ಗುರುವಾಯೂರ್ ದೇವಸ್ಥಾನದ ‘ಮೇಲ್ಶಾಂತಿ’ ಆಗಿ ಆಯ್ಕೆಯಾದ ಆಯುರ್ವೇದ ವೈದ್ಯ
Team Udayavani, Mar 19, 2023, 4:36 PM IST
ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯೂರ್ ದೇವಾಲಯದ ಮುಂದಿನ ಪ್ರಧಾನ ಅರ್ಚಕ ಅಥವಾ ‘ಮೇಲ್ಶಾಂತಿ’ ಆಗಿ ಡಾ. ತೊಟ್ಟಂ ಶಿವಕರನ್ ನಂಬೂದಿರಿ ಆಯ್ಕೆಯಾಗಿದ್ದಾರೆ.
ಕೇರಳ ಶೈಲಿಯ ‘ಜೈಮಿನಿಯ ಸಾಮವೇದ’ ಪಠಣದ ಅಧಿಕಾರವು ಐವತ್ತೇಳು ವರ್ಷ ವಯಸ್ಸಿನ ಡಾ. ತೊಟ್ಟಂ ಶಿವಕರನ್ ನಂಬೂದಿರಿ ಅವರಿಗೆ ದೊರಕಿದೆ. ಜೈಮಿನಿಯ ಸಾಮವೇದದ ಕೇರಳ ಶೈಲಿಯ ಪಠಣದ ಉಳಿದ ಇಬ್ಬರಲ್ಲಿ ಇವರು ಒಬ್ಬರು. ಇದು 1970 ರ ದಶಕದಲ್ಲಿ ಕಣ್ಮರೆಯಾಗುವ ಅಂಚಿನಲ್ಲಿದ್ದ ರಾಜ್ಯದಲ್ಲಿ ಸಾಮವೇದ ಪಠಣದ ಶತಮಾನಗಳ ಹಳೆಯ ಸಂಪ್ರದಾಯವಾಗಿದೆ.
ಶಿವಕರನ್ ನಂಬೂದಿರಿ ಅವರು ಹಳ್ಳಿಯೊಂದರಲ್ಲಿ ‘ಗುರುಕುಲಂ’ ಅನ್ನು ಪ್ರಾರಂಭಿಸುವ ಮೂಲಕ ಅದರ ವಿಶಿಷ್ಟ ಮೌಖಿಕ ಸಂಪ್ರದಾಯವನ್ನು ಸಂರಕ್ಷಿಸುವ ಉದ್ದೇಶವಾಗಿಟ್ಟುಕೊಂಡಿದ್ದಾರೆ.
ಜೈಮಿನಿಯ ಸಾಮವೇದವು ಋಗ್ವೇದ ಮತ್ತು ಇತರ ಮೂಲಗಳಿಂದ 1,700 ಸ್ತೋತ್ರಗಳ ಸಂಗೀತ ವ್ಯವಸ್ಥೆಗಳನ್ನು ಹೊಂದಿದೆ ಮತ್ತು ಪ್ರಸ್ತುತವಾಗಿ ಪಠಣ ಮಾಡುವ ಕಣ್ಮರೆಯಾಗುತ್ತಿ ವಿಶಿಷ್ಟ ಸಂಪ್ರದಾಯದ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದಿರುವ ವ್ಯಕ್ತಿಗಳು ಕೇವಲ ಇಬ್ಬರು ಮಾತ್ರ.
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ನಂಬೂದಿರಿ ಅವರ ಕುಟುಂಬ ಮತ್ತು ತ್ರಿಶ್ಶೂರ್ ಜಿಲ್ಲೆಯ ಅವರ ಸಾಂಪ್ರದಾಯಿಕ ಗ್ರಾಮ ಪಂಜಾಲ್‌ನಿಂದ ಶ್ರೀಕೃಷ್ಣನ ರೂಪಗಳಲ್ಲಿ ಒಂದಾದ ಗುರುವಾಯೂರಪ್ಪನಿಗೆ ಸಮರ್ಪಿತವಾದ ದೇವಾಲಯದ ಪ್ರಧಾನ ಅರ್ಚಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಕಮ್ಯುನಿಸ್ಟ್ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಇಎಂಎಸ್ ನಂಬೂದಿರಿಪಾಡ್ ಅವರ ದೂರದ ಸಂಬಂಧಿಯೂ ಹೌದು.
“ಚೀಟಿಗಳ ಡ್ರಾ ಮೂಲಕ ನನ್ನನ್ನು ಪ್ರಧಾನ ಅರ್ಚಕನನ್ನಾಗಿ ಆಯ್ಕೆ ಮಾಡಲಾಯಿತು. ನಾನು ಏಪ್ರಿಲ್ 1 ರಿಂದ ಅಧಿಕಾರ ವಹಿಸಿಕೊಳ್ಳುತ್ತೇನೆ. ಮಾರ್ಚ್ 20 ರಿಂದ ನಾನು 12 ದಿನಗಳ ಕಾಲ ದೇವಸ್ಥಾನದಲ್ಲಿ ಇರಬೇಕು”ಎಂದು ಡಾ.ನಂಬೂದಿರಿ ಹೇಳಿದರು.
ಗುರುವಾಯೂರ್ ದೇವಸ್ಥಾನದ ಪ್ರಸ್ತುತ ‘ಮೇಲ್ಶಾಂತಿ’ ಯುಟ್ಯೂಬರ್, ಗಾಯಕ ಮತ್ತು ವ್ಲಾಗರ್, ಆಯುರ್ವೇದ ವೈದ್ಯರೂ ಆಗಿರುವ ಮೂವತ್ತನಾಲ್ಕು ವರ್ಷದ ಡಾ ಕಿರಣ್ ಆನಂದ್ ಕಕ್ಕಡ್ ಅವರಾಗಿದ್ದಾರೆ.ಅವರು ದೇವಾಲಯದ ಪ್ರಧಾನ ಅರ್ಚಕರಾಗಿ ಆಯ್ಕೆಯಾಗುವ ಮೊದಲು ಆರು ವರ್ಷಗಳ ಕಾಲ ಮಾಸ್ಕೋದ ರಷ್ಯಾದ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುರ್ವೇದ ಔಷಧವನ್ನು ಅಭ್ಯಾಸ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.