರ್ ಹಿಟ್ ಸಿನಿಮಾ “ವಿಕ್ರಮ್’. ಹೌದು, ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡ ಕಮಲ್ ಹಾಸನ್ ಅಭಿನಯ ಮತ್ತು ನಿರ್ದೇಶನದ “ವಿಕ್ರಮ್’ ಸಿನಿಮಾದಲ್ಲಿ ಕಾಣಿಸಿಕೊಂಡು, ತೆರೆಮೇಲೆ ಮಿಂಚಿದ್ದ ನಟಿಯೇ ಸ್ವಾತಿಷ್ಠ ಕೃಷ್ಣನ್ ಮೊದಲ ಸಿನಿಮಾದಲ್ಲಿಯೇ ಸಿನಿಮಂದಿಯ ಗಮನ ಸೆಳೆದಿದ್ದ ಸ್ವಾತಿಷ್ಠ ಕೃಷ್ಣನ್, ಈಗ ಚಂದನವನಕ್ಕೆ ಅಡಿಯಿಡುತ್ತಿದ್ದಾರೆ.
ಅಂದಹಾಗೆ, ಅನೇಕರು ಸ್ವಾತಿಷ್ಠ ಕೃಷ್ಣನ್ ಎಂಬ ಹೆಸರು ಹೇಳಿದೊಡನೆ ಈಕೆ ಬೇರೆ ಭಾಷೆಯ ನಟಿ ಎಂದು ಭಾವಿಸಬಹುದು. ಆದರೆ ಸದ್ಯ ತಮಿಳಿನಲ್ಲಿ ಮಿಂಚುತ್ತಿರುವ ಸ್ವಾತಿಷ್ಠ ಕೃಷ್ಣನ್, ಅಪ್ಪಟ ಕನ್ನಡದ ಹುಡುಗಿ ಎಂದರೆ ನೀವು ನಂಬಲೇಬೇಕು. ಮೂಲತಃ ಸ್ವಾತಿಷ್ಠ ಪೋಷಕರು ಕನ್ನಡದವರಾಗಿದ್ದು, ಇಂದಿಗೂ ಸ್ವಾತಿಷ್ಠ ಮತ್ತು ಅವರ ಕುಟುಂಬ ಇಂದಿಗೂ ಕರ್ನಾಟಕದ ಜೊತೆಗೆ ನಂಟು ಇಟ್ಟುಕೊಂಡಿದೆ. ಸ್ವಾತಿಷ್ಠ ಕೂಡ ಅಚ್ಚ ಕನ್ನಡದಲ್ಲಿ ಸ್ವತ್ಛವಾಗಿ ಮಾತನಾಡುತ್ತಾರೆ.
ಇನ್ನು ತಮಿಳಿನಲ್ಲಿ ಗುರುತಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಬಗ್ಗೆ ಮಾತನಾಡುವ ಸ್ವಾತಿಷ್ಠ ಕೃಷ್ಣನ್, “ಕನ್ನಡದಲ್ಲಿ ಒಂದು ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಅಭಿನಯಿಸಬೇಕು, ಎನ್ನುತ್ತಿರುವಾಗಲೇ “ಒಂದು ಸರಳ ಪ್ರೇಮಕಥೆ’ ಸಿನಿಮಾದ ಅವಕಾಶ ಸಿಕ್ಕಿತು. ನಿರ್ದೇಶಕ ಸಿಂಪಲ್ ಸುನಿ ಹೇಳಿದ ಕಥೆ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಯಿತು. ಸಾಕಷ್ಟು ಪ್ರಾಮುಖ್ಯತೆ ಇರುವ ಮತ್ತು ಅಭಿನಯಕ್ಕೆ ತುಂಬಾ ಸ್ಕೋಪ್ ಇರುವಂಥ ಪಾತ್ರ “ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿದೆ. ಹಾಗಾಗಿ ಸಿನಿಮಾದ ಸಬ್ಜೆಕ್ಟ್ ಕೇಳುತ್ತಿದ್ದಂತೆ, ಖುಷಿಯಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎನ್ನುತ್ತಾರೆ.
ತಮ್ಮ ಚೊಚ್ಚಲ ಕನ್ನಡ ಚಿತ್ರದ ಪಾತ್ರದ ಬಗ್ಗೆ ಮಾತನಾಡುವ ಸ್ವಾತಿಷ್ಠ, “ಇದೊಂದು ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾದ. ಸಿನಿಮಾದ ಹೆಸರೇ ಹೇಳುವಂತೆ, “ಒಂದು ಸರಳ ಪ್ರೇಮಕಥೆ’ಯನ್ನು ಮನಮುಟ್ಟುವಂತೆ ತೆರೆಮೇಲೆ ತರಲಾಗುತ್ತಿದೆ. ಇದರಲ್ಲಿ ನಾನು ಮೊದಲ ಬಾರಿಗೆ ವಿನಯ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗಿಯಾಗಿ ಅನು ಎಂಬ ಹೆಸರಿನ ಜರ್ನಲಿಸ್ಟ್ ಪಾತ್ರ ನನ್ನದು’ ಎಂದು ಪಾತ್ರ ಪರಿಚಯ ಮಾಡಿಕೊಡುತ್ತಾರೆ.
ಈಗಾಗಲೇ “ಒಂದು ಸರಳ ಪ್ರೇಮಕಥೆ’ ಸಿನಿಮಾದ ಮುಹೂರ್ತ ನಡೆದಿದ್ದು, ಸದ್ದಿಲ್ಲದೆ ಶೂಟಿಂಗ್ ಕೆಲಸಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಸ್ವಾತಿಷ್ಠ ಕೂಡ ಸಿನಿಮಾದ ಎರಡು ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. “ನಿರ್ದೇಶಕ ಸುನಿ ತುಂಬ ಚೆನ್ನಾಗಿ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಒಳ್ಳೆಯ ಹ್ಯೂಮರಸ್ ಸಬೆjಕ್ಟ್ ಈ ಸಿನಿಮಾದಲ್ಲಿದೆ. ನನ್ನ ಮೊದಲ ಕನ್ನಡ ಸಿನಿಮಾದ ಮೇಲೆ ಸಹಜವಾಗಿಯೇ ನನಗೆ ಸಾಕಷ್ಟು ನಿರೀಕ್ಷೆಯಿದೆ. ನಾನು ಕೂಡ ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದೇನೆ. ಈ ವರ್ಷದ ಕೊನೆಯೊಳಗೆ ನನ್ನ ಮೊದಲ ಕನ್ನಡ ಸಿನಿಮಾ ತೆರೆಗೆ ಬರೋದು ಪಕ್ಕಾ’ ಎಂಬ ಭರವಸೆಯ ಮಾತು ಸ್ವಾತಿಷ್ಠ ಕೃಷ್ಣನ್ ಅವರದ್ದು.
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.