ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ: ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಜಯಭೇರಿ
Team Udayavani, Mar 21, 2023, 5:09 AM IST
ವೆಲ್ಲಿಂಗ್ಟನ್: ಶ್ರೀಲಂಕಾ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 58 ರನ್ನುಗಳಿಂದ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ 2-0 ಅಂತರದಿಂದ ಕ್ಲೀನ್ ಸ್ವೀಪ್ ಆಗಿ ಸರಣಿಯನ್ನು ವಶಪಡಿಸಿಕೊಂಡಿದೆ.
416 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾದ ಮೇಲೆ ಕಿವೀಸ್ ಫಾಲೋಆನ್ ಹೇರಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಸಂಘಟಿಸಿತಾದರೂ ಇನ್ನಿಂಗ್ಸ್ ಸೋಲಿನ ಸಂಕಟದಿಂದ ಪಾರಾಗಲು ಸಾಧ್ಯವಾಗಲಿಲ್ಲ. 358ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
50 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕುಸಲ್ ಮೆಂಡಿಸ್ ಅದೇ ಮೊತ್ತಕ್ಕೆ ಔಟಾಗುವುದರೊಂದಿಗೆ ಲಂಕೆ 4ನೇ ದಿನದ ಆರಂಭದಲ್ಲೇ ಆಘಾತಕ್ಕೆ ಸಿಲುಕಿತು. ದಿನೇಶ್ ಚಂಡಿಮಾಲ್ 62, ಧನಂಜಯ ಡಿಸಿಲ್ವ 98 ರನ್ ಬಾರಿಸಿ ಸೋಲನ್ನು ತುಸು ಮುಂದೂಡಿದರು. ಇವರಿಂದ 5ನೇ ವಿಕೆಟಿಗೆ 126 ರನ್ ಹರಿದು ಬಂತು.
ನಾಯಕ ಟಿಮ್ ಸೌಥಿ ಮತ್ತು ಬ್ಲೇರ್ ಟಿಕ್ನರ್ ತಲಾ 3 ವಿಕೆಟ್, ಮೈಕಲ್ ಬ್ರೇಸ್‌ವೆಲ್ 2 ವಿಕೆಟ್ ಉರುಳಿಸಿದರು. ಹೆನ್ರಿ ನಿಕೋಲ್ಸ್ ಪಂದ್ಯಶ್ರೇಷ್ಠ, ಕೇನ್ ವಿಲಿಯಮ್ಸನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಎರಡೂ ತಂಡಗಳಿನ್ನು 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-4 ವಿಕೆಟಿಗೆ 580 ಡಿಕ್ಲೇರ್. ಶ್ರೀಲಂಕಾ-164 ಮತ್ತು 358 (ಧನಂಜಯ 98, ಚಂಡಿಮಾಲ್ 62, ಕರುಣಾರತ್ನೆ 51, ಮೆಂಡಿಸ್ 50, ಸೌಥಿ 51ಕ್ಕೆ 3, ಟಿಕ್ನರ್ 84ಕ್ಕೆ 3, ಮೈಕಲ್ ಬ್ರೇಸ್‌ವೆಲ್ 100ಕ್ಕೆ 2).
ಪಂದ್ಯಶ್ರೇಷ್ಠ: ಹೆನ್ರಿ ನಿಕೋಲ್ಸ್. ಸರಣಿಶ್ರೇಷ್ಠ: ಕೇನ್ ವಿಲಿಯಮ್ಸನ್.
“ಟೆಸ್ಟ್ ನಾಯಕತ್ವ ಸಾಕು’
ನ್ಯೂಜಿಲ್ಯಾಂಡ್ ಎದುರಿನ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ಕಳೆದುಕೊಂಡ ಬಳಿಕ ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿಮುತ್ ಕರುಣಾರತ್ನೆ ಈ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಐರ್ಲೆಂಡ್ ವಿರುದ್ಧ ತವರಲ್ಲಿ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದೊಡನೆ ನಾಯಕತ್ವ ಬಿಡುವುದಾಗಿ ಹೇಳಿದರು.
2019ರಲ್ಲಿ ಕರುಣಾರತ್ನೆ ಶ್ರೀಲಂಕಾ ಟೆಸ್ಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಒಟ್ಟು 26 ಟೆಸ್ಟ್ ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 10 ಜಯ, 10 ಸೋಲು, 6 ಡ್ರಾ ಇವರ ಸಾಧನೆ. ನಾಯಕನಾಗಿ ಆಯ್ಕೆಯಾದ ಮೊದಲ ಸರಣಿಯಲ್ಲೇ ದಕ್ಷಿಣ ಆಫ್ರಿಕಾವನ್ನು ಅವರದೇ ನೆಲದಲ್ಲಿ 2-0 ಅಂತರದಿಂದ ಮಣಿಸಿದ್ದು ಇವರ ಅಮೋಘ ಸಾಧನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.