ವಿಶ್ವದ ಮೂಲೆ ಮೂಲೆಗೂ ಶೀಘ್ರವೇ ಬಾಹ್ಯಾಕಾಶ ಆಧರಿತ ಅಂತರ್ಜಾಲ ಸೇವೆ
ಇದೇ 26ರಂದು ಇಸ್ರೋದಿಂದ 36 ಒನ್‌ವೆಬ್ ಉಪಗ್ರಹ ಉಡಾವಣೆ
Team Udayavani, Mar 20, 2023, 7:40 AM IST
ನವದೆಹಲಿ:ಬಾಹ್ಯಾಕಾಶದಿಂದ ಜಗತ್ತಿನ ಮೂಲೆ ಮೂಲೆಗೂ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳು ಸಿಗುವಂಥ ಸಮಯ ಸದ್ಯದಲ್ಲೇ ಬಂದೊದಗಲಿದೆ.
ಭಾರ್ತಿ ಎಂಟರ್‌ಪ್ರೈಸ್ ಬೆಂಬಲದೊಂದಿಗೆ ಒನ್‌ವೆಬ್ ಕಂಪನಿಯು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು ಭೂಮಿಯ ಕೆಳಕಕ್ಷೆಯಲ್ಲಿರುವ ಸುಮಾರು 600 ಉಪಗ್ರಹಗಳ ಪುಂಜವನ್ನು ರೂಪಿಸುವ ಪ್ರಕ್ರಿಯೆಗೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿಯಿದೆ.
ಮಾ.26ರಂದು ಇಸ್ರೋ ತನ್ನ ಮಾರ್ಕ್-3(ಎಲ್‌ವಿಎಂ3) ಬಾಹ್ಯಾಕಾಶ ನೌಕೆಯ ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಒನ್‌ವೆಬ್ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದರಿಂದಾಗಿ ಯುನೈಟೆಡ್ ಕಿಂಗ್‌ಡಂ ಮೂಲದ ಒನ್‌ವೆಬ್ ಕಂಪನಿಯು ಈಗಾಗಲೇ ರೂಪಿಸಿರುವ 582 ಉಪಗ್ರಹಗಳ ಪುಂಜಕ್ಕೆ ಮತ್ತೆ 36 ಉಪಗ್ರಹಗಳು ಸೇರ್ಪಡೆಯಾದಂತಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಒನ್‌ವೈಬ್ ವಕ್ತಾರರು, “ಜಾಗತಿಕ ಕವರೇಜ್‌ನ ಕನಸು ಈಡೇರಿಸಲು ಇನ್ನೊಂದು ಹೆಜ್ಜೆಯಷ್ಟೇ ಬಾಕಿಯಿದೆ. ಇಸ್ರೋ/ಎನ್‌ಎಸ್‌ಐಎಲ್ ಮಾಡುವ ಕೊನೆಯ ಉಡಾವಣೆಯು ಬಾಹ್ಯಾಕಾಶದಲ್ಲಿ ಸುಮಾರು 600 ಉಪಗ್ರಹಗಳ ಸಮೂಹ ಸೃಷ್ಟಿಗೆ ನೆರವಾಗಲಿದೆ.
ಇದು ಪೂರ್ಣಗೊಂಡರೆ ನಮ್ಮ ಗುರಿಯೂ ಪೂರ್ಣಗೊಂಡಂತೆ’ ಎಂದಿದ್ದಾರೆ. ಸ್ಪೇಸ್ ಎಕ್ಸ್‌ನ ಫಾಲ್ಕನ್-9 ರಾಕೆಟ್ ಮಾ.9ರಂದು 40 ಒನ್‌ವೆಬ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಒನ್‌ವೆಬ್ ಎನ್ನುವುದು ತನ್ನ ಉಪಗ್ರಹಗಳ ಪುಂಜದ ಮೂಲಕ ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.