ಚುನಾವಣೆಯಲ್ಲಿ ಬಿಎಲ್‌ಒಗಳ ಸೇವೆ ಅಮೂಲ್ಯ: ಸಿದ್ನಾಳ
ಶಿಕ್ಷಕರ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಂದ ಚುನಾವಣೆಯ ಕಾರ್ಯ ಪರಿಪೂರ್ಣವಾಗುತ್ತದೆ
Team Udayavani, Mar 18, 2023, 2:25 PM IST
ರಬಕವಿ-ಬನಹಟ್ಟಿ: ಚುನಾವಣೆಯ ಆರಂಭ ಬೂತ್ ಮಟ್ಟದ ಅಧಿಕಾರಿಗಳಿಂದ ಆರಂಭವಾಗುತ್ತದೆ. ಆದ್ದರಿಂದ ಮತದಾನ ಪ್ರಕ್ರಿಯೆ ಯಶಸ್ವಿಯಾಗುವಲ್ಲಿ ಬಿಎಲ್‌ಓ ಮತ್ತು ಶಿಕ್ಷಕರ ಸೇವೆ ಅಮೂಲ್ಯವಾದುದು.
ಮತದಾರರು ಸ್ವಯಃ ಪ್ರೇರಿತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಅರಿವು ಮೂಡಿಸುವ ಮಹತ್ವದ ಕಾರ್ಯವನ್ನು ಬೂತ್ ಮಟ್ಟದ ಅಧಿಕಾರಿಗಳು ನೆರವೇರಿಸಬೇಕು ಎಂದು ರಬಕವಿ ಬನಹಟ್ಟಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಹೇಳಿದರು.
ನಗರದ ಭದ್ರನವರ ಕಲ್ಯಾಣ ಮಂಟಪದಲ್ಲಿ ರಬಕವಿ ಬನಹಟ್ಟಿ ತಾಲೂಕು ಸ್ವೀಪ್ ಸಂಸ್ಥೆಯ ಆಶ್ರಯದಲ್ಲಿ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರ ಮತ್ತು ಬಿಎಲ್‌ಒ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಮಹತ್ವ ಮತ್ತು ಪ್ರಬುದ್ಧ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಬಿಎಲ್‌ಓಗಳು ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ತಾಲ್ಲೂಕಿನ ಸೆಕ್ಟರ್ ಅಧಿಕಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವಿದ್ಯುನ್ಮಾನ ಮತಯಂತ್ರಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ರಾಜ್ಯದ ಮತದಾನಕ್ಕಿಂತ ಹೆಚ್ಚಿನ ಸರಾಸರಿ ಮತದಾನ ಬೂತ್ ಮಟ್ಟದಲ್ಲಿ ನಡೆಯುವಂತೆ ಬೂತ್ ಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಂದ ಚುನಾವಣೆಯ ಕಾರ್ಯ ಪರಿಪೂರ್ಣವಾಗುತ್ತದೆ ಎಂದರು.
ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಅಶೋಕ ಗುಡಿಮನಿ ಮಾತನಾಡಿ, ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ತಮ್ಮ ಜವಾಬ್ದಾರಿ ಅರಿತು ನಡೆದುಕೊಂಡರೆ ಚುನಾವಣೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಮಾಸ್ಟರ್ ಟ್ರೇನರ್ ಶಿವಾಜಿ ನಾಯಕ ಮಾತನಾಡಿದರು.
ಸಭೆಯಲ್ಲಿ ಚುನಾವಣೆಯ ಮಾಸ್ಟರ್ ಟ್ರೇನರ್‌ಗಳಾದ ಡಿ.ಎಚ್.ಮುಜಾವರ, ಬಿ.ಎಸ್.ಕೋಲಾಕರ್, ಎ,ಎಂ. ಡಾಂಗೆ, ಎಮ್.ಎ.ನಾಯಿಕವಾಡಿ, ಎಸ್.ಬಿ.ಬುರ್ಲಿ
ಎಚ್.ವೈ. ಆಲಮೇಲ ಮತ್ತು ಬಿ.ಎಲ್.ಜಂಬಗಿ, ಆಲ್ಯಾಳ ಮತದಾನದ ಕುರಿತು ತಿಳಿಸಿದರು. ಸದಾಶಿವ ಕುಂಬಾರ, ಚಂದ್ರಶೇಖರ ಬಶೆಟ್ಟಿ ಮೈತ್ರಾ ಕತ್ತಿ, ವಿ.ಎಸ್.ಕಂಕಣವಾಡಿ, ಎನ್.ಎಂ.ಜವಳಗಿ, ಟಿ.ಕೆ,ಮಾಲಾಪುರ, ಎ.ಎಸ್.ಹಿರೇಮಠ, ಎಂ.ಎಂ. ಡುಮಕಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.